ಮಂಗಳೂರು : ಕೊರೋನಾ ನಿಯಮ ಉಲ್ಲಂಘಿಸಿ ಮದುವೆ ಸಮಾರಂಭ ನಡೆಸಿದ ದೇವಸ್ಥಾನಕ್ಕೆ ಸಹಾಯಕ ಆಯುಕ್ತರ ದಾಳಿ - Karavali Times ಮಂಗಳೂರು : ಕೊರೋನಾ ನಿಯಮ ಉಲ್ಲಂಘಿಸಿ ಮದುವೆ ಸಮಾರಂಭ ನಡೆಸಿದ ದೇವಸ್ಥಾನಕ್ಕೆ ಸಹಾಯಕ ಆಯುಕ್ತರ ದಾಳಿ - Karavali Times

728x90

20 June 2021

ಮಂಗಳೂರು : ಕೊರೋನಾ ನಿಯಮ ಉಲ್ಲಂಘಿಸಿ ಮದುವೆ ಸಮಾರಂಭ ನಡೆಸಿದ ದೇವಸ್ಥಾನಕ್ಕೆ ಸಹಾಯಕ ಆಯುಕ್ತರ ದಾಳಿ

ಮಂಗಳೂರು, ಜೂನ್ 20, 2021 (ಕರಾವಳಿ ಟೈಮ್ಸ್) : ನಗರದ ಮಂಗಳಾದೇವಿ ದೇವಸ್ಥಾನದ ಆವರಣದಲ್ಲಿ ಕೊರೋನಾ ಲಾಕ್ ಡೌನ್ ನಿರ್ಬಂಧ ಉಲ್ಲಂಘಿಸಿ ಭಾನುವಾರ ನಡೆಯುತ್ತಿದ್ದ ಮದುವೆ ಸಮಾರಂಭಕ್ಕೆ ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿ ಮದುವೆ ನಿಲ್ಲಿಸಿದ ಘಟನೆ ನಡೆದಿದೆ. 

ಬಿಜೆಪಿ ಕಾರ್ಪೊರೇಟರ್ ಭಾಸ್ಕರಚಂದ್ರ ಶೆಟ್ಟಿ ಅವರ ಮಗಳ ಮದುವೆ ಸಮಾರಂಭ ಇದಾಗಿತ್ತು ಎನ್ನಲಾಗಿದ್ದು, ದೇವಸ್ಥಾನದ ಆವರಣದಲ್ಲಿ ಹಲವು ಕಾರುಗಳು ಜಮಾಯಿಸಿ ಈ ಮದುವೆ ಸಮಾರಂಭ ನಡೆಯುತ್ತಿದ್ದ ಬಗ್ಗೆ ಸಾರ್ವಜನಿಕರು ಡೀಸಿಗೆ ನೀಡಿದ ದೂರಿನಂತೆ ಡೀಸಿ ಆದೇಶದಂತೆ ಸಹಾಯಕ ಆಯುಕ್ತ ಮದನ್ ಮೋಹನ್ ನೇತೃತ್ವದ ಅಧಿಕಾರಿಗಳ ತಂಡ ದೇವಸ್ಥಾನದ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಸಂದರ್ಭ ಆಡಳಿತ ಮಂಡಳಿ ಒಂದೇ ಮುಹೂರ್ತದಲ್ಲಿ ನಾಲ್ಕು ಮದುವೆ ಎಂದು ಸಮಜಾಯಿಷಿ ನೀಡಲು ಪಯತ್ನಿಸಿದರೂ ಅಧಿಕಾರಿಗಳು ಒಪ್ಪದೆ ಅರ್ಧ ಗಂಟೆಯಲ್ಲಿ 4 ಮದುವೆಯನ್ನು ಹೇಗೆ ಮಾಡುತ್ತೀರಾ, ನಗರದಲ್ಲಿ ಈ 4 ಮದುವೆ ಮಾಡಲು ಯಾರು ನಿಮಗೆ ಅನುಮತಿ ಕೊಟ್ಟವರು ಎಂದು ಪ್ರಶ್ನಿಸಿದರಲ್ಲದೆ ಆಡಳಿತ ಮಂಡಳಿ ಸೇರಿ ಮದುವೆಗೆ ಸಂಬಂಧಪಟ್ಟವರ ಮೇಲೆ ದೂರು ದಾಖಲಿಸಿದ್ದಾರೆ. ಅನುಮತಿ ಇರುವ ವಾಹನ ಹೊರಡುಪಡಿಸಿ ಇತರ ವಾಹನಗಳನ್ನು ಸೀಝ್ ಮಾಡಿ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಮದುವೆ ಆಯೋಜಕರ ವಿರುದ್ದ ಪ್ರಕರಣ ದಾಖಲಿಸಲು ಎಡಿ ಸೂಚನೆ ನೀಡಿದ್ದಾರೆ. 


  • Blogger Comments
  • Facebook Comments

0 comments:

Post a Comment

Item Reviewed: ಮಂಗಳೂರು : ಕೊರೋನಾ ನಿಯಮ ಉಲ್ಲಂಘಿಸಿ ಮದುವೆ ಸಮಾರಂಭ ನಡೆಸಿದ ದೇವಸ್ಥಾನಕ್ಕೆ ಸಹಾಯಕ ಆಯುಕ್ತರ ದಾಳಿ Rating: 5 Reviewed By: karavali Times
Scroll to Top