ಓಂಕಾರೇಶ್ವರ ಹವ್ಯಾಸಿ ಯಕ್ಷ ಕಲಾವೃಂದ ವತಿಯಿಂದ ಕಂಕನಾಡಿಯಲ್ಲಿ 2 ತಿಂಗಳ ಯಕ್ಷಗಾನ ತರಬೇತಿ - Karavali Times ಓಂಕಾರೇಶ್ವರ ಹವ್ಯಾಸಿ ಯಕ್ಷ ಕಲಾವೃಂದ ವತಿಯಿಂದ ಕಂಕನಾಡಿಯಲ್ಲಿ 2 ತಿಂಗಳ ಯಕ್ಷಗಾನ ತರಬೇತಿ - Karavali Times

728x90

9 October 2026

ಓಂಕಾರೇಶ್ವರ ಹವ್ಯಾಸಿ ಯಕ್ಷ ಕಲಾವೃಂದ ವತಿಯಿಂದ ಕಂಕನಾಡಿಯಲ್ಲಿ 2 ತಿಂಗಳ ಯಕ್ಷಗಾನ ತರಬೇತಿ

ಮಂಗಳೂರು, ಅಕ್ಟೋಬರ್ 09, 2026 (ಕರಾವಳಿ ಟೈಮ್ಸ್) : ಕಂಕನಾಡಿಯ ಓಂಕಾರೇಶ್ವರ ಹವ್ಯಾಸಿ ಯಕ್ಷ ಕಲಾವೃಂದದ ಆಶ್ರಯದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸಹಕಾರದೊಂದಿಗೆ ಆಯೋಜಿಸಲಾದ ಎರಡು ತಿಂಗಳ ಯಕ್ಷಗಾನ ತರಬೇತಿ ಶಿಬಿರವನ್ನು ಮನಪಾ ಕಂಕನಾಡಿ ಬಿ ವಾರ್ಡ್ ನಿಕಟಪೂರ್ವ ಸದಸ್ಯ ಟಿ ಪ್ರವೀಣ್ ಚಂದ್ರ ಆಳ್ವ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು, ಕಂಕನಾಡಿ ಪರಿಸರದಲ್ಲಿ ಕಳೆದ 15 ವರ್ಷಗಳಿಂದ ಓಂಕಾರೇಶ್ವರ ಸಂಸ್ಥೆಯು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಸಾಂಸ್ಕೃತಿಕ ಚಟುವಟಿಕೆಗಳು ಶ್ಲಾಘನೀಯ. ಹಿರಿಯ ಕಲಾವಿದರಿಗೆ ಸನ್ಮಾನ, ಯಕ್ಷಗಾನ ಪ್ರದರ್ಶನ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಮೂಲಕ ಕಲೆಯನ್ನು ಉಳಿಸಿ ಬೆಳೆಸುವ ಸಂಸ್ಥೆಯ ಕಾರ್ಯ ಸಮಾಜಕ್ಕೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಮೋಹನ್ ಕೊಪ್ಪಳ ಶುಭ ಹಾರೈಸಿದರು. ತರಬೇತಿ ಶಿಬಿರದಲ್ಲಿ ಮುಖ್ಯ ಶಿಕ್ಷಕರಾಗಿ ಸುನಿಲ್ ಪಲ್ಲಮಜಲು ಹಾಗೂ ಸಹ ಶಿಕ್ಷಕಿಯಾಗಿ ಶರಣ್ಯ ತರಬೇತಿ ನೀಡಲಿದ್ದಾರೆ. ಸಂಸ್ಥೆಯ ಅಧ್ಯಕ್ಷೆ ನಿರಂಜಯ ಸಾಲಿಯಾನ್ ಉಪಸ್ಥಿತರಿದ್ದರು. ಶರ್ಮಿಳಾ ಕಾರ್ಯಕ್ರಮ ನಿರೂಪಿಸಿದರು. ಯಕ್ಷಗಾನ ಕಲೆಯಲ್ಲಿ ಆಸಕ್ತಿ ಹೊಂದಿರುವ ಸುಮಾರು 20 ವಿದ್ಯಾರ್ಥಿಗಳು ಈ ತರಬೇತಿ ಶಿಬಿರದಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಓಂಕಾರೇಶ್ವರ ಹವ್ಯಾಸಿ ಯಕ್ಷ ಕಲಾವೃಂದ ವತಿಯಿಂದ ಕಂಕನಾಡಿಯಲ್ಲಿ 2 ತಿಂಗಳ ಯಕ್ಷಗಾನ ತರಬೇತಿ Rating: 5 Reviewed By: karavali Times
Scroll to Top