ಬಂಟ್ವಾಳದಲ್ಲಿ ಜನಪ್ರತಿನಿಧಿಗಳೊಂದಿಗೆ ಪೊಲೀಸರ ಒರಟು ವರ್ತನೆ : ಜನತಾ ಕಫ್ರ್ಯೂವನ್ನು ದಬ್ಬಾಳಿಕೆ ಮಾಡ ಹೊರಟ ಪೊಲೀಸರ ವಿರುದ್ದ ಆಕ್ರೋಶ - Karavali Times ಬಂಟ್ವಾಳದಲ್ಲಿ ಜನಪ್ರತಿನಿಧಿಗಳೊಂದಿಗೆ ಪೊಲೀಸರ ಒರಟು ವರ್ತನೆ : ಜನತಾ ಕಫ್ರ್ಯೂವನ್ನು ದಬ್ಬಾಳಿಕೆ ಮಾಡ ಹೊರಟ ಪೊಲೀಸರ ವಿರುದ್ದ ಆಕ್ರೋಶ - Karavali Times

728x90

25 March 2020

ಬಂಟ್ವಾಳದಲ್ಲಿ ಜನಪ್ರತಿನಿಧಿಗಳೊಂದಿಗೆ ಪೊಲೀಸರ ಒರಟು ವರ್ತನೆ : ಜನತಾ ಕಫ್ರ್ಯೂವನ್ನು ದಬ್ಬಾಳಿಕೆ ಮಾಡ ಹೊರಟ ಪೊಲೀಸರ ವಿರುದ್ದ ಆಕ್ರೋಶ



ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ಕಳೆದ ಸೋಮವಾರದಿಂದ ಲಾಕ್ ಡೌನ್ ಜಾರಿಯಲ್ಲಿದ್ದು, ಜನ ಅಗತ್ಯ ಸೇವೆಗಳ ಬಳಕೆಗೆ ಹೊರತುಪಡಿಸಿ ಮನೆಯಿಂದ ಹೊರ ಬರದೆ ಸರಕಾರ ಹಾಗೂ ಪ್ರಧಾನಿ ಮೋದಿ ಅವರ ಘೋಷಣೆಗೆ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿದ್ದಾರೆ.


ಆದರೆ ಬಂಟ್ವಾಳದಲ್ಲಿ ಹೊಸದಾಗಿ ನೇಮಕಗೊಂಡ ಕೆಲ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಜನರೊಂದಿಗೆ ಸಹಿತ ಜನಪ್ರತಿನಿಧಿಗಳೊಂದಿಗೂ ಉಡಾಫೆ ಹಾಗೂ ಒರಟು ವರ್ತನೆ ಪ್ರದರ್ಶಿಸುವ ಮೂಲಕ ಜನತಾ ಕಫ್ರ್ಯೂವನ್ನು ಪೊಲೀಸ್ ದಬ್ಬಾಳಿಕೆ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ ಎಂದು ಜನಪ್ರತಿನಿಧಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಬಂಟ್ವಾಳ ನಗರ ಠಾಣೆಯ ಅಪರಾಧ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪಿಎಸ್ಸೈ ಸಂತೋಷ್ ಅವರಂತೂ ಮನೆ ಬಾಗಿಲಲ್ಲಿ ಜನ ನಿಂತುಕೊಂಡರೂ ಅಲ್ಲಿಗೆ ಬಂದು ತಮ್ಮ ಒರಟು ವರ್ತನೆಯನ್ನು ತೋರುತ್ತ ಲಾಠಿ ಝಳಪಿಸುತ್ತಿದ್ದಾರೆ ಹಾಗೂ ಅಲೆಮಾರಿ ಹಾಗೂ ಪ್ರವಾಸಿ ಜನ ಮನೆಯೇ ಇಲ್ಲದೆ ರಸ್ತೆ ಬದಿಯಲ್ಲಿ ನಿಂತುಕೊಂಡಿರುವ ವೇಳೆಯೂ ಅವರೊಂದಿಗೆ ಪರಿಸ್ಥಿತಿ ತಿಳಿದುಕೊಳ್ಳುವ ಗೋಜಿಗೆ ಹೋಗದೆ ತಮ್ಮ ಖಾಕಿ ದರ್ಪ ಮೆರೆಯುತ್ತಿದ್ದಾರೆ ಎಂದು ಜನ ಹಾಗೂ ಜನಪ್ರತಿನಿಧಿಗಳು ಆರೋಪಿಸುತ್ತಾರೆ.

ಈಗಾಗಲೇ ಬಂಟ್ವಾಳದಲ್ಲಿ ಡಿವೈಎಸ್ಪಿ ವೆಲೆಂಟೈನ್ ಡಿಸೋಜ, ಇನ್ಸ್‍ಪೆಕ್ಟರ್ ಟಿ ಡಿ ನಾಗರಾಜ್, ಬಂಟ್ವಾಳ ನಗರ ಹಾಗೂ ಗ್ರಾಮಾಂತರ ಎಸೈಗಳಾದ ಅವಿನಾಶ್ ಹಾಗೂ ಪ್ರಸನ್ನ ಅವರು ಜನರೊಂದಿಗೆ ಬೆರೆತು ಹೊಂದಿಕೊಂಡು ಬಹಳಷ್ಟು ತಾಳ್ಮೆ ಹಾಗೂ ಜವಾಬ್ದಾರಿಯುತವಾಗಿ ವರ್ತಿಸುವ ಮೂಲಕ ಜನತಾ ಕಫ್ರ್ಯೂ ಯಶಸ್ವಿಗೊಳಿಸುವ ಮೂಲಕ ಕೊರೋನಾ ಮಾರಕ ವೈರಸ್ಸನ್ನು ಹಿಮ್ಮೆಟ್ಟಿಸಲು ಶತಾಯಗತಾಯ ಪ್ರಯತ್ನದಲ್ಲಿರುವಾಗ ಠಾಣೆಗೆ ಹೊಸದಾಗಿ ನಿಯುಕ್ತಿಗೊಂಡ ಹಾಗೂ ಪ್ರೊಬೆಷನರಿ ಹಂತದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲ ಅಧಿಕಾರಿ ಹಾಗೂ ಸಿಬ್ಬಂದಿಗಳು ಜನರ ಮೂಲಭೂತ ಅವಶ್ಯಕತೆಗಳನ್ನು ಅರ್ಥೈಸುವ ಗೋಜಿಗೆ ಹೋಗದೆ ನೇರವಾಗಿ ಮಾತಿಗಿಳಿದು, ಲಾಠಿ ಝಳಪಿಸುವುದಲ್ಲದೆ ದರ್ಪ ಹಾಗೂ ದಬ್ಬಾಳಿಕೆ ಮಾಡ ಹೊರಟಿರುವುದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಅಸಮಾಧಾನಕ್ಕೆ ಕಾರಣವಾಗಿದೆ.

ಕೊರೋನಾ ಸೋಂಕು ಮಹಾಮಾರಿಯಾಗಿ ಜಗತ್ತಿನಾದ್ಯಂತ ಹರಡುತ್ತಿದ್ದು, ಸರಕಾರಗಳು, ಪ್ರಧಾನಿ, ಮುಖ್ಯಮಂತ್ರಿಗಳಷ್ಟೆ ಕಾಳಜಿ ಜನಸಾಮಾನ್ಯರಿಗೂ ಇದೆ. ಆದರೆ ಜನ ಸೋಂಕು ನಿಯಂತ್ರಣದ ಹಿನ್ನಲೆಯಲ್ಲಿ ತಮ್ಮ ಮೂಲಭೂತ ಅವಶ್ಯಕತೆಗಳನ್ನು ಪೂರೈಸದೆ ಇರಲು ಸಾಧ್ಯವಿಲ್ಲ. ಜನರ ಎಲ್ಲಾ ಅವಶ್ಯಕತೆಗಳನ್ನು ಪೊಲೀಸರು ಮನೆ ಬಾಗಿಲಿಗೆ ತಲುಪಿಸಿ ಇಂತಹ ದೌರ್ಜನ್ಯ ರೀತಿಯ ವರ್ತನೆ ತೋರಿದರೆ ಅದನ್ನು ಒಪ್ಪಿಕೊಂಡು ಪ್ರತಿ ನಿಮಿಷವೂ ಮನೆಯಲ್ಲೇ ಕೂರಬಹುದು. ಆದರೆ ಇದ್ಯಾವುದನ್ನೂ ಮನಗಾಣದೆ, ವಾರ್ಡಿನ ಜನರ ಆಶೋತ್ತರಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸಂಚರಿಸುವ ಜನಪ್ರತಿನಿಧಿಗಳನ್ನು ಅರ್ಧ ದಾರಿಯಲ್ಲಿ ತಡೆ ಹಿಡಿದು ಸಹಜ ಪೊಲೀಸ್ ಪದಗಳ ಮೂಲಕ ನಿಂದಿಸಿ ದರ್ಪ ತೋರುವುದನ್ನು ಮಾತ್ರ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಬಂಟ್ವಾಳದ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳದಲ್ಲಿ ಜನಪ್ರತಿನಿಧಿಗಳೊಂದಿಗೆ ಪೊಲೀಸರ ಒರಟು ವರ್ತನೆ : ಜನತಾ ಕಫ್ರ್ಯೂವನ್ನು ದಬ್ಬಾಳಿಕೆ ಮಾಡ ಹೊರಟ ಪೊಲೀಸರ ವಿರುದ್ದ ಆಕ್ರೋಶ Rating: 5 Reviewed By: karavali Times
Scroll to Top