ಮಾಣಿಲ ಸ್ವಾಮೀಜಿಗೆ ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಆಹ್ವಾನ : ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ ನೇತೃತ್ವದ ಬಂಟ್ವಾಳ ಮುಖಂಡರಿಂದ ಅಭಿನಂದನೆ - Karavali Times ಮಾಣಿಲ ಸ್ವಾಮೀಜಿಗೆ ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಆಹ್ವಾನ : ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ ನೇತೃತ್ವದ ಬಂಟ್ವಾಳ ಮುಖಂಡರಿಂದ ಅಭಿನಂದನೆ - Karavali Times

728x90

10 October 2026

ಮಾಣಿಲ ಸ್ವಾಮೀಜಿಗೆ ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಆಹ್ವಾನ : ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ ನೇತೃತ್ವದ ಬಂಟ್ವಾಳ ಮುಖಂಡರಿಂದ ಅಭಿನಂದನೆ

ಬಂಟ್ವಾಳ, ಅಕ್ಟೋಬರ್ 10, 2026 (ಕರಾವಳಿ ಟೈಮ್ಸ್) : ವಿಶ್ವ ಖ್ಯಾತಿಯ ಮೈಸೂರು ದಸರಾ ಉದ್ಘಾಟನಾ  ಕಾರ್ಯಕ್ರಮಕ್ಕೆ ಬಂಟ್ವಾಳ ತಾಲೂಕಿನ ಮಾಣಿಲ ಶ್ರೀ ಧಾಮದ ಯೋಗಿ ಕೌಸ್ತುಭ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರಿಗೆ ಆಹ್ವಾನ ಬಂದಿರುವ ಹಿನ್ನಲೆಯಲ್ಲಿ ಗೌರವಾರ್ಥವಾಗಿ ಬುಡಾ ಮಾಜಿ ಅಧ್ಯಕ್ಷ ಸದಾಶೀವ ಬಂಗೇರ ಅವರ ನೇತೃತ್ವದ ಬಂಟ್ವಾಳದ ಮುಖಂಡರು ಸ್ವಾಮೀಜಿಗಳ ಸನ್ನಿಧಿಗೆ ಭೇಟಿ ನೀಡಿ ಗೌರವಪೂರ್ವಕವಾಗಿ ಅಭಿನಂದಿಸಿದರು. 

ವಿಟ್ಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಮಾನಾಥ ವಿಟ್ಲ, ಸಜಿಪಮುನ್ನೂರು ಮಲರಾಯ ದೈವದ  ಗಡಿ ಪ್ರಧಾನ ಸುಕುಮಾರ್ ಬಂಟ್ವಾಳ, ಪಣೋಲಿಬೈಲು ಭಂಡಾರ ಮನೆಯ ರಮೇಶ್ ಪಣೋಲಿಬೈಲು, ಝೀ ಕನ್ನಡ ಐಡಲ್ ರಾಜ್ಯ ಪ್ರಶಸ್ತಿ ಪುರಸ್ಕøತ ಸದಾನಂದ ಬಂಗೇರ ನಿಯೋಗದಲ್ಲಿದ್ದರು. ಇದೇ ವೇಳೆ ಝೀ ಕನ್ನಡ ಐಡಲ್  ಪ್ರಶಸ್ತಿ ಪುರಸ್ಕøತ ಸದಾನಂದ ಬಂಗೇರ ಹೋಟೆಲ್ ಸಾಯಿ ಲೀಲಾ ಅವರನ್ನು ಸ್ವಾಮೀಜಿಗಳು ಕ್ಷೇತ್ರದ ಪ್ರಸಾದ ನೀಡಿ ಅಭಿನಂದಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಮಾಣಿಲ ಸ್ವಾಮೀಜಿಗೆ ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಆಹ್ವಾನ : ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ ನೇತೃತ್ವದ ಬಂಟ್ವಾಳ ಮುಖಂಡರಿಂದ ಅಭಿನಂದನೆ Rating: 5 Reviewed By: karavali Times
Scroll to Top