ಹೋಮ್ ಕ್ವಾರೆಂಟೈನ್‍ನಲ್ಲಿರುವವನ್ನು ಕೆಟ್ಟದಾಗಿ ಕಾಣಬೇಡಿ : ಮೋದಿ ಮನವಿ - Karavali Times ಹೋಮ್ ಕ್ವಾರೆಂಟೈನ್‍ನಲ್ಲಿರುವವನ್ನು ಕೆಟ್ಟದಾಗಿ ಕಾಣಬೇಡಿ : ಮೋದಿ ಮನವಿ - Karavali Times

728x90

29 March 2020

ಹೋಮ್ ಕ್ವಾರೆಂಟೈನ್‍ನಲ್ಲಿರುವವನ್ನು ಕೆಟ್ಟದಾಗಿ ಕಾಣಬೇಡಿ : ಮೋದಿ ಮನವಿ



ನವದೆಹಲಿ (ಕರಾವಳಿ ಟೈಮ್ಸ್) : ಹೋಮ್ ಕ್ವಾರೆಂಟೈನ್‍ಗಳೊಂದಿಗೆ ಕೆಲವರು ಕೆಟ್ಟದಾಗಿ ವರ್ತಿಸುತ್ತಿದ್ದಾರೆಂದು ತಿಳಿದಾಗ ನನಗೆ ತುಂಬಾ ನೋವಾಯಿತು. ನಾವು ಸೂಕ್ಷ್ಮ ಮತ್ತು ತಿಳುವಳಿಕೆ ಹೊಂದಬೇಕಿದೆ. ಸಾಮಾಜಿಕ ದೂರವನ್ನು ಹೆಚ್ಚಿಸಿ. ಆದರೆ ಭಾವನಾತ್ಮಕ ದೂರವನ್ನು ಕಡಿಮೆ ಮಾಡಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿಕೊಂಡಿದ್ದಾರೆ.

ಕೊರೊನಾ ವಿಚಾರದ ಬಗ್ಗೆ ಮನ್ ಕೀ ಬಾತ್‍ನಲ್ಲಿ ಮಾತನಾಡಿದ ಅವರು, ಕೊರೊನಾ ವೈರಸ್ ತಡೆಯಲು ಸಂಪರ್ಕ ತಡೆಯನ್ನು ಮಾಡಬೇಕಾಗಿದೆ. ಆದರೆ ಹೋಮ್ ಕ್ವಾರೆಂಟೈನ್‍ನಲ್ಲಿರುವವನ್ನು ಕೆಟ್ಟದಾಗಿ ಕಾಣಬೇಡಿ. ಅವರು ಅನಿವಾರ್ಯವಾಗಿ ಕೆಲವು ದಿನಗಳ ಕಾಲ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾಗುತ್ತದೆ. ಅವರೊಂದಿಗೆ ನಾವು ಭಾವನಾತ್ಮಕ ಸಂಬಂಧವನ್ನು ಕಾಪಾಡಿಕೊಳ್ಳಬೇಕು. ಇದು ಸಂಬಂಧಗಳನ್ನು ಪುನಶ್ಚೇತನಗೊಳಿಸುವ ಸಮಯವಾಗಿದೆ ಎಂದು ತಿಳಿಸಿದರು.

ಮನೆಗಳಲ್ಲಿ ಉಳಿಯುವಂತೆ ನಿಮ್ಮಲ್ಲಿ ಮನವಿ ಮಾಡಿಕೊಂಡೆ. ಆದರೆ ನಿಮ್ಮ ಮನಸ್ಸನ್ನು ಅದನ್ನು ಕೇಳುತ್ತಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ನಾವು ಲಾಕ್‍ಡೌನ್ ಎಂಬ ಲಕ್ಷ್ಮಣ ರೇಖೆಯನ್ನು ಪಾಲಿಸಲೇಬೇಕಿದೆ. ನಾನು ಫಿಟ್‍ನೆಸ್ ತರಬೇತುದಾರನಲ್ಲ. ಆದರೆ ಕೆಲವು ಯೋಗಗಳಿಂದ ಬಲಿಷ್ಠವಾಗಿದ್ದೇನೆ ಎಂದರು.

ಎಲ್ಲ ವಿಭಜಾತ್ಮಕ ಗೋಡೆಗಳನ್ನು ಕೆಡವಿ ಸಹಾಯ ಮಾಡಿ


ದೇಶಾದ್ಯಂತ ಲಾಕ್‍ಡೌನ್‍ನಿಂದಾಗಿ ಬಡವರು ಹಸಿವಿನಿಂದ ಕಂಗೆಟ್ಟಿದ್ದರೆ ಅಥವಾ ಬಿಕ್ಕಟ್ಟಿಗೆ ಸಿಲುಕಿದ್ದರೆ ದಯವಿಟ್ಟು ಅಂಥವರ ಸಹಾಯಕ್ಕೆ ಮುಂದಾಗಿ. ಇಂದು ದೇಶವನ್ನು ಉಳಿಸಲು ನಾವು ಜಾತಿ, ಧರ್ಮ, ಮೇಲು, ಕೀಳು ಎಂಬ ಎಲ್ಲಾ ಗೋಡೆಗಳನ್ನು ಮುರಿಯಬೇಕಾಗಿದೆ. ನೀವು ಮನೆಯಲ್ಲಿಯೇ ಇರಿ, ಸುರಕ್ಷಿತವಾಗಿರಿ. ನಾವು ಈ ಯುದ್ಧವನ್ನು ಗೆಲ್ಲಬೇಕಿದೆ. ನಾನು ನಿಮಗೆ ಶುಭ ಹಾರೈಸುತ್ತೇನೆ ಎಂದು ಪ್ರಧಾನಿ ಮೋದಿ ತಿಳಿಸಿದರು.

  • Blogger Comments
  • Facebook Comments

1 comments:

Item Reviewed: ಹೋಮ್ ಕ್ವಾರೆಂಟೈನ್‍ನಲ್ಲಿರುವವನ್ನು ಕೆಟ್ಟದಾಗಿ ಕಾಣಬೇಡಿ : ಮೋದಿ ಮನವಿ Rating: 5 Reviewed By: karavali Times
Scroll to Top