ಪಾಕ್ ಮಾಜಿ ನಾಯಕ ಅಫ್ರಿದಿ ಮಗಳ ವಿವಾಹ ಹಾಲಿ ವೇಗಿ ಶಾಹೀನ್ ಅಫ್ರಿದಿ ಜೊತೆ ನಿಶ್ಚಯ - Karavali Times ಪಾಕ್ ಮಾಜಿ ನಾಯಕ ಅಫ್ರಿದಿ ಮಗಳ ವಿವಾಹ ಹಾಲಿ ವೇಗಿ ಶಾಹೀನ್ ಅಫ್ರಿದಿ ಜೊತೆ ನಿಶ್ಚಯ - Karavali Times

728x90

9 March 2021

ಪಾಕ್ ಮಾಜಿ ನಾಯಕ ಅಫ್ರಿದಿ ಮಗಳ ವಿವಾಹ ಹಾಲಿ ವೇಗಿ ಶಾಹೀನ್ ಅಫ್ರಿದಿ ಜೊತೆ ನಿಶ್ಚಯ



ಇಸ್ಲಾಮಾಬಾದ್, ಮಾ. 09, 2021 (ಕರಾವಳಿ ಟೈಮ್ಸ್) : ಪಾಕಿಸ್ತಾನದ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಆಫ್ರಿದಿ ಪುತ್ರಿಯ ವಿವಾಹವು ಪಾಕಿಸ್ತಾನದ ತಂಡ ಹಾಲಿ ವೇಗದ ಬೌಲರ್ ಶಾಹೀನ್ ಶಾ ಅಫ್ರೀದಿ ಜೊತೆ ನಿಶ್ಚಯ ಆಗಿದ್ದು ವರದಿಯಾಗಿದೆ. ಭಾನುವಾರ ಮಗಳ ಮದುವೆ ನಿಶ್ಚಯವಾಗಿದ್ದು, ಕೆಲವೇ ದಿನಗಳಲ್ಲಿ ಮದುವೆ ದಿನಾಂಕ ನಿಗದಿ ಮಾಡಲಿದ್ದೇವೆ ಎಂದು ಶಾಹಿದ್ ಅಫ್ರಿದಿ ಹೇಳಿಕೊಂಡಿದ್ದಾರೆ. 

ಸದ್ಯ ಪಾಕಿಸ್ತಾನದ ತಂಡದಲ್ಲಿ ಆಡುತ್ತಿರುವ ವೇಗಿ ಶಾಹಿನ್ ಶಾ ಜೊತೆ ಆಫ್ರಿದಿ ಪುತ್ರಿಯ ಮದುವೆ ಫಿಕ್ಸ್ ಆಗಿದೆ. ಈಗಾಗಲೇ ಎರಡೂ ಕುಟುಂಬಗಳ ಸದಸ್ಯರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಶಾಹಿನ್ ಕುಟುಂಬಸ್ಥರು ಮದುವೆ ವಿಷಯವಾಗಿ ನಮ್ಮನ್ನು ಸಂಪರ್ಕಿಸಿದರು. ಇದೀಗ ಮದುವೆಗೆ ಎಲ್ಲರ ಒಪ್ಪಿಗೆ ಸಿಕ್ಕಿದೆ ಎಂದು ಅಫ್ರಿದಿ ಸಂತೋಷದ ವಿಷಯವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. 

ಈ ಕುರಿತು ಮಾತನಾಡಿರುವ ಶಾಹಿನ್ ಷಾ ಅಫ್ರಿದಿ ಅವರ ತಂದೆ ಅಯಾಝ್ ಖಾನ್, ಮಗನ ಮದುವೆ ಕುರಿತು ಅಫ್ರಿದಿ ಕುಟುಂಬಕ್ಕೆ ಪ್ರಸ್ತಾವ ಕಳುಹಿಸಿದ್ದೆ. ನಮ್ಮ ಪ್ರಸ್ತಾಪವನ್ನು ಒಪ್ಪಿಕೊಂಡಿರುವ ಆಫ್ರಿದಿ ಕುಟುಂಬ ಮದುವೆಗೆ ಒಪ್ಪಿಗೆ ನೀಡಿದೆ ಎಂದಿದ್ದಾರೆ. 

ಕಳೆದ ಕೆಲ ತಿಂಗಳಿನಿಂದ ಎರಡೂ ಕುಟುಂಬಗಳಲ್ಲಿ ಮದುವೆ ಚರ್ಚೆ ನಡೆಯುತ್ತಿತ್ತು. ಇದೀಗ ಎರಡೂ ಕುಟುಂಬಗಳಲ್ಲಿ ಸಂಭ್ರಮ ಮನೆ ಮಾಡಿದೆ. ಮದುವೆ ದಿನಾಂಕ ಶೀಘ್ರದಲ್ಲೇ ಅಂತಿಮ ಮಾಡಲಿದ್ದೇವೆ ಎಂದು ಅಯಾಜ್ ಖಾನ್ ತಿಳಿಸಿದ್ದಾರೆ.


  • Blogger Comments
  • Facebook Comments

0 comments:

Post a Comment

Item Reviewed: ಪಾಕ್ ಮಾಜಿ ನಾಯಕ ಅಫ್ರಿದಿ ಮಗಳ ವಿವಾಹ ಹಾಲಿ ವೇಗಿ ಶಾಹೀನ್ ಅಫ್ರಿದಿ ಜೊತೆ ನಿಶ್ಚಯ Rating: 5 Reviewed By: karavali Times
Scroll to Top