ಬಂಟ್ವಾಳ, ಜುಲೈ 02, 2021 (ಕರಾವಳಿ ಟೈಮ್ಸ್) : ತಾಲೂಕಿನ ಬಿ.ಸಿ.ರೋಡಿನ ಸೋಯಮಾಜಿ ಹೌಸ್ ಕಟ್ಟಡದ ನೆಲ ಮಹಡಿಯಲ್ಲಿ ಪ್ರಾರಂಭಿಸಲಾಗಿರುವ ವಿವಿಧ ತಳಿಯ ಡ್ರೈ ಫ್ರೂಟ್ಸ್ ಮಾರಾಟ ಮಳಿಗೆಯು ಶುಕ್ರವಾರ ಬೆಳಿಗ್ಗೆ ಶುಭಾರಂಭಗೊಂಡಿತು.
ಉಮ್ಮರ್ ಫಾರೂಕ್ ಹಾಗೂ ಮುಹಮ್ಮದ್ ಇಸಾಕ್ ಅವರ ಜಂಟಿ ಮಾಲಕತ್ವದ ಈ ಡ್ರೈ ಫ್ರೂಟ್ಸ್ ಮಳಿಗೆಯನ್ನು ಇರ್ಶಾದ್ ದಾರಿಮಿ ಅಲ್-ಜಝರಿ ಮಿತ್ತಬೈಲು ಅವರು ದುವಾ ಮೂಲಕ ಉದ್ಘಾಟಿಸಿದರು. ಬಂಟ್ವಾಳ ಪುರಸಭಾಧ್ಯಕ್ಷ ಮುಹಮ್ಮದ್ ಶರೀಫ್ ಶಾಂತಿಅಂಗಡಿ, ಸದಸ್ಯ ಜನಾರ್ದನ ಚೆಂಡ್ತಿಮಾರ್, ದಕ್ಷಿಣ ಕನ್ನಡ ಜಿಲ್ಲಾ ಕಾರ್ಮಿಕ ಕಾಂಗ್ರೆಸ್ ಸಮಿತಿಯ ಜಿಲ್ಲಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಪೊಲೀಸ್ ಎಎಸ್ಸೈ ಅಬ್ದುಲ್ ಕರೀಂ, ಪ್ರಮುಖರಾದ ಗೂಡಿನಬಳಿ ಮಸೀದಿ ಉಪಾಧ್ಯಕ್ಷ ಕರೀಂ, ಕಾರ್ಯದರ್ಶಿ ಅಸ್ಲಂ, ತ್ವೈಬಾ ಟ್ರೇಡರ್ಸ್ ಮಾಲಕ ಮುಹಮ್ಮದ್ ಹಾರಿಸ್, ಅಬ್ದುಲ್ ಸಮದ್, ಅಸ್ಮಾಕ್ಸ್ ಎಂಟರ್ಪ್ರೈಸಸ್ ಮಾಲಕ ನಿಝಾಮುದ್ದೀನ್, ಪ್ರಮುಖರಾದ ಮುಹಮ್ಮದ್ ಗೂಡಿನಬಳಿ, ಇಲ್ಯಾಸ್ ಗೂಡಿನಬಳಿ ಮೊದಲಾದವರು ಭೇಟಿ ನೀಡಿ ಶುಭ ಹಾರೈಸಿದರು.
ನಮ್ಮಲ್ಲಿ ಎಲ್ಲಾ ರೀತಿಯ ಡ್ರೈ ಫ್ರೂಟ್ಸ್, ಅರೇಬಿಕ್ ಸ್ವೀಟ್ಸ್, ವಿವಿಧ ತಳಿಯ ಚಾಕಲೇಟ್ಗಳು, ಗಿಫ್ಟ್ ಚಾಕಲೇಟುಗಳು, ಖರ್ಜೂರದ ಉಪ್ಪಿನಕಾಯಿ ಹಾಗೂ ಖರ್ಜೂರದ ಎಲ್ಲಾ ರೀತಿಯ ಬಿಸ್ಕಟ್ ಗಳು ನಮ್ಮಲ್ಲಿ ಲಭ್ಯವಿದೆ ಎಂದು ಮಾಲಕರಾದ ಫಾರೂಕ್ ಹಾಗೂ ಇಸಾಕ್ ತಿಳಿಸಿದ್ದಾರೆ.
0 comments:
Post a Comment