ಬಂಟ್ವಾಳ, ಅಕ್ಟೋಬರ್ 13, 2026 (ಕರಾವಳಿ ಟೈಮ್ಸ್) : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳ ಬಿ ಸಿ ಟ್ರಸ್ಟ್ ಬಂಟ್ವಾಳ ತಾಲೂಕು, ಪ್ರಗತಿ ಬಂದು ಸ್ವ ಸಹಾಯ ಸಂಘಗಳ ಒಕ್ಕೂಟ ಸರಪಾಡಿ ಇವುಗಳ ಜಂಟಿ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿವಿಧ ಒಕ್ಕೂಟ ಪದಗ್ರಹಣ ಮತ್ತು ಸಾಮೂಹಿಕ ಸತ್ಯನಾರಾಯಣ ಪೂಜೆ ಬಾಚಕೆರೆ ಶ್ರೀ ಕ್ಷೇತ್ರ ದುರ್ಗಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಬಾಚಕೆರೆ ಶ್ರೀ ಕ್ಷೇತ್ರ ದುರ್ಗಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ದೇಜಪ್ಪ ಬಾಚಕೆರೆ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ನಡೆಯುವ ಹಲವು ಕಾರ್ಯಕ್ರಮಗಳು ಯೋಜನೆಯ ಸದಸ್ಯರು ಸ್ವಾವಲಂಬಿಗಳಾಗಿ ಬದುಕುವಂತಾಗಿದೆ ಎಂದರು. ಉದ್ಯಮಿ ಕೆ ಮೋಹನ್ ಕುಮಾರ್ ಉದ್ಘಾಟಿಸಿದರು.
ಯೋಜನೆಯ ಜಿಲ್ಲಾ ನಿರ್ದೇಶಕ ದಿನೇಶ್ ಡಿ ಪದಾಧಿಕಾರಿಗಳಿಗೆ ಜವಾಬ್ದಾರಿ ಹಸ್ತಾಂತರ ಮಾಡಿದರು. ಮುಖ್ಯ ಅತಿಥಿಗಳಾಗಿ ಸಂಜೀವ ಪೂಜಾರಿ ಗುರು ಕೃಪಾ, ಶರಭೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಶಂಕರನಾರಾಯಣ ಹೊಳ್ಳ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಯೋಜನಾಧಿಕಾರಿ ಜಯಾನಂದ, ಬಂಟ್ವಾಳ ಜನಜಾಗೃತಿ ವೇದಿಕೆಯ ಪುರುಷೋತ್ತಮ ಪೂಜಾರಿ ಮಜಲು, ಸಂತೋಷ್ ಶೆಟ್ಟಿ ಪಡ್ಡಾಯಿಬೆಟ್ಟು, ಚಂದ್ರಹಾಸ ಶೆಟ್ಟಿ ಹೊಳ್ಳರ ಗುತ್ತು, ಧನಂಜಯ ಶೆಟ್ಟಿ ರಾಜಯೋಗ ಸರಪಾಡಿ, ರಿಚಾರ್ಡ್ ಡಿ ಸೋಜ ಸರಪಾಡಿ, ನಾರಾಯಣ ಶೆಟ್ಟಿ ಹೊಳ್ಳರಗುತ್ತು, ರಾಧಾಕೃಷ್ಣ ಶೆಟ್ಟಿ ಕಲ್ಕೋಟೆ, ರಾಧಾಕೃಷ್ಣ ರೈ ಕೊಟ್ಟುಂಜ, ಪತ್ರಕರ್ತ ಕಿರಣ್ ಕುಮಾರ್, ಶಶಿಕಾಂತ್ ಶೆಟ್ಟಿ ಆರುಮುಡಿ, ಸೀತಾರಾಮ ಪೂಜಾರಿ ತಿಂಗಳಾಡಿಗುತ್ತು, ಯಾದವ ಶೆಟ್ಟಿ ಹಂಡಿರು, ಗಿರಿನಾಥ್ ಶರ್ಮಾ, ಕವಿತಾ ಸರಪಾಡಿ, ಬಿ ಹರೀಶ್ ಬಜಾ ಶೇಖರ ಭಾಗವಹಿಸಿದ್ದರು.
ಸೇವಾ ಪ್ರತಿನಿಧಿಗಳಾದ ಗುಣವತಿ ಶುಭ ಹಾಗೂ ಮಮತಾ ವಿ ಎಲ್ ಇ, ಗುರುರಾಜ್ ಕುಂಟೋನಿ, ಕೃಷಿ ಅಧಿಕಾರಿ ಮೇಲ್ವಿಚಾರಕ ಭಾಸ್ಕರ್, ಮೋಹಿನಿ ಮೊದಲಾದವರು ಉಪಸ್ಥಿತರಿದ್ದರು.













0 comments:
Post a Comment