ಚೆನ್ನೈ ಎಗ್ಮೋರ್ ನಿಂದ ಮಂಗಳೂರು ಸೆಂಟ್ರಲ್ ಹಾಗೂ ಮಂಗಳೂರು ಸೆಂಟ್ರಲ್ ನಿಂದ ರಾಮೇಶ್ವರಂಗೆ ಏಕಮುಖ ವಿಶೇಷ ರೈಲುಗಳು - Karavali Times ಚೆನ್ನೈ ಎಗ್ಮೋರ್ ನಿಂದ ಮಂಗಳೂರು ಸೆಂಟ್ರಲ್ ಹಾಗೂ ಮಂಗಳೂರು ಸೆಂಟ್ರಲ್ ನಿಂದ ರಾಮೇಶ್ವರಂಗೆ ಏಕಮುಖ ವಿಶೇಷ ರೈಲುಗಳು - Karavali Times

728x90

17 October 2026

ಚೆನ್ನೈ ಎಗ್ಮೋರ್ ನಿಂದ ಮಂಗಳೂರು ಸೆಂಟ್ರಲ್ ಹಾಗೂ ಮಂಗಳೂರು ಸೆಂಟ್ರಲ್ ನಿಂದ ರಾಮೇಶ್ವರಂಗೆ ಏಕಮುಖ ವಿಶೇಷ ರೈಲುಗಳು

ಮಂಗಳೂರು, ಅಕ್ಟೋಬರ್ 17, 2026 (ಕರಾವಳಿ ಟೈಮ್ಸ್) : ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸುವ ಉದ್ದೇಶದಿಂದ, ಚೆನ್ನೈ ಎಗ್ಮೋರ್ ನಿಂದ ಮಂಗಳೂರು ಸೆಂಟ್ರಲಿಗೆ ಹಾಗೂ ಮಂಗಳೂರು ಸೆಂಟ್ರಲಿನಿಂದ ರಾಮೇಶ್ವರಂಗೆ ಏಕಮುಖ ಎಕ್ಸ್‍ಪ್ರೆಸ್ ವಿಶೇಷ ರೈಲುಗಳನ್ನು ಓಡಿಸಲು ದಕ್ಷಿಣ ರೈಲ್ವೆ ಅಧಿಸೂಚನೆ ಹೊರಡಿಸಿದೆ.

ರೈಲು ಸಂಖ್ಯೆ 06036 : ಚೆನ್ನೈ ಎಗ್ಮೋರ್-ಮಂಗಳೂರು ಸೆಂಟ್ರಲ್ ಏಕಮುಖ ಎಕ್ಸ್‍ಪ್ರೆಸ್ ವಿಶೇಷ ರೈಲು

ರೈಲು ಸಂಖ್ಯೆ 06036 ಚೆನ್ನೈ ಎಗ್ಮೋರ್-ಮಂಗಳೂರು ಸೆಂಟ್ರಲ್ ಎಕ್ಸ್‍ಪ್ರೆಸ್ ವಿಶೇಷ ರೈಲು ಅಕ್ಟೋಬರ್ 17ರ ಶನಿವಾರ ರಾತ್ರಿ 11.55 ಗಂಟೆಗೆ ಚೆನ್ನೈ ಎಗ್ಮೋರ್ ನಿಂದ ಹೊರಟು, ಮರುದಿನ ಅಂದರೆ ಅ 18 ರಂದು ಸಂಜೆ 7.45 ಗಂಟೆಗೆ ಮಂಗಳೂರು ಸೆಂಟ್ರಲ್ ತಲುಪಲಿದೆ.

ಈ ರೈಲು ಮಾರ್ಗಮಧ್ಯೆ ಪೆರಂಬೂರು, ತಿರುವಳ್ಳೂರು, ಅರಕ್ಕೋಣಂ ಜಂಕ್ಷನ್, ಕಾಟ್ಪಾಡಿ ಜಂಕ್ಷನ್, ಜೋಲಾರ್ ಪೇಟೈ ಜಂಕ್ಷನ್, ಸೇಲಂ ಜಂಕ್ಷನ್, ಈರೋಡ್ ಜಂಕ್ಷನ್, ತಿರುಪ್ಪೂರು, ಪೆÇದನೂರು ಜಂಕ್ಷನ್, ಪಾಲಕ್ಕಾಡ್ ಜಂಕ್ಷನ್, ಶೋರನೂರು ಜಂಕ್ಷನ್, ತಿರೂರು, ಕೋಝಿಕ್ಕೋಡ್, ವಡಕರ, ತಲಶ್ಶೇರಿ, ಕಣ್ಣೂರು, ಪಯ್ಯನ್ನೂರು, ನೀಲೇಶ್ವರಂ, ಕನ್ಹಂಗಡ್ ಮತ್ತು ಕಾಸರಗೋಡು ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿದೆ.

ರೈಲು ಸಂಖ್ಯೆ 06142 : ಮಂಗಳೂರು ಸೆಂಟ್ರಲ್-ರಾಮೇಶ್ವರಂ ಏಕಮುಖ ಎಕ್ಸ್‍ಪ್ರೆಸ್ ವಿಶೇಷ ರೈಲು, ರೈಲು ಸಂಖ್ಯೆ 06142 ಮಂಗಳೂರು ಸೆಂಟ್ರಲ್-ರಾಮೇಶ್ವರಂ ಎಕ್ಸ್‍ಪ್ರೆಸ್ ವಿಶೇಷ ರೈಲು ಅ 19 ರ ಸೋಮವಾರ ಬೆಳಿಗ್ಗೆ 4.15 ಗಂಟೆಗೆ ಮಂಗಳೂರು ಸೆಂಟ್ರಲಿನಿಂದ ಹೊರಟು, ಅದೇ ದಿನ ಸಂಜೆ 7.30ಕ್ಕೆ ರಾಮೇಶ್ವರಂ ತಲುಪಲಿದೆ.

ಈ ರೈಲು ಮಾರ್ಗಮಧ್ಯೆ ಕಾಸರಗೋಡು, ಕನ್ಹಂಗಡ್, ಪಯ್ಯನ್ನೂರು, ಕಣ್ಣೂರು, ತಲಶ್ಶೇರಿ, ವಡಕರ, ಕೋಝಿಕ್ಕೋಡ್, ತಿರೂರು, ಶೋರನೂರು ಜಂಕ್ಷನ್, ಪಾಲಕ್ಕಾಡ್ ಜಂಕ್ಷನ್, ಪಾಲಕ್ಕಾಡ್ ಟೌನ್, ಕೊಲ್ಲಂಗೋಡ್, ಪೆÇಲ್ಲಾಚಿ ಜಂಕ್ಷನ್, ಉದುಮಲೈಪೇಟೈ, ಪಳನಿ, ಒಟ್ಟಂಚತ್ರಂ, ದಿಂಡಿಗಲ್ ಜಂಕ್ಷನ್, ಮದುರೈ ಜಂಕ್ಷನ್, ಮನಮದುರೈ ಜಂಕ್ಷನ್, ಪರಮಕುಡಿ ಮತ್ತು ರಾಮನಾಥಪುರಂ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿದೆ.

ಬೋಗಿಗಳ ಸಂಯೋಜನೆ : ಈ ಎರಡೂ ವಿಶೇಷ ರೈಲುಗಳು ಒಟ್ಟು 21 ಬೋಗಿಗಳನ್ನು ಹೊಂದಿರಲಿವೆ. ಇವುಗಳಲ್ಲಿ ಪ್ರಥಮ ದರ್ಜೆ ಎಸಿ, ಎಸಿ ಟು ಟಯರ್, ಎಸಿ ತ್ರಿ ಟಯರ್, ಸ್ಲೀಪರ್ ಕ್ಲಾಸ್, ಸಾಮಾನ್ಯ ದರ್ಜೆ ಬೋಗಿಗಳು, ಲಗೇಜ್ ಕಮ್ ಬ್ರೇಕ್ ವ್ಯಾನ್ ಬೋಗಿಗಳು ಒಳಗೊಂಡಿರಲಿವೆ ಎಂದು ಮೈಸೂರು ವಿಭಾಗ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ಗಿರೀಶ ಧರ್ಮರಾಜ ಕಲಗೊಂಡ ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಚೆನ್ನೈ ಎಗ್ಮೋರ್ ನಿಂದ ಮಂಗಳೂರು ಸೆಂಟ್ರಲ್ ಹಾಗೂ ಮಂಗಳೂರು ಸೆಂಟ್ರಲ್ ನಿಂದ ರಾಮೇಶ್ವರಂಗೆ ಏಕಮುಖ ವಿಶೇಷ ರೈಲುಗಳು Rating: 5 Reviewed By: karavali Times
Scroll to Top