ಕೊನೆಯಲ್ಲಿ ಉಗ್ರಾವತಾರ ತಾಳಿದ ಪಂಜಾಬ್ ಬೌಲರ್ಸ್ : ಅಲ್ಪ ಮೊತ್ತದ ಹೋರಾಟದಲ್ಲಿ ಪಂಜಾಬ್ ಗೆ 12 ರನ್ ರೋಚಕ ಗೆಲುವು - Karavali Times ಕೊನೆಯಲ್ಲಿ ಉಗ್ರಾವತಾರ ತಾಳಿದ ಪಂಜಾಬ್ ಬೌಲರ್ಸ್ : ಅಲ್ಪ ಮೊತ್ತದ ಹೋರಾಟದಲ್ಲಿ ಪಂಜಾಬ್ ಗೆ 12 ರನ್ ರೋಚಕ ಗೆಲುವು - Karavali Times

728x90

24 October 2020

ಕೊನೆಯಲ್ಲಿ ಉಗ್ರಾವತಾರ ತಾಳಿದ ಪಂಜಾಬ್ ಬೌಲರ್ಸ್ : ಅಲ್ಪ ಮೊತ್ತದ ಹೋರಾಟದಲ್ಲಿ ಪಂಜಾಬ್ ಗೆ 12 ರನ್ ರೋಚಕ ಗೆಲುವು

 ಹೈದರಾಬಾದ್ ಪ್ಲೇ ಆಫ್ ಕನಸು ಭಗ್ನ


ದುಬೈ, ಅ. 25, 2020 (ಕರಾವಳಿ ಟೈಮ್ಸ್) : ಇಲ್ಲಿನ ಮೈದಾನದಲ್ಲಿ ಶನಿವಾರದ ವೀಕೆಂಡ್ ದಿನದ ಎರಡನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ದಾಳಿಗಾರರು ಕೊನೆ ಕ್ಷಣದಲ್ಲಿ ತೋರಿದ ಅದ್ಭುತ ಪ್ರದರ್ಶನದಿಂದ ಹೈದರಾಬಾದ್ ತಂಡವನ್ನು 12 ರನ್‍ಗಳಿಂದ ರೋಚಕವಾಗಿ ಬಗ್ಗು ಬಡಿದಿದೆ. ಈ ಮೂಲಕ  10 ಅಂಕ ಗಳಿಸಿದ ಪಂಜಾಬ್ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ.

 ದುಬೈ ಮೈದಾನದಲ್ಲಿ ನಡೆದ ಐಪಿಎಲ್-2020ಯ 43ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ ತಂಡ ಹೈದರಾಬಾದ್ ತಂಡದ ಬೌಲಿಂಗ್ ದಾಳಿಗೆ ತತ್ತರಿಸಿ ನಿಗದಿತ 20 ಓವರಿನಲ್ಲಿ ಕೇವಲ 126 ರನ್ ಮಾತ್ರ ಗಳಿಸಿ ಹೈದರಾಬಾದಿಗೆ 127 ರನ್ ಗುರಿ ನಿಗದಿಪಡಿಸಿತು. ಗುರಿ ಬೆನ್ನಟ್ಟಿದ ಹೈದರಾಬಾದ್ ತಂಡ ಉತ್ತಮ ಆರಂಭ ಪಡೆಯಿತಾದರೂ ಕೊನೆಯಲ್ಲಿ ಪಂಜಾಬ್ ಬೌಲರ್ ಗಳ ಅದ್ಭುತ ಪ್ರದರ್ಶನದಿಂದಾಗಿ ಗೆಲುವಿಗೆ 12 ರನ್ ದೂರವಿರುತ್ತಲೇ ಆಲೌಟ್ ಆಯಿತು. ಈ ಮೂಲಕ ಹೈದರಾಬಾದ್ ತಂಡದ ಪ್ಲೇ ಆಫ್ ಕನಸು ಬಹುತೇಕ ಅಂತ್ಯಗೊಂಡಿದೆ.

16ನೇ ಓವರ್ ಮುಕ್ತಾಯಕ್ಕೆ 3 ವಿಕೆಟ್ ನಷ್ಟಕ್ಕೆ 99 ರನ್ ಗಳಿಸಿ ಜಯದ ಹೊಸ್ತಿಲಲ್ಲಿದ್ದ ಹೈದರಾಬಾದ್ 16ನೇ ಓವರ್ ನ ಮೊದಲ ಎಸೆತದಲ್ಲಿ 15 ರನ್ ಗಳಿಸಿದ್ದ ಪಾಂಡೆ ಬದಲಿ ಆಟಗಾರ ಸುಚಿತ್ ಹಿಡಿದ ಅದ್ಭುತ ಕ್ಯಾಚಿಗೆ ಬಲಿಯಾಗುವ ಮೂಲಕ ಪತನ ಆರಂಭಿಸಿತು. ಪಂದ್ಯ ಕೊನೆ ಕ್ಷಣದಲ್ಲಿ ಪಂಜಾಬ್ ಕಡೆ ವಾಲಿತು. ನಂತರ ಕೊನೆಯ 17 ಎಸೆತಗಳಲ್ಲಿ ಪಂಜಾಬ್ ತಂಡ ಕೇವಲ ಏಳು ರನ್ ನೀಡಿ 5 ವಿಕೆಟ್ ಕೀಳುವ ಮೂಲಕ ಪಂದ್ಯವನ್ನು ಜಯಿಸಿತು.

 ಪಂದ್ಯದ ಆರಂಭದಲ್ಲಿ ಎಡವಿದ ಪಂಜಾಬ್ ಬೌಲರ್ ಗಳು ಪಂದ್ಯ ಒಂದು ಹಂತಕ್ಕೆ ಬರುತ್ತಿದ್ದಂತೆ ಉಗ್ರಾವತಾರ ತೋರಿದರು. 3.5 ಓವರ್ ಬೌಲ್ ಮಾಡಿದ ಅರ್ಶ್ ದೀಪ್ ಸಿಂಗ್ ಕೇವಲ 23 ರನ್ ನೀಡಿ 3 ವಿಕೆಟ್ ಕಿತ್ತರು. ಕ್ರಿಸ್ ಜೋರ್ಡಾನ್ 4 ಓವರ್ ಬೌಲ್ ಮಾಡಿ 17 ರನ್ ನೀಡಿ 3 ವಿಕೆಟ್ ಕಿತ್ತರು. ಉಳಿದಂತೆ ಮೊಹಮ್ಮದ್ ಶಮಿ, ರವಿ ಬಿಷ್ಣೋಯ್ ಮತ್ತು ಮುರುಗನ್ ಅಶ್ವಿನ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.

ಪಂಜಾಬ್ ನೀಡಿದ 126 ರನ್‍ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಹೈದರಾಬಾದ್ ತಂಡಕ್ಕೆ ಉತ್ತಮ ಆರಂಭ ದೊರೆಯಿತು. ಆರಂಭಿಕರಾಗಿ ಕಣಕ್ಕಿಳಿದ ಡೇವಿಡ್ ವಾರ್ನರ್, ಜಾನಿ ಬೈರ್‍ಸ್ಟೋವ್ ಅವರು ಪವರ್ ಪ್ಲೇನಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದರು. ಈ ಮೂಲಕ ಆರು ಓವರ್ ಮುಕ್ತಾಯದ ವೇಳಗೆ ಸನ್‍ರೈಸರ್ಸ್ ಹೈದರಾಬಾದ್ ತಂಡ ವಿಕೆಟ್ ನಷ್ಟವಿಲ್ಲದೆ 52 ರನ್ ಗಳಿಸಿತ್ತು.

ಆದರೆ ಪವರ್ ಪ್ಲೇ ಮುಗಿದ ತಕ್ಷಣ 20 ಎಸೆತಗಳಲ್ಲಿ 35 ರನ್ ಸಿಡಿಸಿದ್ದ ನಾಯಕ ಡೇವಿಡ್ ವಾರ್ನರ್ ಔಟ್ ಆದರು. ನಂತರ 7ನೇ ಓವರಿನಲ್ಲಿ ಜಾನಿ ಬೈರ್‍ಸ್ಟೋವ್ (19 ರನ್, 20 ಎಸೆತ) ಮುರುಗನ್ ಅಶ್ವಿನ್ ಅವರಿಗೆ ಕ್ಲೀನ್ ಬೌಲ್ಡ್ ಆದರು. ನಂತರ ಬಂದ ಅಬ್ದುಲ್ ಸಮದ್ ಅವರು ಕೇವಲ ಏಳು ರನ್ ಗಳಸಿ ಮೊಹಮ್ಮದ್ ಶಮಿ ಅವರಿಗೆ ವಿಕೆಟ್ ಒಪ್ಪಿಸಿದರು. 

ನಂತರ ಮನೀಶ್ ಪಾಂಡೆ ಮತ್ತು ವಿಜಯ್ ಶಂಕರ್ ಸೇರಿಕೊಂಡು ಉತ್ತಮ ಜೊತೆಯಾಟವಾಡಿದರು. ಆದರೆ 16ನೇ ಓವರ್ ನ ಮೊದಲ ಎಸೆತದಲ್ಲಿ 15 ರನ್ ಗಳಿಸಿದ್ದ ಪಾಂಡೆ ಬದಲಿ ಆಟಗಾರ ಸುಚಿತ್ ಹಿಡಿದ ಅದ್ಭುತ ಕ್ಯಾಚಿಗೆ ಬಲಿಯಾದರು. ನಂತರ ವಿಜಯ್ ಶಂಕರ್ ಅವರು ಅರ್ಶ್ ದೀಪ್ ಸಿಂಗ್ ಅವರಿಗೆ ಬಲಿಯಾದರು. ನಂತರ 19ನೇ ಓವರಿನಲ್ಲಿ ಜೇಸನ್ ಹೋಲ್ಡರ್ ಅವರು ಕ್ಯಾಚ್ ಔಟಾದರು.

ಬಳಿಕ ರಶೀದ್ ಖಾನ್ ಕೂಡಾ ಅಗ್ಗಕ್ಕೆ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಯಾವುದೇ ಹೈದರಾಬಾದ್ ಬ್ಯಾಟ್ಸ್ ಮ್ಯಾನ್‍ಗಳು ಕ್ರೀಸಿನಲ್ಲಿ ತಳವೂರಲು ಸಾಧ್ಯವಾಗಲಿಲ್ಲ. ಪರಿಣಾಮ ಒಂದು ಎಸೆತ ಬಾಕಿ ಇರುವಾಗಲೇ ಹೈದರಾಬಾದ್ ಆಲೌಟ್ ಆಯ್ತು.

ಇದಕ್ಕೂ ಮೊದಲ ಬ್ಯಾಟ್ ಮಾಡಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಸನ್‍ರೈಸರ್ಸ್ ಹೈದರಾಬಾದ್ ಬೌಲರ್ ಗಳ ದಾಳಿಗೆ ತತ್ತರಿಸಿ ಹೋಗಿತ್ತು. ಕೊನೆಯ ಬಾಲಿನವರೆಗೂ ಸ್ಫೋಟಕ ಬ್ಯಾಟ್ಸ್ ಮ್ಯಾನ್ ನಿಕೋಲಸ್ ಪೂರನ್ ಕ್ರೀಸಿನಲ್ಲಿ ಇದ್ದರು, ರನ್ ಗಳಿಸುವಲ್ಲಿ ವಿಫಲವಾದರು. ಅಂತಿಮವಾಗಿ 20 ಓವರ್ ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು ಕೇವಲ 126 ರನ್ ಗಳಸಿತ್ತು.  • Blogger Comments
  • Facebook Comments

0 comments:

Post a Comment

Item Reviewed: ಕೊನೆಯಲ್ಲಿ ಉಗ್ರಾವತಾರ ತಾಳಿದ ಪಂಜಾಬ್ ಬೌಲರ್ಸ್ : ಅಲ್ಪ ಮೊತ್ತದ ಹೋರಾಟದಲ್ಲಿ ಪಂಜಾಬ್ ಗೆ 12 ರನ್ ರೋಚಕ ಗೆಲುವು Rating: 5 Reviewed By: karavali Times
Scroll to Top