ಸುಳ್ಯ ಶಾಸಕರು ಪ್ರಯಾಣಿಸುತ್ತಿದ್ದ ಕಾರು ಅಪಘಾತ : ಅಪಾಯದಿಂದ ಪಾರು - Karavali Times ಸುಳ್ಯ ಶಾಸಕರು ಪ್ರಯಾಣಿಸುತ್ತಿದ್ದ ಕಾರು ಅಪಘಾತ : ಅಪಾಯದಿಂದ ಪಾರು - Karavali Times

728x90

6 October 2026

ಸುಳ್ಯ ಶಾಸಕರು ಪ್ರಯಾಣಿಸುತ್ತಿದ್ದ ಕಾರು ಅಪಘಾತ : ಅಪಾಯದಿಂದ ಪಾರು

ಸುಳ್ಯ, ಅಕ್ಟೋಬರ್ 06, 2026 (ಕರಾವಳಿ ಟೈಮ್ಸ್) : ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು ಕಲ್ಮಡ್ಕ ಗ್ರಾಮದ ಮುಚ್ಚಿಲ ಎಂಬಲ್ಲಿ ಚಾಲಕನ ನಿಯಂತ್ರಣ ಮೀರಿ ಇನ್ನೊಂದು ಕಾರಿಗೆ ಹಿಂದಿನಿಂದ ಅಪಘಾತವಾದ ಘಟನೆ ಅ 6 ರಂದು ಸಂಭವಿಸಿದೆ. 

ಶಾಸಕರು ಪಂಜ ಕಡೆಯಿಂದ ನಿಂತಿಕಲ್ಲು ಕಡೆಗೆ ತೆರಳುತ್ತಿದ್ದಾಗ, ಕಲ್ಮಡ್ಕ ಗ್ರಾಮದ ಮುಚ್ಚಿಲ ಎಂಬಲ್ಲಿ ಈ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಮುಂದಿದ್ದ ಕೆಎ12 ಎಂಸಿ3325 ನೋಂದಣಿ ಸಂಖ್ಯೆಯ ಕಾರಿಗೆ ಅಪಘಾವಾಗಿರುತ್ತದೆ. ಅಪಘಾತದಲ್ಲಿ ಎರಡೂ ಕಾರಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ಪ್ರಕರಣವನ್ನು ಪರಸ್ಪರ ಮಾತುಕತೆ ನಡೆಸಿ ಇತ್ಯರ್ಥಪಡಿಸಿಕೊಂಡಿರುತ್ತಾರೆ. ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಸುಳ್ಯ ಶಾಸಕರು ಪ್ರಯಾಣಿಸುತ್ತಿದ್ದ ಕಾರು ಅಪಘಾತ : ಅಪಾಯದಿಂದ ಪಾರು Rating: 5 Reviewed By: karavali Times
Scroll to Top