ನಿಷೇಧಿತ ಕೇರಳ ಲಾಟರಿ ಮಾರಾಟ ಪ್ರಕರಣ ಬೇಧಿಸಿದ ಪುತ್ತೂರು ಪೊಲೀಸರು : 2 ಪ್ರತ್ಯೇಕ ಪ್ರಕರಣ ದಾಖಲು - Karavali Times ನಿಷೇಧಿತ ಕೇರಳ ಲಾಟರಿ ಮಾರಾಟ ಪ್ರಕರಣ ಬೇಧಿಸಿದ ಪುತ್ತೂರು ಪೊಲೀಸರು : 2 ಪ್ರತ್ಯೇಕ ಪ್ರಕರಣ ದಾಖಲು - Karavali Times

728x90

15 October 2026

ನಿಷೇಧಿತ ಕೇರಳ ಲಾಟರಿ ಮಾರಾಟ ಪ್ರಕರಣ ಬೇಧಿಸಿದ ಪುತ್ತೂರು ಪೊಲೀಸರು : 2 ಪ್ರತ್ಯೇಕ ಪ್ರಕರಣ ದಾಖಲು

ಪುತ್ತೂರು, ಅಕ್ಟೋಬರ್ 15, 2026 (ಕರಾವಳಿ ಟೈಮ್ಸ್) : ನಿಷೇಧಿತ ಕೇರಳ ರಾಜ್ಯದ ಲಾಟರಿ ಮಾರಾಟ ಮಾಡುತ್ತಿದ್ದ ಎರಡು ಅಂಗಡಿಗಳ ದಾಳಿ ನಡೆಸಿದ ಪುತ್ತೂರು ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. 

ಅಕ್ಟೋಬರ್ 14 ರಂದು ಸಂಜೆ ವೇಳೆ, ಪುತ್ತೂರು ಕಸಬ ಗ್ರಾಮದ ಮುಖ್ಯ ರಸ್ತೆಯಲ್ಲಿರುವ ಅಂಗಡಿಯೊಂದರಲ್ಲಿ  ಅಕ್ರಮವಾಗಿ ನಿಷೇಧಿತ ಕೇರಳ ರಾಜ್ಯದ ಲಾಟರಿ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣಾ ಎಎಸೈ ವಾಸು ನಾಯ್ಕ್ ನೇತೃತ್ವದ ಪೊಲೀಸರು ಅಂಗಡಿ ಮಾಲಿಕ ಪುತ್ತೂರು ಕಸಬಾ ನಿವಾಸಿ ಶ್ರೀನಿವಾಸ ಪೈ (33) ಎಂಬವರನ್ನು ವಿಚಾರಣೆ ನಡೆಸಿದಾಗ ಅವÀರು ಕೇರಳ ರಾಜ್ಯದ ಲಾಟರಿಯನ್ನು ತಂದು ಅಕ್ರಮವಾಗಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದು, ಮಾರಾಟಕ್ಕಾಗಿ ತಂದಿದ್ದ ಲಾಟರಿ ಟಿಕೆಟ್ ಗಳನ್ನು ಹಾಜರುಪಡಿಸಿರುತ್ತಾರೆ. ಅವುಗಳನ್ನು ಸ್ವಾಧೀನಪಡಿಸಿ ಈ ಬಗ್ಗೆ ಪುತ್ತೂರು ನಗರ  ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

ಮುಂದುವರಿದಂತೆ, ಪುತ್ತೂರು ಕಸಬಾ  ಗ್ರಾಮದ ಲಿನೆಟ್ ಜಂಕ್ಷನ್ ಬಳಿ ಪಾನ್ ಸ್ಟಾಲ್ ಅಂಗಡಿಯಲ್ಲಿ ಅಕ್ರಮವಾಗಿ ನಿಷೇಧಿತ ಕೇರಳ ರಾಜ್ಯದ ಲಾಟರಿ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ, ಪುತ್ತೂರು ನಗರ ಪೊಲೀಸ್ ಠಾಣಾ ಎಎಸ್ಸೈ ಗಂಗಾಧರ ಎ ಬಿ  ಅವರ ನೇತೃತ್ವದ ಪೊಲೀಸರು ಸ್ಥಳಕ್ಕೆ ತೆರಳಿ ಅಂಗಡಿಯ ಮಾಲಿಕ ಪಡ್ನೂರು ಗ್ರಾಮದ ನಿವಾಸಿ ಲಕ್ಷ್ಮಣ (42) ಎಂಬವರನ್ನು ವಿಚಾರಿಸಿದ್ದು, ಕರ್ನಾಟಕ ರಾಜ್ಯದ ನಿಷೇಧಿತ ಲಾಟರಿಯನ್ನು ಕೇರಳದಿಂದ ತಂದು ಅಕ್ರಮವಾಗಿ ಮಾರಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡು ಮಾರಾಟಕ್ಕಾಗಿ ತಂದಿದ್ದ ಲಾಟರಿ ಟಿಕೆಟ್ ಗಳನ್ನು ತೆಗೆದು ಹಾಜರುಪಡಿಸಿರುತ್ತಾರೆ. ಅವುಗಳನ್ನು ಸ್ವಾಧೀನಪಡಿಸಿ ಈ ಬಗ್ಗೆ ಪುತ್ತೂರು ನಗರ  ಪೆÇಲೀಸ್ ಠಾಣೆಯಲ್ಲಿ ಲಾಟರಿ £ಷೇಧ ಕಾಯ್ದೆ 1998ರಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ನಿಷೇಧಿತ ಕೇರಳ ಲಾಟರಿ ಮಾರಾಟ ಪ್ರಕರಣ ಬೇಧಿಸಿದ ಪುತ್ತೂರು ಪೊಲೀಸರು : 2 ಪ್ರತ್ಯೇಕ ಪ್ರಕರಣ ದಾಖಲು Rating: 5 Reviewed By: karavali Times
Scroll to Top