ಲಾಕ್‍ಡೌನ್ ವಿಸ್ತರಣೆ ಮಧ್ಯೆ ಮದುವೆ ಕಾರ್ಯಕ್ರಮಗಳಿಗೆ ಷರತ್ತುಬದ್ಧ ಅನುಮತಿ ನೀಡಿದ ಸರಕಾರ - Karavali Times ಲಾಕ್‍ಡೌನ್ ವಿಸ್ತರಣೆ ಮಧ್ಯೆ ಮದುವೆ ಕಾರ್ಯಕ್ರಮಗಳಿಗೆ ಷರತ್ತುಬದ್ಧ ಅನುಮತಿ ನೀಡಿದ ಸರಕಾರ - Karavali Times

728x90

1 May 2020

ಲಾಕ್‍ಡೌನ್ ವಿಸ್ತರಣೆ ಮಧ್ಯೆ ಮದುವೆ ಕಾರ್ಯಕ್ರಮಗಳಿಗೆ ಷರತ್ತುಬದ್ಧ ಅನುಮತಿ ನೀಡಿದ ಸರಕಾರ



ನವದೆಹಲಿ (ಕರಾವಳಿ ಟೈಮ್ಸ್) : ದೇಶಾದ್ಯಂತ 2 ವಾರಗಳ ಕಾಲ ಲಾಕ್‍ಡೌನ್ ವಿಸ್ತರಣೆಯಾಗಿದೆ. ಆದರೆ ಕೇಂದ್ರ ಸರಕಾರ ಗುರುತಿಸಿರುವ ಗ್ರೀನ್ ಝೋನ್ ಹಾಗೂ ಆರೆಂಜ್ ಝೋನ್‍ಗಳಲ್ಲಿ ಲಾಕ್‍ಡೌನ್‍ನಿಂದ ಕೆಲ ವಿನಾಯಿತಿಗಳನ್ನು ಕೂಡಾ ನೀಡಲಾಗಿದೆ.

    ಎಂಎಚ್‍ಎ ಆದೇಶದನ್ವಯ ಮೇ. 3 ರ ಬಳಿಕವೂ 2 ವಾರ ಲಾಕ್‍ಡೌನ್ ಮುಂದುವರಿಯಲಿದೆ. ಆದರೆ ಹಸಿರು ವಲಯಗಳಲ್ಲಿ ಮದುವೆ ಸಮಾರಂಭಗಳಿಗೆ ಅವಕಾಶ ನೀಡಲಾಗಿದೆ. ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಧರಿಸುವುದು ಕಡ್ಡಾಯ ಹಾಗೂ ಸಮಾರಂಭದಲ್ಲಿ ಭಾಗವಹಿಸಲು ಕೇವಲ 50 ಜನರಿಗಷ್ಟೇ ಅವಕಾಶ ನೀಡಲಾಗಿದೆ.

    ಅಂತ್ಯ ಸಂಸ್ಕಾರ ಹಾಗೂ ತಿಥಿ ಕಾರ್ಯಕ್ರಮಗಳಿಗೂ ಸರ್ಕಾರ ಷರತ್ತುಬದ್ಧ ಅನುಮತಿ ನೀಡಿದ್ದು, ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಧರಿಸುವುದು ಕಡ್ಡಾಯ ಹಾಗೂ ಸಮಾರಂಭದಲ್ಲಿ ಭಾಗವಹಿಸಲು ಕೇವಲ 20 ಜನರಿಗಷ್ಟೇ ಅವಕಾಶ ನೀಡಲಾಗಿದೆ. ಆದರೆ ರಾಜಕೀಯ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಯಾವ ವಲಯದಲ್ಲೂ ಮಾಡುವಂತಿಲ್ಲ ಎಂಬ ನಿಯಮ ಜಾರಿಯಾಗಿದೆ.

ಗ್ರೀನ್, ಆರೆಂಜ್ ಝೋನ್‍ಗಳಲ್ಲಿ ಸೆಲೂನ್ ತೆರೆಯಲು ಅವಕಾಶ


    ಈ ಮಧ್ಯೆ ಸವಿತಾ ಸಮಾಜದವರಿಗೆ ಸರಕಾರ ಗುಡ್ ನ್ಯೂಸ್ ನೀಡಿದ್ದು, ಗ್ರೀನ್ ಹಾಗೂ ಆರೆಂಜ್ ಝೋನ್‍ಗಳಲ್ಲಿ ಸೆಲೂನ್ ಮತ್ತು ಸ್ಪಾ ತೆರೆಯಲು ಅನುಮತಿ ನೀಡಿದೆ. ಆದರೆ ರೆಡ್ ಹಾಗೂ ಕಂಟೈನ್ಮೆಂಟ್ ಝೋನ್‍ಗಳಲ್ಲಿ ಇವುಗಳಿಗೆ ನಿರ್ಬಂಧ ವಿಧಿಸಿದೆ.
  • Blogger Comments
  • Facebook Comments

0 comments:

Post a Comment

Item Reviewed: ಲಾಕ್‍ಡೌನ್ ವಿಸ್ತರಣೆ ಮಧ್ಯೆ ಮದುವೆ ಕಾರ್ಯಕ್ರಮಗಳಿಗೆ ಷರತ್ತುಬದ್ಧ ಅನುಮತಿ ನೀಡಿದ ಸರಕಾರ Rating: 5 Reviewed By: karavali Times
Scroll to Top