ಮಂಚಿ : ಟೆಲಿಫೋನ್ ಎಕ್ಸ್ ಚೇಂಜಿಗೆ ನುಗ್ಗಿ ತಾಮ್ರದ ತಂತಿ ಕಳವುಗೈದ ಖದೀಮರು - Karavali Times ಮಂಚಿ : ಟೆಲಿಫೋನ್ ಎಕ್ಸ್ ಚೇಂಜಿಗೆ ನುಗ್ಗಿ ತಾಮ್ರದ ತಂತಿ ಕಳವುಗೈದ ಖದೀಮರು - Karavali Times

728x90

26 October 2026

ಮಂಚಿ : ಟೆಲಿಫೋನ್ ಎಕ್ಸ್ ಚೇಂಜಿಗೆ ನುಗ್ಗಿ ತಾಮ್ರದ ತಂತಿ ಕಳವುಗೈದ ಖದೀಮರು

ಬಂಟ್ವಾಳ, ಅಕ್ಟೋಬರ್ 26, 2026 (ಕರಾವಳಿ ಟೈಮ್ಸ್) : ಮಂಚಿ ಗ್ರಾಮದ ಬಿ ಎಸ್ ಎನ್ ಎಲ್ ಟೆಲಿಫೋನ್ ಎಕ್ಸ್ ಚೇಂಜಿಗೆ ನುಗ್ಗಿದ ಕಳ್ಳರು ತಾಮ್ರದ ಕೇಬಲ್ ಕಳವುಗೈದ ಘಟನೆ ಅ 23 ರಂದು ಬೆಳಕಿಗೆ ಬಂದಿದ್ದು, ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಈ ಬಗ್ಗೆ ಬಿ ಎಸ್ ಎನ್ ಎಲ್ ಟವರ್ ಟೆಕ್ನಿಷಿಯನ್ ಚಂದ್ರಶೇಖರ ನಾಯ್ಕ (45) ಅವರು ಪೊಲೀಸರಿಗೆ ದೂರು ನೀಡಿದ್ದು, ಇವರು ಅ 23 ರ ಬೆಳಿಗ್ಗೆ ಮೊಬೈಲ್ ಆಪ್ ನಲ್ಲಿ ಟವರ್‍ಗಳ ಕಾರ್ಯನಿರ್ವಹಿಸುವಿಕೆಯನ್ನು ಪರಿಶೀಲಿಸಿದಾಗ ಪಣೋಲಿಬೈಲು ಹಾಗೂ ಇರಾದ ಮೊಬೈಲ್ ಟವರ್ ಗಳು ಏಕ ಕಾಲಕ್ಕೆ ಡೌನ್ ಆಗಿರುವುದು ತಿಳಿದು ಬಂದು ಅವುಗಳು ಬಂಟ್ವಾಳ ತಾಲೂಕು ಮಂಚಿ ಗ್ರಾಮದ ಬಿ ಎಸ್ ಎನ್ ಎಲ್  ಟೆಲಿಪೆÇೀನ್ ಎಕ್ಸ್ ಚೇಂಜಿನಲ್ಲಿ ಅಳವಡಿಸಿರುವ ಉಪಕರಣಕ್ಕೆ ಜೋಡನೆ ಆಗಿರುವುದರಿಂದ ಮಂಚಿ ಗ್ರಾಮದ ಬಿ ಎಸ್ ಎನ್ ಎಲ್  ಟೆಲಿಪೆÇೀನ್ ಎಕ್ಸ್ ಚೇಂಜಿಗೆ ಬೇಟಿ ನೀಡಿ ನೋಡಿದಾಗ ಬಿ ಎಸ್ ಎನ್ ಎಲ್  ಟೆಲಿಪೆÇೀನ್ ಎಕ್ಸ್ ಚೇಂಜಿನ ಎದುರಿನ ಬಾಗಿಲು ತೆರದಿದ್ದು ಕಂಡು ಬಂದಿದೆ. ಒಳಗೆ ಹೋಗಿ ಪರಿಶೀಲಿಸಿದಾಗ ಎಕ್ಸ್ ಚೇಂಜ್ ರೂಮಿನ ಬಾಗಿಲುಗಳನ್ನು ಯಾರೋ ಒಡೆದು ಬ್ಯಾಟರಿಯಿಂದ ಉಪಕರಣಗಳಿಗೆ ಅಳವಡಿಸಿದ್ದ ತಾಮ್ರದ 100 ಎಸ್ ಜಿ ಎಂ ಎಂ ಸುಮಾರು 20 ಮೀಟರ್ ಉದ್ದದ ಎರಡು ಕೇಬಲ್ ಗಳು ಹಾಗೂ 6 ಮೀಟರ್ ನಷ್ಟು ಉದ್ದದ ಎರಡು ಕೇಬಲ್ ಗಳನ್ನು ತುಂಡರಿಸಿ ಕದ್ದಿರುವುದು ಗಮನಕ್ಕೆ ಬಂದಿರುತ್ತದೆ ಎಂದು ನೀಡಿದ ದೂರಿನ ಮೇರೆಗೆ ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಮಂಚಿ : ಟೆಲಿಫೋನ್ ಎಕ್ಸ್ ಚೇಂಜಿಗೆ ನುಗ್ಗಿ ತಾಮ್ರದ ತಂತಿ ಕಳವುಗೈದ ಖದೀಮರು Rating: 5 Reviewed By: karavali Times
Scroll to Top