ಕೊರೊನಾ ಸೋಂಕು ಬಗ್ಗೆ ಸೋಶಿಯಲ್ ನೆಟ್‍ವರ್ಕ್ ಬೆದರಿಕೆ ಸಂದೇಶ : ಜನರ ಆಕ್ರೋಶ - Karavali Times ಕೊರೊನಾ ಸೋಂಕು ಬಗ್ಗೆ ಸೋಶಿಯಲ್ ನೆಟ್‍ವರ್ಕ್ ಬೆದರಿಕೆ ಸಂದೇಶ : ಜನರ ಆಕ್ರೋಶ - Karavali Times

728x90

23 March 2020

ಕೊರೊನಾ ಸೋಂಕು ಬಗ್ಗೆ ಸೋಶಿಯಲ್ ನೆಟ್‍ವರ್ಕ್ ಬೆದರಿಕೆ ಸಂದೇಶ : ಜನರ ಆಕ್ರೋಶ



ಬಂಟ್ವಾಳ (ಕರಾವಳಿ ಟೈಮ್ಸ್) : ಕೊರೊನಾ ಸೋಂಕಿನಿಂದ ಈಗಾಗಲೇ ಇಡೀ ದೇಶವೇ ಸ್ಥಬ್ಧವಾಗಿದ್ದು, ಜನ ಆತಂಕಗೊಂಡಿದ್ದಾರೆ. ಬಹುತೇಕ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ಮಧ್ಯೆ ಕೆಲ ಕಿಡಿಗೇಡಿಗಳನ್ನು ಸಾಮಾಜಿಕ ಜಾಲ ತಾಣಗಳನ್ನು ಬಳಸಿಕೊಂಡು ಜನರನ್ನು ಇನ್ನಷ್ಟು ಹೆದರಿಸುವ ಕಾರ್ಯಕ್ಕೆ ಮುಂದಾಗುವ ಮೂಲಕ ವಿಕೃತಿಯನ್ನೂ ಮೆರೆಯುತ್ತಿರುವ ವಿಲಕ್ಷಣ ಪ್ರಕರಣಗಳೂ ವರದಿಯಾಗುತ್ತಿದೆ.

    ಕೊರೊನಾ ವೈರಸ್ಸಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಫೇಕೆ ಫೋಟೋ, ಆಡಿಯೋ, ವೀಡಿಯೋ ಮೂಲಕ ಇನ್ನಿಲ್ಲದ ಸತ್ಯಕ್ಕೆ ದೂರವಾದ ಹೆದರಿಕೆ ಸಂದೇಶಗಳನ್ನು ರವಾನಿಸುತ್ತಿದ್ದು, ಈ ಬಗ್ಗೆ ನಾಗರಿಕ ಸಮಾಜ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದೆ. ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಸೂಕ್ತ ಸಮಯದಲ್ಲಿ ಎಚ್ಚೆತ್ತುಕೊಂಡು ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಸಮಾಜದಲ್ಲಿ ಉಂಟಾಗುತ್ತಿರುವ ಗೊಂದಲ ಹಾಗೂ ಭಯದ ವಾತಾವರಣಕ್ಕೆ ಕೊನೆ ಹಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಕೊರೊನಾ ಸೋಂಕು ಬಗ್ಗೆ ಸೋಶಿಯಲ್ ನೆಟ್‍ವರ್ಕ್ ಬೆದರಿಕೆ ಸಂದೇಶ : ಜನರ ಆಕ್ರೋಶ Rating: 5 Reviewed By: karavali Times
Scroll to Top