ಪದವು ಸೆಂಟ್ರಲ್ ವಾರ್ಡಿನ ಕ್ಯಾಸ್ತಲಿನೋ ಕಾಲೊನಿ ರಸ್ತೆ ಅಭಿವೃದ್ದಿಗೆ ಶಾಸಕ ಕಾಮತ್ ಶಿಲಾನ್ಯಾಸ - Karavali Times ಪದವು ಸೆಂಟ್ರಲ್ ವಾರ್ಡಿನ ಕ್ಯಾಸ್ತಲಿನೋ ಕಾಲೊನಿ ರಸ್ತೆ ಅಭಿವೃದ್ದಿಗೆ ಶಾಸಕ ಕಾಮತ್ ಶಿಲಾನ್ಯಾಸ - Karavali Times

728x90

11 September 2026

ಪದವು ಸೆಂಟ್ರಲ್ ವಾರ್ಡಿನ ಕ್ಯಾಸ್ತಲಿನೋ ಕಾಲೊನಿ ರಸ್ತೆ ಅಭಿವೃದ್ದಿಗೆ ಶಾಸಕ ಕಾಮತ್ ಶಿಲಾನ್ಯಾಸ

ಮಂಗಳೂರು, ಸೆಪ್ಟೆಂಬರ್ 11, 2026 (ಕರಾವಳಿ ಟೈಮ್ಸ್) : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 35ನೇ ಪದವು ಸೆಂಟ್ರಲ್ ವಾರ್ಡಿನ ಕ್ಯಾಸ್ತಲಿನೊ ಕಾಲೋನಿ ರಸ್ತೆ ಅಭಿವೃದ್ಧಿ ಕಾಮಗಾರಿಯು 50 ಲಕ್ಷ ರೂಪಾಯಿ  ವಿಶೇಷ ಅನುದಾನದಲ್ಲಿ ನಡೆಯಲಿದ್ದು, ಶಾಸಕ ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ಗುದ್ದಲಿ ಪೂಜೆ ನಡೆಯಿತು.

ಈ ವೇಳೆ ಮಾತನಾಡಿದ ಶಾಸಕರು, ಈ ಭಾಗದ ನಿಕಟಪೂರ್ವ ಪಾಲಿಕೆ ಸದಸ್ಯ ಕಿಶೋರ್ ಕೊಟ್ಟಾರಿಯವರು ಸ್ಥಳೀಯರ ಅನುಕೂಲಕ್ಕಾಗಿ ಇಲ್ಲಿ ಮ್ಯಾನ್ ಹೋಲ್ ಸಹಿತ ರಸ್ತೆಯ ಅಭಿವೃದ್ಧಿ ಆಗಬೇಕು ಎಂದು ಅನೇಕ ಬಾರಿ ಮನವಿ ಮಾಡಿದ್ದರು. ಅದರಂತೆ ರಾಜ್ಯ ಸರ್ಕಾರವು ಪ್ರತೀ ಶಾಸಕರಿಗೆ ನೀಡಿರುವ ಅತ್ಯಲ್ಪ ಅನುದಾನದಲ್ಲೇ ಈ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು. 

ಕಿಶೋರ್ ಕೊಟ್ಟಾರಿ ಮಾತನಾಡಿ ಏಳು ವರ್ಷಗಳ ಹಿಂದೆ ಈ ಶಕ್ತಿನಗರ ಭಾಗದಲ್ಲಿದ್ದ ಎಲ್ಲಾ ಮಣ್ಣಿನ ರಸ್ತೆಗಳು ಇಂದು ಕಾಂಕ್ರೀಟ್ ರಸ್ತೆಗಳಾಗಿ ಬದಲಾಗಿವೆ. ಇಂದು ಈ ವಾರ್ಡಿನ ಕೊನೆಯ ಕಾಮಗಾರಿಯೂ ನಡೆಯುತ್ತಿದ್ದು ಇದಕ್ಕೆ ಕಾರಣ ನಮ್ಮ ಶಾಸಕರು ಎಂದು ಹೆಮ್ಮೆಯಿಂದ ಹೇಳುತ್ತೇವೆ ಎಂದರು

ಪ್ರಮುಖರಾದ ತೇಜಸ್ ಕೊಂಗೂರು, ಹರೀಶ್ ರೈ, ಅಶ್ವಿತ್ ಕೊಟ್ಟಾರಿ, ರವೀಂದ್ರ ಕುಚ್ಚಿಕಾಡ್, ಲ್ಯಾನ್ಸಿ,  ಸತೀಶ್ ಕುಮಾರ್, ರಾಮ, ಪ್ರಕಾಶ್, ನವೀನ್, ವಾಸು ರಾಜೀವ ನಗರ, ಅರ್ಷಾದ್ ಪೆÇೀಪಿ, ನಾಗರಾಜ್ ನೀತಿ ನಗರ, ಜಿನ್ನಪ್ಪ ಮಹಾಕಾಳಿ, ಗ್ರೇಷನ್ ಕೊಂಗೂರು, ಸಾಗರ್, ಸಣ್ಣು, ಭಾಸ್ಕರ್ ಕಕ್ಕೆಬೆಟ್ಟು, ರಾಜೇಶ್, ಚಾರ್ಲಿ, ಜಯರಾಮ್, ಯಾದವ, ಲೋಕೇಶ್ ರಾಜೀವ ನಗರ್, ಗೋಪಾಲ್, ಹರೀಶ್ ಕೊಂಗೂರು ಮೊದಲಾದವರು ಉಪಸ್ಥಿತರಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಪದವು ಸೆಂಟ್ರಲ್ ವಾರ್ಡಿನ ಕ್ಯಾಸ್ತಲಿನೋ ಕಾಲೊನಿ ರಸ್ತೆ ಅಭಿವೃದ್ದಿಗೆ ಶಾಸಕ ಕಾಮತ್ ಶಿಲಾನ್ಯಾಸ Rating: 5 Reviewed By: karavali Times
Scroll to Top