ಬಂಟ್ವಾಳ, ಅಕ್ಟೋಬರ್ 26, 2026 (ಕರಾವಳಿ ಟೈಮ್ಸ್) : ತಾಲೂಕಿನ ಕುಕ್ಕಿಪ್ಪಾಡಿ ಗ್ರಾಮದ ಕೆಂತೆಲೆ ಎಂಬಲ್ಲಿ ಮನೆಯಲ್ಲಿ ಆಟವಾಡುತ್ತಿದ್ದ 9 ವರ್ಷದ ಬಾಲಕನೋರ್ವ ಕಿಟಕಿಯಲ್ಲಿದ್ದ ಹಗ್ಗ ಕುತ್ತಿಗೆಗೆ ಸಿಲುಕಿ ಉಸಿರುಗಟ್ಟಿ ದಾರುಣವಾಗಿ ಮೃತಪಟ್ಟ ಘಟನೆ ಅ 25 ರಂದು ಸಂಭವಿಸಿದೆ.
ಮೃತ ಬಾಲಕನನ್ನು ಇಲ್ಲಿನ ನಿವಾಸಿ ಆನಂದ ಪೂಜಾರಿ ಅವರ ಪುತ್ರ, ಬಂಟ್ವಾಳ ಎಸ್ ವಿ ಎಸ್ ಶಾಲೆಯ 3ನೇ ತರಗತಿ ವಿದ್ಯಾರ್ಥಿ ಅಮೃತ್ ಎ ಪೂಜಾರಿ (9) ಎಂದು ಹೆಸರಿಸಲಾಗಿದೆ. ಈ ಬಗ್ಗೆ ಆನಂದ ಪೂಜಾರಿ ಅವರ ಸಹೋದರ ಜಯಾನಂದ ಅವರು ಪೂಂಜಾಲಕಟ್ಟೆ ಪೊಲೀಸರಿಗೆ ದೂರು ನೀಡಿದ್ದು, ಇವರ ಮನೆ ಬಳಿ ಅವರ ಸಹೋದರ ಆನಂದ ಪೂಜಾರಿ ಅವರು ಅವರು ತನ್ನ ಪತ್ನಿ ಹಾಗೂ ಮಕ್ಕಳೊಂದಿಗೆ ವಾಸವಾಗಿರುವುದಾಗಿದೆ. ಅ 25 ರಂದು ಅಣ್ಣನ ಮನೆಯಲ್ಲಿ ಬೊಬ್ಬೆ ಕೇಳಿ ಅಲ್ಲಿಗೆ ಇವರು ತೆರಳಿ ನೋಡಿದಾಗ, ಆನಂದ ಪೂಜಾರಿ ಅವರ 9 ವರ್ಷ ಪ್ರಾಯದ ಮಗ ಅಮೃತ್ ಪೂಜಾರಿ ಮನೆಯಲ್ಲಿ ಆಟವಾಡುತ್ತಿದ್ದಾಗ ಮನೆಯ ಕಿಟಕಿಯಲ್ಲಿದ್ದ ಹಗ್ಗವೊಂದು ಆಕಸ್ಮಿಕವಾಗಿ ಕುತ್ತಿಗೆ ಸಿಲುಕಿ ಉಸಿರುಕಟ್ಟಿ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಕಂಡುಬಂದಿರುತ್ತದೆ. ಬಾಲಕನನ್ನು ಉಪಚರಿಸಿ ಆಸ್ಬತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಎಂದು ನೀಡಿದ ದೂರಿನಂತೆ ಈ ಬಗ್ಗೆ ಪೂಂಜಾಲಕಟ್ಟೆ ಪೆÇಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.











0 comments:
Post a Comment