ಪಿ.ಎಂ.ಎ. ಪಾಣೆಮಂಗಳೂರು ಪ್ರಧಾನ ಸಂಪಾದಕ. ಮೊ : 9844976826, 9448743938 |
![]() |
ಯು. ಮುಸ್ತಫಾ ಆಲಡ್ಕ ಸಹ ಸಂಪಾದಕ ಮೊ : 9036466983 |
ಸಾಮಾಜಿಕ ಕಳಕಳಿಯನ್ನು ಹೊಂದಿರುವ ವ್ಯಕ್ತಿ ಸಮಾಜದ ಶೋಷಿತರ, ದಮನಿತರ ಪರವಾಗಿ ನಿಲ್ಲಲು ಹತ್ತು ಹಲವು ಸಾಮಾಜಿಕ ಸೇವಾ ರಂಗಗಳನ್ನು ಆಯ್ಕೆ ಮಾಡಿಕೊಳ್ಳುತ್ತಾನೆ. ಅದರಲ್ಲೂ ಸಾಮಾಜಿಕ ರಂಗದಲ್ಲಿ ಏನಾದರೂ ಕಿಂಚಿತ್ ಸೇವೆ ಸಲ್ಲಿಸಬೇಕು ಎಂಬ ವಿಪರೀತ ತುಡಿತ ಹೊಂದಿದ್ದ ನಾವು ಆಯ್ಕೆ ಮಾಡಿಕೊಂಡದ್ದು, ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಿಕಾ ಕ್ಷೇತ್ರವನ್ನು. ಸಮಾಜದ ಎಲ್ಲ ವರ್ಗದ ಜನರಿಂದ ಅನ್ಯಾಯ, ದಮನಕ್ಕೆ ಒಳಗಾಗುವ ಮಂದಿಯ ಪರವಾಗಿ ನಿಷ್ಠುರವಾಗಿ ಧ್ವನಿಯೆತ್ತಲು ಹಾಗೂ ಆ ಮೂಲಕ ಸಮಾಜದ ಕಟ್ಟಕಡೆಯ ಜನತೆಗೆ ಒಂದಿಷ್ಟಾದರೂ ನ್ಯಾಯವನ್ನು ಒದಗಿಸಿಕೊಟ್ಟು ಸೇವೆಯನ್ನು ಸಲ್ಲಿಸಬಹುದು ಎಂಬ ಏಕಮಾತ್ರ ಉದ್ದೇಶವೇ ಇದಕ್ಕೆ ಕಾರಣ.
ಮಾಸಿಕ, ಪಾಕ್ಷಿಕ, ದೈನಿಕ ಪತ್ರಿಕೆಗಳ ವರದಿಗಾರನಾಗಿ ಪತ್ರಿಕಾ ರಂಗಕ್ಕೆ ಕಾಲಿಟ್ಟು, ಬಳಿಕ ಸಮಾಜದಲ್ಲಿ ಅಕ್ಷರ ಕ್ರಾಂತಿಯ ಮೂಲಕ ಕಿಂಚಿತ್ ಸೇವೆ ಸಲ್ಲಿಸಲು ಸ್ವಂತ ನಿಲುವಿನ ಮಾಧ್ಯಮವೊಂದು ಬೇಕು ಎಂದು ಮನಸ್ಸಿಗೆ ತೋಚಿದಾಗ ಕಾರ್ಯಪ್ರವೃತ್ತರಾಗಿ ಆರಂಭಿಸಿದ್ದೇ “ಕರಾವಳಿ ಟೈಮ್ಸ್” ಪಾಕ್ಷಿಕ ಪತ್ರಿಕೆ.
ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯನ್ನು ಒಳಗೊಂಡಿರುವ ನಮ್ಮೀ ಪತ್ರಿಕೆ ಕಳೆದ 2015ರ ಸೆಪ್ಟೆಂಬರ್ 20 ರಂದು ಮೊದಲ ಸಂಚಿಕೆ ಪ್ರಕಟಗೊಂಡು ಮಾರುಕಟ್ಟೆಗೆ ಪ್ರವೇಶಿಸಿತ್ತು. ಇದೀಗ ಏಳು-ಬೀಳುಗಳನ್ನು ಕಂಡರೂ ಅವಿರತ ಶ್ರಮ, ದಿಟ್ಟ ಹೆಜ್ಜೆಯ ಮೂಲಕ ಪತ್ರಿಕೆ ನಾಲ್ಕು ಸಂವತ್ಸರಗಳನ್ನು ಯಶಸ್ವಿಯಾಗಿ ಮೆಟ್ಟಿ ನಿಂತು ಐದನೇ ವಸಂತಕ್ಕೆ ಪಾದಾರ್ಪಣೆ ಮಾಡುತ್ತಿರುವ ಈ ಸುಸಂದರ್ಭದಲ್ಲಿ ಆಧುನಿಕ ಮಾಧ್ಯಮಗಳ ಭರಾಟೆಗೆ ಹೊಂದಿಕೊಳ್ಳುವ ಅನಿವಾರ್ಯತೆಯನ್ನು ಮನಗಂಡು ಪತ್ರಿಕೆಯ ಅಂತರ್‍ಜಾಲ (ವೆಬ್ ಸೈಟ್) ಆವೃತ್ತಿಯನ್ನು ಪ್ರಾರಂಭಿಸಿ ಕಾರ್ಯಾರಂಭ ಮಾಡಿದ್ದೇವೆ....
ಸಮಾಜಕ್ಕೆ ಏನಾದರೂ ಸೇವೆ ಅಕ್ಷರ ಸಮರದ ಮೂಲಕವಾದರೂ ಆಗಬೇಕು ಎನ್ನುವ ನಿಟ್ಟಿನಲ್ಲಿ ಓದುಗರು, ಜಾಹೀರಾತುದಾರರು, ಹಿತೈಷಿಗಳು ಹಾಗೂ ಪೋಷಕರ ಸರ್ವ ವಿಧ ಸಹಕಾರದಿಂದ ಸಮಾಜದ ಏಳು-ಬೀಳುಗಳ ಬಗ್ಗೆ ಬೆಳಕು ಚೆಲ್ಲುತ್ತಾ, ಉತ್ತಮ ಕೆಲಸಕ್ಕೆ ಶಹಬ್ಬಾಸ್ ಗಿರಿ ಪಡೆಯುತ್ತಾ, ತಪ್ಪಿದಾಗ ಓದುರೇ ನೀಡುವ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿ ಕರಾವಳಿ ಟೈಮ್ಸ್ ತನ್ನದೇ ಆದ ಹಾದಿಯನ್ನು ತುಳಿಯುತ್ತಾ ಬರುತ್ತಿದೆ.
ಅಕ್ಷರ ಸಮರದಲ್ಲಿ ಯಾವುದೇ ಪ್ರಭಾವಗಳಿಗೂ ಮಣಿಯದೆ, ಯಾರದೇ ಮುಲಾಜಿಗೆ ಬಗ್ಗದೆ ನೇರ ಹಾಗೂ ದಿಟ್ಟ ನಿರ್ಧಾರವನ್ನೇ ಕರಾವಳಿ ಟೈಮ್ಸ್ ಪ್ರದರ್ಶಿಸುತ್ತಾ ಬಂದಿದೆ. ಮುಂದೆಯೂ ಅದೇ ಹಾದಿಯನ್ನು ಹಿಡಿಯುತ್ತಾ ಸಮಾಜದ ಕಟ್ಟ ಕಡೆಯ ಸಾಮಾನ್ಯ ವ್ಯಕ್ತಿಗೂ ಕೂಡಾ ನ್ಯಾಯ ಮರೀಚೆಕೆಯಾದರೆ ಪತ್ರಿಕೆ ಶೋಷಿತರ, ನ್ಯಾಯವಂಚಿತರ, ದಮನಿತರ ಪರ ಯಾವತ್ತೂ ನಿಲ್ಲುತ್ತದೆ ಎಂಬ ಭರವಸೆಯನ್ನು ನೀಡುತ್ತಿದ್ದೇವೆ.
ಆಧುನಿಕ ಮಾಧ್ಯಮ ರಂಗದಲ್ಲಿ ಸಮಾಜದ ಸ್ವಾಸ್ಥ್ಯಕ್ಕೆ ಮಾರಕವಾಗುವ ಯಾವುದೇ ನಾಗಾಲೋಟ ಬಯಸದೆ, ಯಾರೊಂದಿಗೂ ಸ್ಪರ್ಧೆಗೆ ಇಳಿಯದೆ, ನಿಖರ ಹಾಗೂ ನಿಷ್ಠುರ ವರದಿಗಾರಿಕೆ ಮೂಲಕ ಜನಸಾಮಾನ್ಯರ ಧ್ಬನಿಯಾಗಿಯಷ್ಟೆ ಮುಂದೆಯೂ ಕಾರ್ಯನಿರ್ವಹಿಸಲಿದ್ದೇವೆ. ಜಾತಿ-ಧರ್ಮ, ಭಾಷೆ, ಪಂಥ, ವರ್ಗ ಎಲ್ಲವನ್ನೂ ಮೀರಿ ಪತ್ರಿಕಾ ಧರ್ಮ ಹಾಗೂ ಮಾನವೀಯ ಮೌಲ್ಯದ ಜಾತಿಯನ್ನಷ್ಟೇ ಅಪ್ಪಿಕೊಂಡು ಸಮಾಜದ ಆಗು-ಹೋಗುಗಳಿಗೆ ಸ್ಪಂದಿಸುತ್ತಾ ಮುದ್ರಿತ ಹಾಗೂ ಅಂತರ್ ಜಾಲ ಪತ್ರಿಕೆಯನ್ನು ಮುನ್ನಡೆಸುತ್ತಾ ಬರಲು ಬದ್ದರಾಗಿದ್ದೇವೆ ಎಂಬ ಭರವಸೆಯನ್ನು ನಮ್ಮೆಲ್ಲಾ ಓದುಗ ಪ್ರಭುಗಳಿಗೆ ನೀಡುತ್ತಾ .... ನಮ್ಮ ದೃಢ ಹೆಜ್ಜೆಗೆ ನಿಮ್ಮೆಲ್ಲರ ಸಹಕಾರ, ಪ್ರೀತಿಯ ಹಾರೈಕೆ ಕರಾವಳಿ ಟೈಮ್ಸ್ ಪತ್ರಿಕೆಯ ಮೇಲಿರಲಿ ಎಂಬ ಕಳಕಳಿಯ ವಿನಂತಿಯೊಂದಿಗೆ,
ಪಿ.ಎಂ.ಎ. ಪಾಣೆಮಂಗಳೂರು
ಪ್ರಧಾನ ಸಂಪಾದಕ.
ಮೊ : 9844976826, 9448743938
ಶುಭಾಷಯಗಳು ನಿಮಗೆ ✊🏿
ReplyDelete✊🏿✊🏿
ReplyDeleteGood and useful for all
ReplyDeleteThanks
may allah bless you all
ReplyDeleteVery good sir
ReplyDeleteAllahutala will help you All
Karavali Times useful to All
ReplyDeleteThanks