ಕೊರೋನಾ ವೈರಸ್ಸಿನಿಂದಾಗಿ ಪರಿಸರ, ಆಮ್ಲಜನಕದ ಮಹತ್ವ ಮನವರಿಕೆಯಾಗಿದೆ : ರಾಘವೇಂದ್ರ ಭಟ್ - Karavali Times ಕೊರೋನಾ ವೈರಸ್ಸಿನಿಂದಾಗಿ ಪರಿಸರ, ಆಮ್ಲಜನಕದ ಮಹತ್ವ ಮನವರಿಕೆಯಾಗಿದೆ : ರಾಘವೇಂದ್ರ ಭಟ್ - Karavali Times

728x90

19 August 2021

ಕೊರೋನಾ ವೈರಸ್ಸಿನಿಂದಾಗಿ ಪರಿಸರ, ಆಮ್ಲಜನಕದ ಮಹತ್ವ ಮನವರಿಕೆಯಾಗಿದೆ : ರಾಘವೇಂದ್ರ ಭಟ್

ಬಂಟ್ವಾಳ, ಆಗಸ್ಟ್ 19, 2021 (ಕರಾವಳಿ ಟೈಮ್ಸ್) : ಕೊರೋನಾ ಎಂಬ ಮಾರಕ ವೈರಸ್ ಇಂದು ಪ್ರತಿಯೊಬ್ಬರಲ್ಲೂ ಪರಿಸರ ಹಾಗೂ ಆಮ್ಲಜನಕದ ಮಹತ್ವ ಹಾಗೂ ಉಪಯುಕ್ತತೆಯ ಬಗ್ಗೆ ಅರಿವು ಮೂಡಿಸಿದೆ ಎಂದು ಬಂಟ್ವಾಳ ಲೊರೆಟ್ಟೊಹಿಲ್ಸ್ ರೋಟರಿ ಕ್ಲಬ್ ಅಧ್ಯಕ್ಷ ರಾಘವೇಂದ್ರ ಭಟ್ ಹೇಳಿದರು. 

ಚಿಣ್ಣರ ಲೋಕ ಸೇವಾಬಂಧು ಬಂಟ್ವಾಳ, ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾಟ್ರಸ್ಟ್ ಬಂಟ್ವಾಳ ಇವುಗಳ ಆಶ್ರಯದಲ್ಲಿ ಗುರುವಾರ ಬಿ ಸಿ ರೋಡಿನ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ವಠಾರದಲ್ಲಿ ನಡೆದ ವನ ಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪರಿಸರವನ್ನು ಸಂರಕ್ಷಿಸುವ ಕಾರ್ಯ ಪ್ರತಿಯೊಬ್ಬನ ಕರ್ತವ್ಯವಾಗಿದೆ ಎಂದರು. ಪರಿಸರ ಸಂರಕ್ಷಣೆಯಿಂದ ಮಾತ್ರ ಮಾನವ ರಾಶಿಯ ಉಳಿವು ಕೂಡಾ ಸಾಧ್ಯ ಎಂದು ಅಭಿಪ್ರಾಯಪಟ್ಟರು. 

ಅನ್ನಪೂರ್ಣೇಶ್ವರಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ ಅವರು ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 

ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾಟ್ರಸ್ಟ್ ಅಧ್ಯಕ್ಷ ಸುದರ್ಶನ್ ಜೈನ್, ಗೌರವಾಧ್ಯಕ್ಷ ಜಯರಾಮ ರೈ, ಗೌರವ ಸಲಹೆಗಾರ ಮಂಜು ವಿಟ್ಲ, ನಿರ್ದೇಶಕರಾದ ಸರಪಾಡಿ ಅಶೋಕ ಶೆಟ್ಟಿ, ಪದ್ಮನಾಭ ಮಯ್ಯ, ಮುಹಮ್ಮದ್ ನಂದಾವರ ಮೊದಲಾದವರು ಉಪಸ್ಥಿತರಿದ್ದರು. 

ಸಂಚಾಲಕ ರಾಮಚಂದ್ರ ಶೆಟ್ಟಿಗಾರ್ ಸ್ವಾಗತಿಸಿ, ಸೇವಾ ಬಂಧು ಅಧ್ಯಕ್ಷ ಮೋಹನದಾಸ್ ಕೊಟ್ಟಾರಿ ಪ್ರಸ್ತಾವನೆಗೈದರು. ಇಬ್ರಾಹಿಂ ಕೈಲಾರ್ ವಂದಿಸಿದರು. ಶೈಲಜಾ ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಕೊರೋನಾ ವೈರಸ್ಸಿನಿಂದಾಗಿ ಪರಿಸರ, ಆಮ್ಲಜನಕದ ಮಹತ್ವ ಮನವರಿಕೆಯಾಗಿದೆ : ರಾಘವೇಂದ್ರ ಭಟ್ Rating: 5 Reviewed By: karavali Times
Scroll to Top