ಮಾಜಿ ಪ್ರಧಾನಿ ಸಿಂಗ್ ಗುಣಮುಖ : ಆಸ್ಪತ್ರೆಯಿಂದ ಡಿಸ್ಚಾರ್ಜ್ - Karavali Times ಮಾಜಿ ಪ್ರಧಾನಿ ಸಿಂಗ್ ಗುಣಮುಖ : ಆಸ್ಪತ್ರೆಯಿಂದ ಡಿಸ್ಚಾರ್ಜ್ - Karavali Times

728x90

12 May 2020

ಮಾಜಿ ಪ್ರಧಾನಿ ಸಿಂಗ್ ಗುಣಮುಖ : ಆಸ್ಪತ್ರೆಯಿಂದ ಡಿಸ್ಚಾರ್ಜ್ನವದೆಹಲಿ (ಕರಾವಳಿ ಟೈಮ್ಸ್) : ಎದೆ ನೋವು ಕಾರಣಕ್ಕಾಗಿ ಭಾನುವಾರ ರಾತ್ರಿ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಹಿರಿಯ ಕಾಂಗ್ರೆಸ್ ನಾಯಕ ಮನಮೋಹನ್ ಸಿಂಗ್ ಅವರನ್ನು ಭಾನುವಾರ ರಾತ್ರಿ 8:45ಕ್ಕೆ ಆಸ್ಪತ್ರೆಯ ಕಾರ್ಡಿಯೋ-ಥೊರಾಸಿಕ್ ವಾರ್ಡಿಗೆ ಕರೆದೊಯ್ಯಲಾಯಿತು. ಅವರಿಗೆ ಎದೆನೋವು, ಜ್ವರ ಕಾಣಿಸಿಕೊಂಡಿದ್ದರಿಂದ ಭಾನುವಾರ ರಾತ್ರಿಯಿಂದ ಚಿಕಿತ್ಸೆ ನೀಡಿ, ವೈದ್ಯರು ನಿಗಾ ವಹಿಸಿದ್ದರು.

ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಅವರಿಗೆ ಕೋವಿಡ್-19 ಟೆಸ್ಟ್ ಮಾಡಲಾಗಿದ್ದು, ರಿಪೆÇೀರ್ಟ್ ನೆಗೆಟಿವ್ ಬಂದಿದೆ. ಹೀಗಾಗಿ ಎದೆನೋವು ಹಾಗೂ ಜ್ವರದಿಂದ ಗುಣಮುಖರಾದ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಪ್ರಸ್ತುತ ರಾಜ್ಯಸಭೆಯಲ್ಲಿ ರಾಜಸ್ಥಾನವನ್ನು ಪ್ರತಿನಿಧಿಸುತ್ತಿರುವ ಮನಮೋಹನ್ ಸಿಂಗ್ ಅವರು ಎರಡು ಬಾರಿ ಹೃದಯ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಮೊದಲ ಬಾರಿ 1990ರಲ್ಲಿ ಮತ್ತು ಎರಡನೇ ಬಾರಿ 2009ರಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಅಷ್ಟೇ ಅಲ್ಲದೆ ಅವರಿಗೆ ಮಧುಮೇಹ ಕೂಡ ಇದೆ.
  • Blogger Comments
  • Facebook Comments

0 comments:

Post a Comment

Item Reviewed: ಮಾಜಿ ಪ್ರಧಾನಿ ಸಿಂಗ್ ಗುಣಮುಖ : ಆಸ್ಪತ್ರೆಯಿಂದ ಡಿಸ್ಚಾರ್ಜ್ Rating: 5 Reviewed By: karavali Times
Scroll to Top