ವಾರ್ತಾ ಇಲಾಖಾ ಸಿಬ್ಬಂದಿ ಅರುಣಕಾಂತ ಸೇವಾ ನಿವೃತ್ತಿ : ಕಚೇರಿ ವತಿಯಿಂದ ಬೀಳ್ಕೊಡುಗೆ ಹಾಗೂ ಸನ್ಮಾನ - Karavali Times ವಾರ್ತಾ ಇಲಾಖಾ ಸಿಬ್ಬಂದಿ ಅರುಣಕಾಂತ ಸೇವಾ ನಿವೃತ್ತಿ : ಕಚೇರಿ ವತಿಯಿಂದ ಬೀಳ್ಕೊಡುಗೆ ಹಾಗೂ ಸನ್ಮಾನ - Karavali Times

728x90

2 November 2026

ವಾರ್ತಾ ಇಲಾಖಾ ಸಿಬ್ಬಂದಿ ಅರುಣಕಾಂತ ಸೇವಾ ನಿವೃತ್ತಿ : ಕಚೇರಿ ವತಿಯಿಂದ ಬೀಳ್ಕೊಡುಗೆ ಹಾಗೂ ಸನ್ಮಾನ

ಮಂಗಳೂರು, ನವಂಬರ್ 02, 2026 (ಕರಾವಳಿ ಟೈಮ್ಸ್) : ಕಳೆದ 26 ವರ್ಷಗಳಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅರುಣಕಾಂತ ಅವರು ಸರಕಾರಿ ಸೇವೆಯಿಂದ ಅಕ್ಟೋಬರ್ 31 ರಂದು ನಿವೃತ್ತರಾದರು.

ಇಲಾಖೆಯಲ್ಲಿ ಚಾಲಕರಾಗಿ 1999ರಲ್ಲಿ ನೇಮಕಗೊಂಡ ಅವರು, ಬೆಂಗಳೂರು, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಸೇವಾ ನಿವೃತ್ತಿ ಹಿನ್ನಲೆಯಲ್ಲಿ ಅ 31 ರಂದು ವಾರ್ತಾ ಇಲಾಖೆ ಕಚೇರಿಯಲ್ಲಿ ಅರುಣಕಾಂತ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.

ಕಾರ್ಯಕ್ರಮದಲ್ಲಿ ವಾರ್ತಾಧಿಕಾರಿ ಬಿ ಎ ಖಾದರ್ ಷಾ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ, ವಾರ್ತಾ ಇಲಾಖೆ ಸಿಬ್ಬಂದಿಗಳು ಭಾಗವಹಿಸಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ವಾರ್ತಾ ಇಲಾಖಾ ಸಿಬ್ಬಂದಿ ಅರುಣಕಾಂತ ಸೇವಾ ನಿವೃತ್ತಿ : ಕಚೇರಿ ವತಿಯಿಂದ ಬೀಳ್ಕೊಡುಗೆ ಹಾಗೂ ಸನ್ಮಾನ Rating: 5 Reviewed By: karavali Times
Scroll to Top