ಉಸ್ತುವಾರಿ ಸಚಿವರು ಮೆಸ್ಕಾಂ ಅಧಿಕಾರಿಗಳಿಗೆ ದಬಾಯಿಸುವುದು ಬಿಟ್ಟು ಸಿಎಂ ಜೊತೆ ಚರ್ಚಿಸಿ ವಿದ್ಯುತ್ ಬಿಲ್ ಮನ್ನಾ ಮಾಡಲು ಪ್ರಯತ್ನಿಸಿ : ಯುವ ಕಾಂಗ್ರೆಸ್ ಸವಾಲು - Karavali Times ಉಸ್ತುವಾರಿ ಸಚಿವರು ಮೆಸ್ಕಾಂ ಅಧಿಕಾರಿಗಳಿಗೆ ದಬಾಯಿಸುವುದು ಬಿಟ್ಟು ಸಿಎಂ ಜೊತೆ ಚರ್ಚಿಸಿ ವಿದ್ಯುತ್ ಬಿಲ್ ಮನ್ನಾ ಮಾಡಲು ಪ್ರಯತ್ನಿಸಿ : ಯುವ ಕಾಂಗ್ರೆಸ್ ಸವಾಲು - Karavali Times

728x90

13 May 2020

ಉಸ್ತುವಾರಿ ಸಚಿವರು ಮೆಸ್ಕಾಂ ಅಧಿಕಾರಿಗಳಿಗೆ ದಬಾಯಿಸುವುದು ಬಿಟ್ಟು ಸಿಎಂ ಜೊತೆ ಚರ್ಚಿಸಿ ವಿದ್ಯುತ್ ಬಿಲ್ ಮನ್ನಾ ಮಾಡಲು ಪ್ರಯತ್ನಿಸಿ : ಯುವ ಕಾಂಗ್ರೆಸ್ ಸವಾಲು



ಮಂಗಳೂರು (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ವಿದ್ಯುತ್ ಬಿಲ್ ಗೊಂದಲಕ್ಕೆ ಸಂಬಂಧಿಸಿದಂತೆ ಜನಸಾಮಾನ್ಯರ ಸಮಸ್ಯೆಗೆ ಪ್ರಾಮಾಣಿಕವಾಗಿ ಸ್ಪಂದಿಸುವ ಪ್ರಯತ್ನ ನಡೆಸಬೇಕು, ಅದು ಬಿಟ್ಟು ಮೆಸ್ಕಾಂ ಇಲಾಖಾಧಿಕಾರಿಗಳೊಂದಿಗೆ ಮಾರ್ವಾಡಿ ವ್ಯಾಪಾರ ಮಾಡುತ್ತೀರಾ ಎಂದು ದಬಾಯಿಸಿದ ಮಾತ್ರಕ್ಕೆ ಸಮಸ್ಯೆ ಪರಿಹಾರವಾಗುವುದಿಲ್ಲ. ಸಚಿವರಿಗೆ ಇಚ್ಛಾ ಶಕ್ತಿ ಇದ್ದರೆ ನೇರವಾಗಿ ಈ ಬಗ್ಗೆ ಮುಖ್ಯಮಂತ್ರಿಗೆ ಸಮಸ್ಯೆಯ ಬಗ್ಗೆ ವಿವರಿಸಿ ಲಾಕ್‍ಡೌನ್ ಅವಧಿಯ ವಿದ್ಯುತ್ ಬಿಲ್ ಮನ್ನಾ ಮಾಡುವಂತೆ ಪ್ರಯತ್ನಿಸಿ ಎಂದು ಮಂಗಳೂರು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಪುದು ಗ್ರಾ ಪಂ ಸದಸ್ಯ ಹಾಶೀರ್ ಪೇರಿಮಾರ್ ಸವಾಲೆಸೆದಿದ್ದಾರೆ.

    ಈ ಬಗ್ಗೆ ಉಸ್ತುವಾರಿ ಸಚಿವರಿಗೆ ಟ್ಟೀಟ್ ಮಾಡಿರುವ ಹಾಶೀರ್ ಅವರು ಮಾರ್ವಾಡಿ ವ್ಯಾಪಾರ ಮಾಡುವುದು ಇಲಾಖೆಯಲ್ಲ, ಬದಲಾಗಿ ಸರಕಾರವಾಗಿದೆ. ಈ ನಿಟ್ಟಿನಲ್ಲಿ ಸಚಿವರು ಜನರ ಸಂಕಷ್ಟದ ಸಂದರ್ಭದಲ್ಲಿ ತಮ್ಮ ಇಚ್ಛಾಶಕ್ತಿ ಪ್ರದರ್ಶಿಸಿ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ವಿದ್ಯುತ್ ಬಿಲ್ ಮನ್ನಾ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
  • Blogger Comments
  • Facebook Comments

1 comments:

  1. Yes sir here many people's saying mescom was cheating inbill, we already paid April month's bill bcz that time they called some members no so gone and paid the bill , now have again 2month bill , there is huge amount, we hardly used current ncz we dnt have TV, fridge and our bill was 1 months 500, every month coming onlu 300

    ReplyDelete

Item Reviewed: ಉಸ್ತುವಾರಿ ಸಚಿವರು ಮೆಸ್ಕಾಂ ಅಧಿಕಾರಿಗಳಿಗೆ ದಬಾಯಿಸುವುದು ಬಿಟ್ಟು ಸಿಎಂ ಜೊತೆ ಚರ್ಚಿಸಿ ವಿದ್ಯುತ್ ಬಿಲ್ ಮನ್ನಾ ಮಾಡಲು ಪ್ರಯತ್ನಿಸಿ : ಯುವ ಕಾಂಗ್ರೆಸ್ ಸವಾಲು Rating: 5 Reviewed By: karavali Times
Scroll to Top