ಮಂಗಳೂರು, ಅಕ್ಟೋಬರ್ 12, 2026 (ಕರಾವಳಿ ಟೈಮ್ಸ್) : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಂಗಳೂರು ವಿಭಾಗದಿಂದ ಮಂಗಳೂರು-ಎರ್ನಾಕುಲಂ ಮಾರ್ಗದಲ್ಲಿ “ವೋಲ್ವೋ ಮಲ್ಟಿ ಆಕ್ಸಿಲ್” ಬಸ್ ಹಾಗೂ ಮಂಗಳೂರು-ತಿರುಪತಿ ಮತ್ತು ಮಂಗಳೂರು-ಹೈದರಾಬಾದ್, ಮಾರ್ಗದಲ್ಲಿ ಹೊಸದಾಗಿ ”ಪಲ್ಲಕ್ಕಿ ನಾನ್ ಎಸಿ ಸ್ಲೀಪರ್” ಬಸ್ ಸೇವೆಗಳನ್ನು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಅಕ್ಟೋಬರ್ 12ರಿಂದ ಪ್ರಾರಂಭಿಸಲಾಗಿದೆ. ಈ ಬಸ್ಸುಗಳಿಗೆ ಕೆ ಎಸ್ ಆರ್ ಟಿ ಸಿ ವೆಬ್ ಸೈಟ್ ಪೋರ್ಟಲಿನಲ್ಲಿ ಮುಂಗಡ ಬುಕ್ಕಿಂಗ್ ವ್ಯವಸ್ಥೆ ಇರುತ್ತದೆ.
ಬಸ್ ಸಮಯ, ಪ್ರಯಾಣ ದರ ಹಾಗೂ £ಲುಗಡೆಗಳ ವಿವರ :
ಮಂಗಳೂರು-ಎರ್ನಾಕುಲಂ (ಮಲ್ಟಿ ಆಕ್ಸಿಲ್) ರಾತ್ರಿ 9 ಗಂಟೆಗೆ ಹೊರಡಲಿದ್ದು, ಪ್ರಯಾಣ ದರ 1,000/- ರೂಪಾಯಿ.
ಎರ್ನಾಕುಲಂ-ಮಂಗಳೂರು (ಮಲ್ಟಿ ಆಕ್ಸಿಲ್) ರಾತ್ರಿ 8.30 ಗಂಟೆಗೆ ಹೊರಡಲಿದ್ದು, ಪ್ರಯಾಣ ದರ 1,000/- ರೂಪಾಯಿ
ಮಂಗಳೂರು-ತಿರುಪತಿ (ಪಲ್ಲಕ್ಕಿ ನಾನ್ ಎಸಿ ಸ್ಲೀಪರ್) ಮಧ್ಯಾಹ್ನ 12 ಗಂಟೆಗೆ ಹೊರಡಲಿದ್ದು, ಪ್ರಯಾಣ ದರ 1,600/- ರೂಪಾಯಿ.
ತಿರುಪತಿ-ಮಂಗಳೂರು (ಪಲ್ಲಕ್ಕಿ ನಾನ್ ಎಸಿ ಸ್ಲೀಪರ್) ಸಂಜೆ 5.30 ಗಂಟೆಗೆ ಹೊರಡಲಿದ್ದು, ಪ್ರಯಾಣ ದರ 1,600/- ರೂಪಾಯಿ.
ಮಂಗಳೂರು-ಹೈದರಾಬಾದ್, (ಪಲ್ಲಕ್ಕಿ ನಾನ್ ಎಸಿ ಸ್ಲೀಪರ್) ಮಧ್ಯಾಹ್ನ 1 ಗಂಟೆಗೆ ಹೊರಡಲಿದ್ದು, ಪ್ರಯಾಣ ದರ 1,800/- ರೂಪಾಯಿ.
ಹೈದರಾಬಾದ್-ಮಂಗಳೂರು (ಪಲ್ಲಕ್ಕಿ ನಾನ್ ಎಸಿ ಸ್ಲೀಪರ್) ಮಧ್ಯಾಹ್ನ 4 ಗಂಟೆಗೆ ಹೊರಡಲಿದ್ದು, ಪ್ರಯಾಣ ದರ 1,800/- ರೂಪಾಯಿ ದರ ನಿಗದಿಪಡಿಸಲಾಗಿದೆ.
ಸಾರ್ವಜನಿಕ ಪ್ರಯಾಣಿಕರು ಸಾರಿಗೆ ಸೌಲಭ್ಯದ ಸದುಪಯೋಗ ಪಡೆದುಕೊಳ್ಳುವಂತೆ ಕೆ.ಎಸ್.ಆರ್.ಟಿ.ಸಿ ಮಂಗಳೂರು ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












0 comments:
Post a Comment