ಇಸ್ಪೀಟ್ ಅಡ್ಡೆಗೆ ಕಡಬ ಪೊಲೀಸರ ದಾಳಿ : ಓರ್ವ ಆರೋಪಿ ಸಹಿತ ವಾಹನಗಳು ವಶಕ್ಕೆ - Karavali Times ಇಸ್ಪೀಟ್ ಅಡ್ಡೆಗೆ ಕಡಬ ಪೊಲೀಸರ ದಾಳಿ : ಓರ್ವ ಆರೋಪಿ ಸಹಿತ ವಾಹನಗಳು ವಶಕ್ಕೆ - Karavali Times

728x90

29 August 2026

ಇಸ್ಪೀಟ್ ಅಡ್ಡೆಗೆ ಕಡಬ ಪೊಲೀಸರ ದಾಳಿ : ಓರ್ವ ಆರೋಪಿ ಸಹಿತ ವಾಹನಗಳು ವಶಕ್ಕೆ

 ಕಡಬ, ಆಗಸ್ಟ್ 29, 2026 (ಕರಾವಳಿ ಟೈಮ್ಸ್) : ಇಸ್ಪೀಟ್ ಅಡ್ಡೆಗೆ ಕಡಬ ಪೊಲೀಸರು ದಾಳಿ ನಡೆಸಿ ಓರ್ವನನ್ನು ಬಂಧಿಸಿ ವಾಹನಗಳನ್ನು ವಶಪಡಿಸಿಕೊಂಡ ಘಟನೆ ಹಳೆ ನೇರಂಕಿ ಗ್ರಾಮದ ಕುನ್ನಿಕು ಎಂಬಲ್ಲಿ ಆಗಸ್ಟ್ 28 ರಂದು ಸಂಜೆ ನಡೆದಿದೆ. 

ಆ 28 ರಂದು ಸಂಜೆ ಕಡಬ ಠಾಣಾ ವ್ಯಾಪ್ತಿಯ ಕಡಬ ಹಳೆನೆರೆಂಕಿ ಗ್ರಾಮದ ಕು£್ನಕು ಎಂಬಲ್ಲಿ ಹಣವನ್ನು ಪಣವಾಗಿಟ್ಟು ಇಸ್ಪೀಟ್ ಆಟ ಆಡುತ್ತಿರುವ ಬಗ್ಗೆ ಪಿಎಸ್ಸೈ ಜಂಬುರಾಜ್ ಮಹಾಜನ್ ಅವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಮೋಹನದಾಸ್ ರೈ ಎಂಬವರ ಜಾಗದಲ್ಲಿ ಕೃತ್ಯ ನಡೆಯುತ್ತಿರುವದು ಕಂಡುಬಂದಿದೆ. 

ದಾಳಿ ನಡೆಸಿದಾಗ ಕೃತ್ಯದಲ್ಲಿ ತೊಡಗಿದ್ದವರು ಪರಾರಿಯಾಗಿದ್ದು, ಅವರುಗಳ ಪೈಕಿ ಕಡಬ ಕುದ್ಮಾರು ನಿವಾಸಿ ಗುರುವ (44)  ಎಂಬಾತನನ್ನು ವಶಕ್ಕೆ ಪಡೆಯಲಾಗಿರುತ್ತದೆ. ಆಟವಾಡುತ್ತಿದ್ದ ಸ್ಥಳವನ್ನು ಪರಿಶೀಲಿಸಿದಾಗ   ಇಸ್ಪೀಟ್ ಆಟವಾಡಲು ಬಳಸುವ ಕಾರ್ಡ್ ಗಳು, 1,700/- ರೂಪಾಯಿ ನಗದು ಹಣ ಹಾಗೂ ಆರೋಪಿಗಳು ಬಿಟ್ಟು ಹೋಗಿದ್ದ 2 ದ್ವಿಚಕ್ರ ವಾಹನ, 1 ಕಾರು ಪತ್ತೆಯಾಗಿದ್ದು, ಅವುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ  ಕಡಬ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಇಸ್ಪೀಟ್ ಅಡ್ಡೆಗೆ ಕಡಬ ಪೊಲೀಸರ ದಾಳಿ : ಓರ್ವ ಆರೋಪಿ ಸಹಿತ ವಾಹನಗಳು ವಶಕ್ಕೆ Rating: 5 Reviewed By: karavali Times
Scroll to Top