ಬೆಂಗಳೂರು, ಅಕ್ಟೋಬರ್ 29, 2026 (ಕರಾವಳಿ ಟೈಮ್ಸ್) : ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿ, ಸಿಸಿಟಿವಿ ದೃಶ್ಯಾವಳಿಗಳ ನೆರವು ಹಾಗೂ ಸರ್ಕಾರಿ ರೈಲ್ವೆ ಪೆÇಲೀಸ್ (ಜಿ ಆರ್ ಪಿ) ಇಲಾಖೆಯ ಸಹಕಾರದೊಂದಿಗೆ ನಾಪತ್ತೆಯಾಗಿದ್ದ 15 ವರ್ಷದ ಬಾಲಕನನ್ನು ಯಶಸ್ವಿಯಾಗಿ ಪತ್ತೆಹಚ್ಚಿದ್ದಾರೆ.
ಅಕ್ಟೋಬರ್ 28 ರಂದು ಬೆಂಗಳೂರು ನಗರ ರೈಲು ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಯಾಣ ಟಿಕೆಟ್ ಪರೀಕ್ಷಕ (ಟಿಟಿಇ) ಇಂದ್ರಜಿತ್ ಅವರ ಮಗ ನಾಪತ್ತೆಯಾಗಿರುವ ಬಗ್ಗೆ ಹಿರಿಯ ವಿಭಾಗೀಯ ಭದ್ರತಾ ಆಯುಕ್ತರು, ಮೈಸೂರು ಅವರಿಂದ ಮೈಸೂರು ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿಗೆ ಮಾಹಿತಿ ಲಭಿಸಿತು. ತಕ್ಷಣ ಕಾರ್ಯಪ್ರವೃತ್ತರಾದ ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿ, ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹಿಸಿ, ನಾಪತ್ತೆಯಾಗಿದ್ದ ಸುಮಾರು 15 ವರ್ಷದ ಶುಭಂ ಎಂಬ ಬಾಲಕನು ಬೆಂಗಳೂರು ನಗರ ರೈಲು ನಿಲ್ದಾಣದಲ್ಲಿ ರೈಲು ಸಂಖ್ಯೆ 16551 (ಚೆನ್ನೈ ಸೆಂಟ್ರಲ್ ಮೈಸೂರು) ರೈಲಿನ ಡಿ-9 ಬೋಗಿಯಲ್ಲಿ ಪ್ರಯಾಣ ಆರಂಭಿಸಿದ್ದಾನೆ ಎಂಬುದನ್ನು ತಿಳಿದುಕೊಂಡರು.
ನಂತರ ಮೈಸೂರು ರೈಲು ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಬಾಲಕನು ಅ 27 ರಂದು ರಾತ್ರಿ ಸುಮಾರು 10.47ಕ್ಕೆ ಮೈಸೂರು ರೈಲು ನಿಲ್ದಾಣದಲ್ಲಿ ರೈಲಿನಿಂದ ಇಳಿದಿರುವುದು ದೃಢಪಟ್ಟಿತು.
ಈ ಮಾಹಿತಿಯನ್ನು ತಕ್ಷಣವೇ ಸರ್ಕಾರಿ ರೈಲ್ವೆ ಪೆÇಲೀಸ್, ಮೈಸೂರು ಹಾಗೂ ಬಾಲಕನ ಪೆÇೀಷಕರಿಗೆ ತಿಳಿಸಲಾಯಿತು. ಬಳಿಕ ಜಿ ಆರ್ ಪಿ ಮೈಸೂರು ಪೆÇಲೀಸರ ಸಹಕಾರದೊಂದಿಗೆ ಬಾಲಕನ ಪತ್ತೆಗಾಗಿ ಶೋಧ ಕಾರ್ಯಾಚರಣೆ ಕೈಗೊಳ್ಳಲಾಯಿತು. ರೈಲ್ವೆ ರಕ್ಷಣಾ ಪಡೆ ಮತ್ತು ಸರ್ಕಾರಿ ರೈಲ್ವೆ ಪೆÇಲೀಸರ ಸಮಯೋಚಿತ ಕ್ರಮ ಹಾಗೂ ಸಮನ್ವಯದ ಪ್ರಯತ್ನಗಳ ಫಲವಾಗಿ ಬಾಲಕನನ್ನು ತಾಂಡವಪುರ ರೈಲು ನಿಲ್ದಾಣದಲ್ಲಿ ಪತ್ತೆಹಚ್ಚಲಾಯಿತು. ನಂತರ ಬಾಲಕನನ್ನು ಜಿ ಆರ್ ಪಿ ಕಚೇರಿಗೆ ಕರೆತಂದು, ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ಸುರಕ್ಷಿತವಾಗಿ ಆತನ ತಂದೆಗೆ ಹಸ್ತಾಂತರಿಸಲಾಯಿತು.
ಈ ಘಟನೆಯು ರೈಲು ನಿಲ್ದಾಣಗಳಲ್ಲಿನ ಸಿಸಿಟಿವಿ ಕಣ್ಗಾವಲು, ತ್ವರಿತ ಮಾಹಿತಿ ವಿನಿಮಯ ಹಾಗೂ ರೈಲ್ವೆ ಭದ್ರತಾ ಸಿಬ್ಬಂದಿ ಮತ್ತು ಸರ್ಕಾರಿ ರೈಲ್ವೆ ಪೆÇಲೀಸರ ನಡುವಿನ ಸಮನ್ವಯವು ನಾಪತ್ತೆಯಾದವರನ್ನು ಪತ್ತೆಹಚ್ಚುವಲ್ಲಿ ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ತೋರಿಸುತ್ತದೆ. ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಪ್ರಯಾಣಿಕರ ಸುರಕ್ಷತೆ ಮತ್ತು ಭದ್ರತೆಗೆ ಸದಾ ಬದ್ಧವಾಗಿದೆ ಎಂದು ಮೈಸೂರು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ಗಿರೀಶ ಧರ್ಮರಾಜ ಕಲಗೊಂಡ ತಿಳಿಸಿದ್ದಾರೆ.











0 comments:
Post a Comment