ಸಿಇಟಿ ಸೀಟು ಹಂಚಿಕೆ ಮೊದಲ ಹಂತದ ಪ್ರವೇಶ ಪ್ರಕ್ರಿಯೆಗೆ ವೇಳಾಪಟ್ಟಿ ಪ್ರಕಟ - Karavali Times ಸಿಇಟಿ ಸೀಟು ಹಂಚಿಕೆ ಮೊದಲ ಹಂತದ ಪ್ರವೇಶ ಪ್ರಕ್ರಿಯೆಗೆ ವೇಳಾಪಟ್ಟಿ ಪ್ರಕಟ - Karavali Times

728x90

21 November 2020

ಸಿಇಟಿ ಸೀಟು ಹಂಚಿಕೆ ಮೊದಲ ಹಂತದ ಪ್ರವೇಶ ಪ್ರಕ್ರಿಯೆಗೆ ವೇಳಾಪಟ್ಟಿ ಪ್ರಕಟಬೆಂಗಳೂರು, ನ. 21, 2020 (ಕರಾವಳಿ ಟೈಮ್ಸ್) : 2020-21ನೇ ಸಾಲಿನ ಮೊದಲ ಹಂತದ ವೃತ್ತಿ ಶಿಕ್ಷಣ ಪ್ರವೇಶ ಕುರಿತ ಸಿ.ಇ.ಟಿ. ವೇಳಾಪಟ್ಟಿ ಪ್ರಕಟಿಸಲಾಗಿದೆ. ನವೆಂಬರ್ 22 ರಿಂದ 25ರವರೆಗೆ ಇಂಜಿನಿಯರಿಂಗ್, ವಾಸ್ತುಶಿಲ್ಪ, ಕೃಷಿ ವಿಜ್ಞಾನ, ಪಶು ಸಂಗೋಪನೆ, ಡಿ-ಫಾರ್ಮಾ ಕೋರ್ಸ್‍ಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸೀಟು ಹಂಚಿಕೆ ನಡೆಯಲಿದೆ.

ನವೆಂಬರ್ 20 ರಂದು ಸೀಟು ಹಂಚಿಕೆ ಮತ್ತು ಶುಲ್ಕ ಸಂರಚನೆಯ ಡಿಸ್ಪ್ಲೇ ಆಗಲಿದ್ದು, ನವೆಂಬರ್ 22 ರ ಮಧ್ಯಾಹ್ನ 2 ಗಂಟೆಯಿಂದ ನವೆಂಬರ್ 25ರವರೆಗೆ ಕೆಸಿಇಟಿ ಆಯ್ಕೆ ಪ್ರವೇಶ ನಡೆಯಲಿದೆ. ನವೆಂಬರ್ 26ರ ಮಧ್ಯಾಹ್ನ 2 ಗಂಟೆಯ ನಂತರ ಕೆಸಿಇಟಿ ಅಣಕು ಸೀಟು ಹಂಚಿಕೆ ಮಾಡಲಾಗುವುದು. ನವೆಂಬರ್ 26 ರ ಸಂಜೆ 4 ಗಂಟೆಯಿಂದ 28 ರ ಬೆಳಿಗ್ಗೆ 11 ಗಂಟೆವರೆಗೆ ಕೆಸಿಇಟಿ ಆಯ್ಕೆ ನಮೂದನ್ನು ಬದಲಿಸುವ ಸೌಲಭ್ಯ ಕಲ್ಪಿಸಲಾಗಿದೆ, ನವೆಂಬರ್ 29 ರ ಸಂಜೆ 4 ಗಂಟೆಯ ನಂತರ ಒಂದನೇ ಸುತ್ತಿನ ಕೆಸಿಇಟಿ ಸೀಟು ಹಂಚಿಕೆ ನಡೆಯಲಿದೆ. ನವೆಂಬರ್ 30 ರಿಂದ ಡಿಸೆಂಬರ್ 1 ರವರೆಗೆ ನಿಯೋಜಿತ ಅಭ್ಯರ್ಥಿಗಳ ಆಯ್ಕೆಗಳ ಪ್ರಕ್ರಿಯೆ ನಡೆಯಲಿದೆ. ನವೆಂಬರ್ 30 ರಿಂದ ಡಿಸೆಂಬರ್ 2ರವರೆಗೆ ನಿಗದಿಪಡಿಸಿದ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಗೆ ಅವಕಾಶ ಕಲ್ಪಿಸಲಾಗಿದೆ. ಡಿಸೆಂಬರ್ 2 ರ ಸಂಜೆ 5.30 ನಿಗದಿಪಡಿಸಿದ ಸಂಸ್ಥೆಯಲ್ಲಿ ಹಾಜರಾಗಲು ವಿದ್ಯಾರ್ಥಿಗಳಿಗೆ ಕೊನೆಯ ದಿನಾಂಕ ಆಗಿರುತ್ತದೆ. 

ಕೆಸಿಇಟಿ 2020 ಸಮಾಲೋಚನೆಯ ಸಮಯದಲ್ಲಿ ಅಭ್ಯರ್ಥಿಗಳಿಂದ ಈ ಕೆಳಗಿನ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸಬೇಕಾಗುತ್ತದೆ. 

ಕೆಸಿಇಟಿ ಅರ್ಜಿ ಮುದ್ರಿತ ನಮೂನೆ, ಅರ್ಜಿ ಶುಲ್ಕ ಪಾವತಿ ರಶೀದಿ / ವಹಿವಾಟು ಐಡಿ, ಕೆಸಿಇಟಿ ಅಡ್ಮಿಟ್ ಕಾರ್ಡ್, ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಅಂಕಪಟ್ಟಿಗಳು, ಅಭ್ಯರ್ಥಿಯ ಇತ್ತೀಚಿನ 2 ಪಾಸ್ ಪೋರ್ಟ್ ಗಾತ್ರದ ಭಾವಚಿತ್ರಗಳು. ಸಂಬಂಧಪಟ್ಟ ಬಿಇಒ / ಡಿಡಿಪಿಐ ಸಹಿ ಮಾಡಿದ ವ್ಯಾಸಂಗ ಪ್ರಮಾಣ ಪತ್ರ ಹಾಗೂ ಇತರ ಅಗತ್ಯವಿರುವ ದಾಖಲೆಗಳು.

  • Blogger Comments
  • Facebook Comments

0 comments:

Post a Comment

Item Reviewed: ಸಿಇಟಿ ಸೀಟು ಹಂಚಿಕೆ ಮೊದಲ ಹಂತದ ಪ್ರವೇಶ ಪ್ರಕ್ರಿಯೆಗೆ ವೇಳಾಪಟ್ಟಿ ಪ್ರಕಟ Rating: 5 Reviewed By: karavali Times
Scroll to Top