ಮಾದಕ ವಸ್ತುಗಳು ಅದೃಶ್ಯ ಕೊಲೆಗಾರನ ಪಾತ್ರ ವಹಿಸುತ್ತಿದೆ : ವಸಂತ ಸಾಲ್ಯಾನ್ ವಿಷಾದ - Karavali Times ಮಾದಕ ವಸ್ತುಗಳು ಅದೃಶ್ಯ ಕೊಲೆಗಾರನ ಪಾತ್ರ ವಹಿಸುತ್ತಿದೆ : ವಸಂತ ಸಾಲ್ಯಾನ್ ವಿಷಾದ - Karavali Times

728x90

28 June 2021

ಮಾದಕ ವಸ್ತುಗಳು ಅದೃಶ್ಯ ಕೊಲೆಗಾರನ ಪಾತ್ರ ವಹಿಸುತ್ತಿದೆ : ವಸಂತ ಸಾಲ್ಯಾನ್ ವಿಷಾದ

ಬಂಟ್ವಾಳ, ಜೂನ್ 28, 2021 (ಕರಾವಳಿ ಟೈಮ್ಸ್) : ಇಂದು ಮಾದಕ ವಸ್ತುಗಳ ಚಟ ಹೆಚ್ಚಾಗಿ ಚರ್ಚೆಗೆ ಗ್ರಾಸವಾಗುತ್ತಿದೆ. ಶಾಲಾ ಮಕ್ಕಳು, ಯುವಕರು, ವಿದ್ಯಾವಂತರು, ಬುದ್ದಿವಂತರು, ಸಾಧಕರು, ಮಹಿಳೆಯರು ಕೂಡಾ ಇವತ್ತು ಮಾದಕ ವಸ್ತುಗಳ ಚಟಕ್ಕೆ ಬಲಿಯಾಗುತ್ತಿರುವುದು ದುರದೃಷ್ಟಕರ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ವಸಂತ್ ಸಾಲ್ಯಾನ್ ವಿಷಾದ ವ್ಯಕ್ತಪಡಿಸಿದರು. 

ದಕ್ಷಿಣ ಕನ್ನಡ ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬಂಟ್ವಾಳ ತಾಲೂಕು ಘಟಕದ ವತಿಯಿಂದ ಬಂಟ್ವಾಳದ ಉನ್ನತಿ ಸೌಧ ಸಭಾಂಗಣದಲ್ಲಿ ಸೋಮವಾರ ನಡೆದ ಮಾದಕ ವಸ್ತು ವಿರೋಧಿ ದಿನಾಚರಣೆ ಉ ಉದ್ಘಾಟಿಸಿ ಮಾತನಾಡಿದ ಅವರು ಮಾದಕ ವಸ್ತುಗಳು ಇದೀಗ ಪ್ರಪಂಚದ ಅದೃಶ್ಯ ಕೊಲೆಗಾರನಾಗಿ ಗುರುತಿಸಿಕೊಳ್ಳುತ್ತಿದೆ. ಸಾವಿರಾರು ಜನರ ಸಾವಿಗೆ ಕಾರಣವಾದ ಮಾದಕ ವಸ್ತುಗಳಿಗೆ ಜನರು ಆಕರ್ಷಿತರಾಗಿರುವುದು ಈ ಶತಮಾನದ ದುರಂತವೇ ಸರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ, ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ, ಜನಜಾಗೃತಿ ವೇದಿಕೆಯ ಬಿ ಸಿ ರೋಡ್ ವಲಯಾಧ್ಯಕ್ಷ ರೋನಾಲ್ಡ್ ಡಿ’ಸೋಜ, ಹಾಗೂ ಜಿಲ್ಲೆಯ 5 ತಾಲೂಕಿನ ಯೋಜನಾಧಿಕಾರಿಗಳು ಭಾಗವಹಿಸಿದ್ದರು. 

ಬಂಟ್ವಾಳ ತಾಲೂಕಿನ ಯೋಜನಾಧಿಕಾರಿ ಜಯಾನಂದ ಪಿ ಸ್ವಾಗತಿಸಿ, ದ ಕ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ವಂದಿಸಿದರು. ಬಂಟ್ವಾಳ ವಲಯ ಮೇಲ್ವೀಚಾರಕ ಕೇಶವ ಕೆ ಕಾರ್ಯಕ್ರಮ ನಿರೂಪಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಮಾದಕ ವಸ್ತುಗಳು ಅದೃಶ್ಯ ಕೊಲೆಗಾರನ ಪಾತ್ರ ವಹಿಸುತ್ತಿದೆ : ವಸಂತ ಸಾಲ್ಯಾನ್ ವಿಷಾದ Rating: 5 Reviewed By: karavali Times
Scroll to Top