ಮಂಗಳೂರು, ಅಕ್ಟೋಬರ್ 11, 2026 (ಕರಾವಳಿ ಟೈಮ್ಸ್) : 2026ನೇ ಸಾಲಿನ ದಸರಾ ಹಬ್ಬದ ಪ್ರಯುಕ್ತ ಕೆ ಎಸ್ ಆರ್ ಟಿ ಸಿ ಮಂಗಳೂರು ವಿಭಾಗದಿಂದ ಸುತ್ತಮುತ್ತಲಿನ ದೇವಸ್ಥಾನಗಳು ಮತ್ತು ಪ್ರೇಕ್ಷಣೀಯ ಸ್ಥಳಗಳಿಗೆ ದಸರಾ ವಿಶೇಷ ಪ್ಯಾಕೇಜ್ ಪ್ರವಾಸಕ್ಕೆ ಅ 11 ರಂದು ಲಾಲ್ ಬಾಗ್ ಬಸ್ ನಿಲ್ದಾಣ ಆವರಣದಲ್ಲಿ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕೆ ಎಸ್ ಆರ್ ಟಿ ಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್, ಎಲ್ಲಾ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಶ್ರೀ ವಿದ್ಯಾಗಣಪತಿ ಸೇವಾ ಕಮಿಟಿಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಹಾಜರಿದ್ದರು.
ಅ 11 ರಂದು ತೆರಳಿದ ದಸರಾ ಪ್ರವಾಸ ವಿವರಗಳು :
ಮಂಗಳೂರಿನಿಂದ ತಲಕಾವೇರಿ ಭಾಗಮಂಡಲಕ್ಕೆ 147 ಪ್ರಯಾಣಿಕರನ್ನೊಳಗೊಂಡ 3 ಬಸ್ಸುಗಳು, ಕೊಲ್ಲೂರು ಪ್ಯಾಕೇಜ್ : 295 ಪ್ರಯಾಣಿಕರನ್ನೊಳಗೊಂಡ 6 ಬಸ್ಸುಗಳು, ಸಿಗಂದೂರು ಪ್ಯಾಕೇಜ್ : 240 ಪ್ರಯಾಣಿಕರನ್ನೊಳಗೊಂಡ 5 ಬಸ್ಸುಗಳು, ಶೃಂಗೇರಿ ಪ್ಯಾಕೇಜ್ : 245 ಪ್ರಯಾಣಿಕರನ್ನೊಳಗೊಂಡ 5 ಬಸ್ಸುಗಳು, ಮಂಗಳೂರು ನವದುರ್ಗಾ : 130 ಪ್ರಯಾಣಿಕರನ್ನೊಳಗೊಂಡ 3 ಬಸ್ಸುಗಳು, ಉಡುಪಿಯಿಂದ ಶೃಂಗೇರಿ ಪ್ಯಾಕೇಜ್ : 43 ಪ್ರಯಾಣಿಕರನ್ನೊಳಗೊಂಡ 1 ಬಸ್, ಕೊಲ್ಲೂರು ಪ್ಯಾಕೇಜ್ : 28 ಪ್ರಯಾಣಿಕರನ್ನೊಳಗೊಂಡ 1 ಬಸ್ ಸಹಿತ ಒಟ್ಟು 1128 ಪ್ರಯಾಣಿಕರನ್ನೊಳಗೊಂಡ 25 ಬಸ್ಸುಗಳು ಪ್ರಯಾಣ ಬೆಳೆಸಿತು.















0 comments:
Post a Comment