ಬೆಳೆ ವಿಮೆ : ರೈತರಿಗೆ ನ್ಯಾಯಯುತ ಪರಿಹಾರಕ್ಕೆ ಜಿಲ್ಲಾ ಕೃಷಿಕ ಸಮಾಜ ಆಗ್ರಹ - Karavali Times ಬೆಳೆ ವಿಮೆ : ರೈತರಿಗೆ ನ್ಯಾಯಯುತ ಪರಿಹಾರಕ್ಕೆ ಜಿಲ್ಲಾ ಕೃಷಿಕ ಸಮಾಜ ಆಗ್ರಹ - Karavali Times

728x90

29 October 2026

ಬೆಳೆ ವಿಮೆ : ರೈತರಿಗೆ ನ್ಯಾಯಯುತ ಪರಿಹಾರಕ್ಕೆ ಜಿಲ್ಲಾ ಕೃಷಿಕ ಸಮಾಜ ಆಗ್ರಹ

ಮಂಗಳೂರು, ಅಕ್ಟೋಬರ್ 29, 2026 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾ ಕೃಷಿಕ ಸಮಾಜದ ಕಾರ್ಯಕಾರಿ ಮಂಡಳಿ ಸಭೆಯು ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ವಿಜಯ ರೈ ಕೋರಂಗ ಅಧ್ಯಕ್ಷತೆಯಲ್ಲಿ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ನಡೆಯಿತು.  

ಬೆಳೆ ವಿಮಾ ಪರಿಹಾರ ಮತ್ತು ಪಾವತಿಯಲ್ಲಿ ತಾರತಮ್ಯ ಆಗಿದ್ದು ಅನೇಕ ರೈತರಿಗೆ ಕಡಿಮೆ ಪರಿಹಾರ ಪಾವತಿಯಾಗಿರುವ ಬಗ್ಗೆ ಚರ್ಚೆ ನಡೆಸಲಾಯಿತು ಅವರಿಗೆ ತಕ್ಷಣ ನ್ಯಾಯಯುತ ಪರಿಹಾರವನ್ನು ನೀಡುವಂತೆ ಸರಕಾರವನ್ನು ಒತ್ತಾಯ ಮಾಡುವ ಬಗ್ಗೆ ನಿರ್ಣಯಿಸಲಾಯಿತು. ಮುಂದಿನ ವರ್ಷದ ಹೊಸ ಟರ್ಮ್ ಶೀಟನ್ನು ತಯಾರು ಮಾಡುವ ಸಂದರ್ಭ ಈಗಿರುವ ಸಮಸ್ಯೆಗಳನ್ನು ಪರಿಹರಿಸುವುದರ ಜೊತೆಗೆ ಕೃಷಿಕರ ಬೇಡಿಕೆಯನ್ನು ಪರಿಗಣಿಸಬೇಕೆಂದು ಹಾಗೂ ತಾಂತ್ರಿಕ ಮತ್ತು ಭೌಗೋಳಿಕ ಮಾಹಿತಿಗಳ ಬೇಡಿಕೆ ಪಟ್ಟಿಯನ್ನು ರಾಜ್ಯ ಕೃಷಿಕ ಸಮಾಜದ ಮೂಲಕ ರಾಜ್ಯ ಸರಕಾರಕ್ಕೆ ಸಲ್ಲಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.

ತೋಟಗಾರಿಕಾ ಇಲಾಖೆಯಿಂದ ಸಬ್ಸಿಡಿಯಲ್ಲಿ ಸಿಗುವ ಸೋಲಾರ್ ಪಂಪ್ ಸೆಟ್ ಗಳನ್ನು ಪ್ರತಿ ತಾಲೂಕಿಗೆ ಕನಿಷ್ಠ 10 ಘಟಕಗಳನ್ನು ನೀಡುವ ಬಗ್ಗೆ ಸರಕಾರಕ್ಕೆ ಆಗ್ರಹಿಸಲಾಯಿತು. ಬರಪೀಡಿತ ತಾಲೂಕಿನಲ್ಲಿ ಭತ್ತ ಬೆಳೆಯುವ ರೈತರಿಗೆ ಪ್ರತಿ ಹೆಕ್ಟರಿಗೆ 8,500/- ರೂಪಾಯಿಗಳ ಸಹಾಯಧನವನ್ನು ನೀಡುವ ಬಗ್ಗೆ ಜಂಟಿ ಕೃಷಿ ನಿರ್ದೇಶಕರು ತಿಳಿಸಿ ರೈತರು ಇದರ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ತಾಲೂಕು ಕೃಷಿ ಇಲಾಖೆಯಲ್ಲಿ ಸಬ್ಸಿಡಿ ದರದಲ್ಲಿ ಪಿವಿಸಿ ಪೈಪ್ ಗಳನ್ನು ವಿತರಿಸಲಾಗುತ್ತಿದ್ದು, ರೈತರು ತಮ್ಮ ತಾಲೂಕು ನಿರ್ದೇಶಕರ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದು ಎಂದವರು ಹೇಳಿದರು. ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಕೃಷಿ ವಿಜ್ಞಾನ ಕೇಂದ್ರದಿಂದ ಅಣಬೆ ಕೃಷಿ ಮಾಡಲು ಪ್ರೋತ್ಸಾಹ ನೀಡುತ್ತಿದ್ದು, ತರಬೇತಿ ಹಾಗೂ ಬ್ಯಾಂಕುಗಳಿಂದ ಸಾಲ ಸೌಲಭ್ಯ ಮಾಡಿಕೊಡಲಾಗುವುದು ಎಂದರು. ಸಣ್ಣ ನೀರಾವರಿ ಇಲಾಖೆಯಿಂದ ತಯಾರಿಸಿದ ಆಣೆಕಟ್ಟುಗಳ ಸಮರ್ಪಕ ನಿರ್ವಹಣೆ ಬಗ್ಗೆ ಸರ್ಕಾರವು ಗಮನಹರಿಸಬೇಕೆಂದು ಬರೆದುಕೊಳ್ಳಲಾಯಿತು. 

ಸಭೆಯಲ್ಲಿ ರಾಜ್ಯ ಪ್ರತಿನಿಧಿ ಪದ್ಮನಾಭ ರೈ, ಕಾರ್ಯದರ್ಶಿ ರಾಕೇಶ್ ರೈ ಕೇಡೆಂಜಿ, ಕೋಶಾಧಿಕಾರಿ ಕುಸುಮಾಧರ ಸುಳ್ಯ, ಸಂಜೀವ ಮಟದೂರು, ದೇವದಾಸ್ ಭಂಡಾರಿ ಉಳ್ಳಾಲ, ರಾಜು ಪೂಜಾರಿ ಬೆಳ್ತಂಗಡಿ, ಮಹಾವೀರ ಜೈನ್ ಬೆಳ್ತಂಗಡಿ, ಮಹೇಶ್ ಕೆ ಸವಣೂರು, ಪದ್ಮರಾಜ ಬಳ್ಳಾಲ್ ಬಂಟ್ವಾಳ, ಮುಖ್ಯ ಪಶು ವೈದ್ಯಾಧಿಕಾರಿ ಡಾ. ವಸಂತ ಕುಮಾರ್ ಶೆಟ್ಟಿ, ರೇಷ್ಮೆ ಸಹಾಯಕ ನಿರ್ದೇಶಕಿ ಶಾಂಭವಿ, ಸಹಾಯಕ ತೋಟಗಾರಿಕಾ ಅಧಿಕಾರಿ ದರ್ಶನ್ ಜಿ, ಕೆ.ವಿ.ಕೆ ಮುಖ್ಯಸ್ಥ ಡಾ. ಜಿ.ಟಿ ರಮೇಶ್, ಕೆ.ವಿ.ಕೆ ವಿಜ್ಞಾನಿ ಡಾ. ಹರೀಶ್ ಭಾಗವಹಿಸಿರಿದ್ದರು. ಜಂಟಿ ಕೃಷಿ ನಿರ್ದೇಶಕ ಡಾ. ಹೊನ್ನಪ್ಪ ಗೋವಿಂದ ಗೌಡ ವಂದಿಸಿದರು. 

  • Blogger Comments
  • Facebook Comments

0 comments:

Post a Comment

Item Reviewed: ಬೆಳೆ ವಿಮೆ : ರೈತರಿಗೆ ನ್ಯಾಯಯುತ ಪರಿಹಾರಕ್ಕೆ ಜಿಲ್ಲಾ ಕೃಷಿಕ ಸಮಾಜ ಆಗ್ರಹ Rating: 5 Reviewed By: karavali Times
Scroll to Top