ಅಚ್ಛೇ ದಿನ್ ಹೆಸರಿನಲ್ಲಿ ಜನರ ಬದುಕು ನಿರ್ನಾಮ ಮಾಡಲು ಹೊರಟ ಬಿಜೆಪಿ ಸರಕಾರ : ರಾಮಣ್ಣ ವಿಟ್ಲ ವಾಗ್ದಾಳಿ - Karavali Times ಅಚ್ಛೇ ದಿನ್ ಹೆಸರಿನಲ್ಲಿ ಜನರ ಬದುಕು ನಿರ್ನಾಮ ಮಾಡಲು ಹೊರಟ ಬಿಜೆಪಿ ಸರಕಾರ : ರಾಮಣ್ಣ ವಿಟ್ಲ ವಾಗ್ದಾಳಿ - Karavali Times

728x90

15 June 2021

ಅಚ್ಛೇ ದಿನ್ ಹೆಸರಿನಲ್ಲಿ ಜನರ ಬದುಕು ನಿರ್ನಾಮ ಮಾಡಲು ಹೊರಟ ಬಿಜೆಪಿ ಸರಕಾರ : ರಾಮಣ್ಣ ವಿಟ್ಲ ವಾಗ್ದಾಳಿ


ಬಂಟ್ವಾಳ, ಜೂನ್ 15, 2021 (ಕರಾವಳಿ ಟೈಮ್ಸ್) : ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖಚ್ಚಾ ತೈಲದ ಬೆಲೆ ಇಳಿಕೆಯಾದರೂ ಮೋದಿ ಸರಕಾರ ದರ ಇಳಿಸದೆ ಜನರನ್ನು ಲೂಟಿ ಮಾಡುತ್ತಿದೆ. ಅಚ್ಚೇ ದಿನದ ಹೆಸರಿನಲ್ಲಿ ಜನರ ಬದುಕನ್ನು ನಿರ್ನಾಮ ಮಾಡಲು ಹೊರಟ ಬಿಜೆಪಿ ಸರಕಾರದ ವಿರುದ್ಧ ಜನತೆ ದೊಡ್ಡ ಮಟ್ಟದ ಜನಾಂದೋಲನ ನಡೆಸಬೇಕು ಎಂದು ಸಿಪಿಐ(ಎಂ) ಬಂಟ್ವಾಳ ತಾಲೂಕು ಕಾರ್ಯದರ್ಶಿ ರಾಮಣ್ಣ ವಿಟ್ಲ ಕರೆ ನೀಡಿದರು.

ಇಂಧನ ಬೆಲೆ ಏರಿಕೆ ವಿರೊಧಿಸಿ ಡಿ ವೈ ಎಫ್ ಐ ವಿಟ್ಲ ವಲಯ ಸಮಿತಿ ವತಿಯಿಂದ ಮಂಗಳಪದವು ಪೆಟ್ರೋಲ್ ಪಂಪ್ ಮುಂಭಾಗ ಮಂಗಳವಾರ ವಾಹನಕ್ಕೆ ಹಗ್ಗ ಕಟ್ಟಿ ಎಳೆಯುವ ಮೂಲಕ ವಿನೂತನವಾಗಿ ನಡೆಸಿದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. 

ವಾಹನಕ್ಕೆ ಹಗ್ಗ ಕಟ್ಟಿ ಎಳೆಯುವುದರ ಮೂಲಕ ವಿನೂತನವಾಗಿ ಪ್ರತಿಭಟನೆ ಆರಂಭಿಸಲಾಯಿತು. ಡಿ ವೈ ಎಫ್ ಐ ಬಂಟ್ವಾಳ ತಾಲೂಕು ಕಾರ್ಯದರ್ಶಿ ತುಳಸೀದಾಸ್ ವಿಟ್ಲ, ರಿಕ್ಷಾ ಚಾಲಕರ ಸಂಘದ ಕಾರ್ಯದರ್ಶಿ ರಝಾಕ್ ಕೆಲಿಂಜ, ವಿಟ್ಲ ವಲಯ ಸಮಿತಿ ಮುಖಂಡರಾದ ಸಲೀಂ ಮಲಿಕ್, ಸಲ್ಮಾನ್, ಪಿ ಬಿ ಜಮೀಲ್, ಇರ್ಪಾನ್, ಇಬ್ರಾಹಿಂ, ಭಾಸಿಂ, ಸುಲೈಮಾನ್ ಪೆಲತ್ತಡ್ಕ, ಹನೀಪ್ ಕೆಲಿಂಜ, ಹನೀಪ್ ಆಲಂಗಾರ್, ಸಮೀರ್ ಪಾತ್ರತೋಟ, ಸಾಭಿತ್ ಕೆಲಿಂಜ, ಅಝೀಝ್ ಕೆಲಿಂಜ, ಸಿನಾನ್, ಮೆಹರೂಫ್ ಒಕ್ಕೆತ್ತೂರು, ಅಝೀಝ್ ಪೆಲತ್ತಡ್ಕ, ಸವಾದ್ ಕೋಲ್ಪೆ, ಶಾಕೀರ್ ಖಾನ್, ಲಿಯಾಕತ್ ಖಾನ್, ಮೊಹಿದಿನ್ ಕೆದುಮೂಲೆ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಅಚ್ಛೇ ದಿನ್ ಹೆಸರಿನಲ್ಲಿ ಜನರ ಬದುಕು ನಿರ್ನಾಮ ಮಾಡಲು ಹೊರಟ ಬಿಜೆಪಿ ಸರಕಾರ : ರಾಮಣ್ಣ ವಿಟ್ಲ ವಾಗ್ದಾಳಿ Rating: 5 Reviewed By: karavali Times
Scroll to Top