ಲಾಕ್‍ಡೌನ್ ಎಫೆಕ್ಟ್ : ಹಿಂದೂ ವ್ಯಕ್ತಿಯ ಶವ ಸಂಸ್ಕಾರಕ್ಕೆ ನೇತೃತ್ವ ನೀಡಿದ ನೆರೆಕರೆಯ ಮುಸ್ಲಿಮರು ಮುಂಬೈಯಲ್ಲಿ ಮುಂದುವರಿದ ಮುಸ್ಲಿಂ ಸಮುದಾಯದ ಮಾನವೀಯ ಸೇವೆ - Karavali Times ಲಾಕ್‍ಡೌನ್ ಎಫೆಕ್ಟ್ : ಹಿಂದೂ ವ್ಯಕ್ತಿಯ ಶವ ಸಂಸ್ಕಾರಕ್ಕೆ ನೇತೃತ್ವ ನೀಡಿದ ನೆರೆಕರೆಯ ಮುಸ್ಲಿಮರು ಮುಂಬೈಯಲ್ಲಿ ಮುಂದುವರಿದ ಮುಸ್ಲಿಂ ಸಮುದಾಯದ ಮಾನವೀಯ ಸೇವೆ - Karavali Times

728x90

13 May 2020

ಲಾಕ್‍ಡೌನ್ ಎಫೆಕ್ಟ್ : ಹಿಂದೂ ವ್ಯಕ್ತಿಯ ಶವ ಸಂಸ್ಕಾರಕ್ಕೆ ನೇತೃತ್ವ ನೀಡಿದ ನೆರೆಕರೆಯ ಮುಸ್ಲಿಮರು ಮುಂಬೈಯಲ್ಲಿ ಮುಂದುವರಿದ ಮುಸ್ಲಿಂ ಸಮುದಾಯದ ಮಾನವೀಯ ಸೇವೆ



ಮುಂಬೈ (ಕರಾವಳಿ ಟೈಮ್ಸ್) : ಕೊರೋನಾ ಸೋಂಕು ವ್ಯಾಪಕವಾಗಿ ಹರಡಿ ಎಲ್ಲೆಡೆ ಮಾನವೀಯ ಪಾಠವನ್ನು ಕಲಿಸುತ್ತಿದೆ. ಲಾಕ್‍ಡೌನ್‍ನಿಂದಾಗಿ ಮೃತನ ಸಂಬಂಧಿಗಳು ಅಂತ್ಯಕ್ರಿಯೆಗೆ ಆಗಮಿಸಲು ಆಗದೆ ಇದ್ದ ಕಾರಣ ಮುಸ್ಲಿಂ ಸಮುದಾಯದ ಸದಸ್ಯರು ಸೇರಿ ತಮ್ಮ ಪಕ್ಕದ ಮನೆಯಲ್ಲಿದ್ದ 72 ವರ್ಷದ ಹಿಂದೂ ವೃದ್ದನ ಅಂತಿಮ ವಿಧಿಗಳನ್ನು ನೆರವೇರಿಸಿರುವ ಘಟನೆ ಮುಂಬೈನಲ್ಲಿ ನಡೆದಿದೆ.

    ಮುಂಬೈನ ಸೇವ್ರಿ ಪ್ರದೇಶದಲ್ಲಿ ವಾಸವಿದ್ದ ಪಾಂಡುರಂಗ ಉಬಾಳೆ ಎಂಬುವರು ಕಳೆದ ಕೆಲ ತಿಂಗಳುಗಳಿಂದ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದರು.  ಅವರು ಸೋಮವಾರ ಸೇವ್ರಿ  ಜಕಾರಿಯಾ ಬಂದರ್ ಪ್ರದೇಶದ ತಮ್ಮ ನಿವಾಸದಲ್ಲಿ ನಿಧನರಾಗಿದ್ದರು. ಕೆಲ ವರ್ಷಗಳಿಂದಲೂ ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶದಲ್ಲಿ ತನ್ನ ಪತ್ನಿ ಹಾಗೂ ಮಕ್ಕಳೊಡನೆ ವಾಸವಿದ್ದ ಪಾಂಡುರಂಗ ಅವರ ಮರಣದ ನಂತರ, ಅವರ ಸಂಬಂಧಿಕರು ಮುಂಬೈ ಉಪನಗರ ಮುಲಂದ್ ಪಕ್ಕದ ನವೀ ಮುಂಬಯಿಯಲ್ಲಿರುವ ಬೇಲಾಪುರ ಮತ್ತು ರಾಯಘಡದಲ್ಲಿದ್ದವರಿಗೆ ವಿಚಾರ ತಲುಪಿಸಲಾಗಿದೆ.

    ಆದರೆ ದೇಶಾದ್ಯಂತ ಕೊರೋನಾ ಲಾಕ್‍ಡೌನ್ ಇರುವ ಕಾರಣದಿಂದ ಅಂತ್ಯಕ್ರಿಯೆಗೆ  ಅಗತ್ಯ  ವ್ಯವಸ್ಥೆಗಳನ್ನು ಮಾಡಲು ಮೃತನ ಪತ್ನಿ ಮತ್ತು ಮಗನಿಗೆ ಸಾಧ್ಯವಾಗಿಲ್ಲ. ಆಗ ಅವರು ತಮ್ಮ ನೆರೆಮನೆಯವರೊಡನೆ ಈ ಬಗ್ಗೆ ಹೇಳಿದ್ದಾರೆ. ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಸಂಬಂಧಿಗಳು ಸಹ ಅಂತ್ಯ ಸಂಸ್ಕಾರಕ್ಕೆ ಆಗಮಿಸಲು ಸಾಧ್ಯವಾಗದ ಹಿನ್ನೆಲೆ ನೆರೆಹೊರೆಯ ಮುಸ್ಲಿಂ ಕುಟುಂಬ ಸದಸ್ಯರು ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಅಲ್ಲದೆ ಅವರೇ ಚಟ್ಟವನ್ನೂ ಸಿದ್ದಪಡಿಸಿದ್ದಾರೆ.

    ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ನೆರೆಮನೆಯವರಾದ  ಆಸಿಫ್ ಶೇಖ್ ಮಾತನಾಡಿ “ನಾವು ಪಾಂಡುರಂಗ ಚಾಚಾ ಅವರನ್ನು ಬಹಳ ಹಿಂದಿನಿಂದಲೂ ಬಲ್ಲೆವು. ಅವರು ಯಾವಾಗಲೂ ನಮ್ಮ ಹಬ್ಬಗಳಲ್ಲಿ ಭಾಗವಹಿಸುತ್ತಿದ್ದರು ಮತ್ತು ನಾವು ಅವರ ಹಬ್ಬಗಳಲ್ಲಿ ಸಹ ಪಾಲ್ಗೊಳ್ಲುತ್ತಿದ್ದೆವು. ನಾವೆಲ್ಲರೂ ಅವರಿಗೆ ವಿದಾಯ ಹೇಳಲು ಮುಂದಾಗಿದ್ದೇವೆ ಮತ್ತು ಅವರ ಕೊನೆಯ ವಿಧಿಗಳನ್ನು ನಿರ್ವಹಿಸಲು ಸಹಾಯ ಮಾಡಿದ್ದೇವೆ.” ಎಂದಿದ್ದಾರೆ.

    ಕಳೆದ ತಿಂಗಳು ಕೂಡಾ ಕೆಲವು ಮುಸ್ಲಿಂ ಜನರು ಉಪನಗರ ಬಾಂದ್ರಾದಲ್ಲಿರುವ ಹಿಂದೂ ಕುಟುಂಬದ ವ್ಯಕ್ತಿಯ ಶವವನ್ನು ಭುಜದ ಮೇಲೆ ಹೊತ್ತು ಶವಸಂಸ್ಕಾರಕ್ಕೆ ಕರೆದೊಯ್ದರು. ಮೃತರ ಸಂಬಂಧಿಕರು  ಲಾಕ್‍ಡೌನ್‍ನಿಂದಾಗಿ ಅಂತಿಮ ವಿಧಿಗಳಿಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ.

    ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ವ ಸಮುದಾಯದ ಮಂದಿಗಳೇ ಮೃತರ ಅಂತ್ಯಸಂಸ್ಕಾರಕ್ಕೆ ಅವಕಾಶ ನೀಡದ ಪರಿಣಾಮ ಜಿಲ್ಲಾಡಳಿತ ಮೃತದೇಹವನ್ನು ಹೊತ್ತುಕೊಂಡು ತಿರುಗಾಟ ನಡೆಸುತ್ತಿರುವ ಸಂದರ್ಭ ಮುಂಬೈ ನಿವಾಸಿಗಳ ಮಾನವೀಯ ಸೇವೆ ಪಾಠವಾಗಿದೆ.
  • Blogger Comments
  • Facebook Comments

0 comments:

Post a Comment

Item Reviewed: ಲಾಕ್‍ಡೌನ್ ಎಫೆಕ್ಟ್ : ಹಿಂದೂ ವ್ಯಕ್ತಿಯ ಶವ ಸಂಸ್ಕಾರಕ್ಕೆ ನೇತೃತ್ವ ನೀಡಿದ ನೆರೆಕರೆಯ ಮುಸ್ಲಿಮರು ಮುಂಬೈಯಲ್ಲಿ ಮುಂದುವರಿದ ಮುಸ್ಲಿಂ ಸಮುದಾಯದ ಮಾನವೀಯ ಸೇವೆ Rating: 5 Reviewed By: karavali Times
Scroll to Top