ಕೃಷ್ಣ ಜನ್ಮಾಷ್ಠಮಿ ಹಾಗೂ ತೆನೆ ಹಬ್ಬ ಪ್ರಯುಕ್ತ ಸೆ 4 ಹಾಗೂ 8 ರಂದು ದ.ಕ. ಜಿಲ್ಲೆಯಲ್ಲಿ ರಜೆ ಘೋಷಿಸುವಂತೆ ಶಾಸಕ ಕಾಮತ್ ಮನವಿ - Karavali Times ಕೃಷ್ಣ ಜನ್ಮಾಷ್ಠಮಿ ಹಾಗೂ ತೆನೆ ಹಬ್ಬ ಪ್ರಯುಕ್ತ ಸೆ 4 ಹಾಗೂ 8 ರಂದು ದ.ಕ. ಜಿಲ್ಲೆಯಲ್ಲಿ ರಜೆ ಘೋಷಿಸುವಂತೆ ಶಾಸಕ ಕಾಮತ್ ಮನವಿ - Karavali Times

728x90

1 September 2026

ಕೃಷ್ಣ ಜನ್ಮಾಷ್ಠಮಿ ಹಾಗೂ ತೆನೆ ಹಬ್ಬ ಪ್ರಯುಕ್ತ ಸೆ 4 ಹಾಗೂ 8 ರಂದು ದ.ಕ. ಜಿಲ್ಲೆಯಲ್ಲಿ ರಜೆ ಘೋಷಿಸುವಂತೆ ಶಾಸಕ ಕಾಮತ್ ಮನವಿ

ಮಂಗಳೂರು, ಸೆಪ್ಟೆಂಬರ್ 01, 2026 ( ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಮತ್ತು ಕ್ರೈಸ್ತ ಸಮುದಾಯದವರ ಮರಿಯ ಜಯಂತಿ/ ತೆನೆ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸುವಂತೆ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರು ದ.ಕ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. 

ನಾಡಿನೆಲ್ಲೆಡೆ ಹಬ್ಬಗಳ ಸಂಭ್ರಮ ಆರಂಭವಾಗಿದ್ದು, ಸೆಪ್ಟೆಂಬರ್ 4 ರಂದು ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಅಸಂಖ್ಯಾತ ಭಕ್ತರು, ಶ್ರದ್ಧಾ ಭಕ್ತಿ ಹಾಗೂ ಸಂಭ್ರಮದಿಂದ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಿದ್ದಾರೆ. ಇದು ಕೇವಲ ಧಾರ್ಮಿಕ ಆಚರಣೆಯಾಗಿರದೇ, ಭಾರತೀಯ ಸಂಸ್ಕೃತಿ, ಕುಟುಂಬ ಮೌಲ್ಯಗಳು ಮತ್ತು ನೈತಿಕ ಶಿಕ್ಷಣವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಮಹತ್ವದ ಸಾಂಸ್ಕೃತಿಕ ಪರಂಪರೆಯಾಗಿದೆ. 

ಅದೇ ರೀತಿಯಲ್ಲಿ ಸೆಪ್ಟೆಂಬರ್ 8 ರಂದು ಕರಾವಳಿ ಭಾಗದಲ್ಲಿ ಕ್ರೈಸ್ತ ಸಮುದಾಯದವರು ಮರಿಯ ಜಯಂತಿ/ ತೆನೆ ಹಬ್ಬವನ್ನು ಅತ್ಯಂತ ವಿಶೇಷವಾಗಿ ಆಚರಿಸುವುದಾಗಿದ್ದು ಹಬ್ಬದ ಆಚರಣೆಗೆ ಅನುಕೂಲವಾಗುವಂತೆ ರಜೆ ಘೋಷಣೆ ಮಾಡಬೇಕೆಂದು ಆ ಸಮುದಾಯದ ಹಲವಾರು ಮುಖಂಡರು, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಪ್ರಮುಖರು, ಮನವಿ ಮಾಡಿದ್ದಾರೆ. ಈ ನಿಟ್ಟಿನಲ್ಲಿ ತಮ್ಮ ವಿವೇಚನೆಯಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಸೆಪ್ಟೆಂಬರ್ 4 ರಂದು ಶ್ರೀ ಕೃಷ್ಣ ಜನ್ಮಾಷ್ಠಮಿ ಹಾಗೂ ಸೆಪ್ಟೆಂಬರ್ 8 ರಂದು ಕ್ರೈಸ್ತ ಸಮುದಾಯದವರ ಮರಿಯ ಜಯಂತಿ/ ತೆನೆ ಹಬ್ಬಕ್ಕೆ ಸ್ಥಳೀಯ ರಜೆ ಘೋಷಿಸುವಂತೆ ಶಾಸಕರು ಕೋರಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಕೃಷ್ಣ ಜನ್ಮಾಷ್ಠಮಿ ಹಾಗೂ ತೆನೆ ಹಬ್ಬ ಪ್ರಯುಕ್ತ ಸೆ 4 ಹಾಗೂ 8 ರಂದು ದ.ಕ. ಜಿಲ್ಲೆಯಲ್ಲಿ ರಜೆ ಘೋಷಿಸುವಂತೆ ಶಾಸಕ ಕಾಮತ್ ಮನವಿ Rating: 5 Reviewed By: karavali Times
Scroll to Top