ಬಂಟ್ವಾಳ : ಬೈಕಿಗೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದು ಸಹಸವಾರ ಮೃತ್ಯು, ಸವಾರಗೆ ಗಾಯ - Karavali Times ಬಂಟ್ವಾಳ : ಬೈಕಿಗೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದು ಸಹಸವಾರ ಮೃತ್ಯು, ಸವಾರಗೆ ಗಾಯ - Karavali Times

728x90

31 October 2026

ಬಂಟ್ವಾಳ : ಬೈಕಿಗೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದು ಸಹಸವಾರ ಮೃತ್ಯು, ಸವಾರಗೆ ಗಾಯ

ಬಂಟ್ವಾಳ, ಅಕ್ಟೋಬರ್ 31, 2026 (ಕರಾವಳಿ ಟೈಮ್ಸ್) : ಬಿ ಕಸಬಾ ಗ್ರಾಮದ ಮಣ್ಣಾಪು ಎಂಬಲ್ಲಿ ಬೈಕಿಗೆ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಸವಾರ ಮೃತಪಟ್ಟು ಸವಾರ ಗಾಯಗೊಂಡ ಘಟನೆ ಅ 30 ರಂದು ಸಂಭವಿಸಿದೆ. 

ಮೃತರನ್ನು ಗೋಪಾಲ ಹಾಗೂ ಗಾಯಾಳು ಸವಾರನನ್ನು ಝಕಾರಿಯಾ ಎಂದು ಹೆಸರಿಸಲಾಗಿದೆ. ಇವರು ಮಂಗಳೂರಿನ ಗಂಜಿಮಠ ಎಂಬಲ್ಲಿ ಕೆಲಸ ಮುಗಿಸಿಕೊಂಡು ರಾತ್ರಿ 7 ಗಂಟೆಗೆ ಬೈಕಿನಲ್ಲಿ ಬಿ ಸಿ ರೋಡು ಮಾರ್ಗವಾಗಿ ಬೆಳ್ತಂಗಡಿ ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ ಹಿಂದಿನಿಂದ ಅಫ್ರೀದ್ ಎಂಬವರು ಚಲಾಯಿಸಿಕೊಂಡು ಬಂದ ಕಾರು ಬೈಕಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. 

ಅಪಘಾತದ ತೀವ್ರತೆಗೆ ಇಬ್ಬರು ರಸ್ತೆಗೆಸೆಯಲ್ಟಟ್ಟು ಗಾಯಗೊಂಡಿದ್ದು, ಅವರನ್ನು ಸ್ಥಳೀಯರು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ತಲೆ, ಎದೆ, ಕೈಕಾಲು ಹಾಗೂ ಮೂಗಿಗೆ ಗಂಭೀರ ಗಾಯಗಳಾಗಿದ್ದ ಗೋಪಾಲ ಅವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮುಖಕ್ಕೆ ಹಾಗೂ ಬೆನ್ನಿಗೆ ಗಾಯಗಳಾಗಿರುವ ಸವಾರ ಝಕಾರಿಯಾ ಅವರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಈ ಬಗ್ಗೆ ಮೃತ ಗೋಪಾಲ ಅವರ ಸಹೋದರ ಸೀತಾರಾಮ ಅವರು ನೀಡಿದ ದೂರಿನಂತೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ : ಬೈಕಿಗೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದು ಸಹಸವಾರ ಮೃತ್ಯು, ಸವಾರಗೆ ಗಾಯ Rating: 5 Reviewed By: karavali Times
Scroll to Top