ಉರ್ದಿಲ ವಾಲಿಬಾಲ್ ಪಂದ್ಯಾಟ : ಸೇರಾ ಹಾಗೂ ನೇತಾಜಿ ತಂಡಕ್ಕೆ ಪ್ರಶಸ್ತಿ - Karavali Times ಉರ್ದಿಲ ವಾಲಿಬಾಲ್ ಪಂದ್ಯಾಟ : ಸೇರಾ ಹಾಗೂ ನೇತಾಜಿ ತಂಡಕ್ಕೆ ಪ್ರಶಸ್ತಿ - Karavali Times

728x90

9 March 2021

ಉರ್ದಿಲ ವಾಲಿಬಾಲ್ ಪಂದ್ಯಾಟ : ಸೇರಾ ಹಾಗೂ ನೇತಾಜಿ ತಂಡಕ್ಕೆ ಪ್ರಶಸ್ತಿ


ಬಂಟ್ವಾಳ ಮಾ. 09, 2021 (ಕರಾವಳಿ ಟೈಮ್ಸ್) : ನೆಟ್ಲಮುಡ್ನೂರು ಗ್ರಾಮದ ಉರ್ದಿಲ, ನವಯುಗ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ ಇತ್ತೀಚೆಗೆ ಇಲ್ಲಿನ ಕೆ ಇಂದುಹಾಸ ಕ್ರೀಡಾಂಗಣದಲ್ಲಿ ನಡೆದ ಆಹ್ವಾನಿತ ತಂಡಗಳ ವಾಲಿಬಾಲ್ ಪಂದ್ಯಾಟದಲ್ಲಿ ಉದಯ ಯುವಕ ಮಂಡಲ ಸೇರಾ ತಂಡವು ಪ್ರಥಮ, ನೇತಾಜಿ ಗೆಳೆಯರ ಬಳಗ ನೇತಾಜಿ ನಗರ ದ್ವಿತೀಯ, ಅಯೋದ್ಯಾ ಪೆರ್ನೆ ತೃತೀಯ ಹಾಗೂ ನವಯುಗ ಉರ್ದಿಲ ತಂಡವು ಚತುರ್ಥ ಸ್ಥಾನಗಳನ್ನು ಪಡೆದುಕೊಂಡಿತು. ಸೇರಾ ತಂಡದ ಸೃತೇಶ್, ರಕ್ಷಿತ್, ನೇತಾಜಿ ತಂಡದ ರೋಶನ್ ವೈಯುಕ್ತಿಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು. 

ಪಂದ್ಯಾಟವನ್ನು ಉರ್ದಿಲಗುತ್ತು ಅಹಲ್ಯಾ ಸುನಿಲ್ ಕುಮಾರ್ ಶೆಟ್ಟಿ ಉದ್ಘಾಟಿಸಿದರು. ಡಾ. ಎ. ಮನೋಹರ ರೈ ಅಂತರಗುತ್ತು ಅದ್ಯಕ್ಷತೆ ವಹಿಸಿದ್ದರು.  ಮುಖ್ಯ ಅತಿಥಿಗಳಾಗಿ ಪ್ರಗತಿಪರ ಕೃಷಿಕ ಸುರೇಶ್ ರೈ ಕುರ್ಲೆತ್ತಿಮಾರು, ನೆಟ್ಲಮುಡ್ನೂರು ಗ್ರಾ ಪಂ ಸದಸ್ಯರುಗಳಾದ ಕೆ. ಶ್ರೀಧರ ರೈ ಕುರ್ಲೆತ್ತಿಮಾರು, ಲತೀಫ್ ನೇರಳಕಟ್ಟೆ, ಅಶೋಕ ರೈ ಎಲ್ಕಾಜೆ, ಧನಂಜಯ ಮೀನಾವು, ಶಾಲಿನಿ ಹರೀಶ್, ಮಾಣಿ ಗ್ರಾ ಪಂ ಅದ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ, ಅನಂತಾಡಿ ಗ್ರಾ ಪಂ ಅದ್ಯಕ್ಷ ಗಣೇಶ ಪೂಜಾರಿ ಬಂಟ್ರಿಂಜ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ನೇರಳಕಟ್ಟೆ ಸಿ.ಎ. ಬ್ಯಾಂಕ್ ಉಪಾದ್ಯಕ್ಷ ಡಿ. ತನಿಯಪ್ಪ ಗೌಡ ದಾಸಕೋಡಿ, ನಿರ್ದೇಶಕ ನಿರಂಜನ್ ರೈ ಕುರ್ಲೆತ್ತಿಮಾರು, ಮೆನೇಜರ್ ಸಂಜೀವ ಪೂಜಾರಿ, ಚಲನಚಿತ್ರ ನಟ ಚೇತನ್ ರೈ ಮಾಣಿ, ನೇರಳಕಟ್ಟೆ ಶ್ರೀ ಕಲ್ಕುಡ ಕಲ್ಲುರ್ಟಿ ದೈವದ ಪಾತ್ರಿ ಜಗದೀಶ ಪೂಜಾರಿ, ರವೀಂದ್ರ ರೈ ನಡು ಉರ್ದಿಲ, ರಮೇಶ ಪೂಜಾರಿ ಮುಜಲ ಮೆಸ್ಕಾಂ, ಈಶ್ವರ ಪೂಜಾರಿ ನಡು ಉರ್ದಿಲ, ಯುವ ವಾಹಿನಿ ಮಾಣಿ ಘಟಕಾದ್ಯಕ್ಷ ಪಿ.ಎಲ್. ಪ್ರಶಾಂತ ಅನಂತಾಡಿ, ರೇಶ್ಮ ಟೀಚರ್ ಉರ್ದಿಲ, ಅನಂತಾಡಿ ಕ್ರಿಕೆಟ್ ಕ್ಲಬ್ ಅದ್ಯಕ್ಷ ಕಿಶೋರ್ ವಡ್ತೇಲು, ಗಂಗಾಧರ ಗೌಡ ನಡುಮನೆ, ಸತೀಶ ಪೂಜಾರಿ ಬಾಬನಕಟ್ಟೆ, ವಾಮನ ಕುಲಾಲ್ ಎಲ್ಕಾಜೆ, ನೇರಳಕಟ್ಟೆ ವೈ.ಸಿ.ಜಿ. ಅದ್ಯಕ್ಷ ವಿಶು ಕುಮಾರ್, ಬಿರುವೆರ್ ಬಾಕಿಲಗುತ್ತು ಅದ್ಯಕ್ಷ ಗಣೇಶ್ ಪೂಜಾರಿ, ಸುರೇಶ್ ಪೂಜಾರಿ ಬಾಕಿಲಗುತ್ತು, ಕುಂಞಣ್ಣ ರೈ ನಡು ಉರ್ದಿಲ, ಡಾ. ಗಣರಾಜ್ ಎಲ್ಕಣ, ನಿವೃತ್ತ ಸೈನಿಕ ಅಲೆಕ್ಸ್ ಮೊರಾಸ್ ಅನಂತಾಡಿ, ಹರೀಶ ಪೂಜಾರಿ ಬಾಕಿಲ, ನೇರಳಕಟ್ಟೆ ಹಿರಿಯ ವಿದ್ಯಾರ್ಥಿ ಸಂಘದ ಅದ್ಯಕ್ಷ ವಿಠಲ ನಾಯ್ಕ್, ನಾಟಿ ವೈದ್ಯ ಸಚ್ಚೀಂದ್ರ ರೈ ನಡು ಉರ್ದಿಲ, ರವಿ ಭಂಡಾರಿ ಅಂಗರಾಜೆ, ಸುರೇಶ ಪೂಜಾರಿ ಮುಜಲ, ಶರತ್ ಪೂಜಾರಿ ಮಿತ್ತಕೋಡಿ, ಗಂಗಾಧರ ಪೂಜಾರಿ ಮುಜಲ, ನಿತಿನ್ ಪೂಜಾರಿ ಉರ್ದಿಲ, ಕೃಷ್ಣಪ್ಫ ಪೂಜಾರಿ ಮುಜಲ, ಕಿರಣ್ ಗೋಳಿಕಟ್ಟೆ ಮೊದಲಾದವರು ಭಾಗವಹಿಸಿದ್ದರು. 

ಸಂಘದ ಉಪಾದ್ಯಕ್ಷ ಚೇತನ್ ನಾಯ್ಕ್ ಮುಜಲ, ಕಾರ್ಯದರ್ಶಿ ಪ್ರೀತಮ್ ಪೂಜಾರಿ, ಕೋಶಾಧಿಕಾರಿ ಹರೀಶ ಎಂ.ಎಸ್, ಮಂಜುನಾಥ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.  ನವಯುಗ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಅದ್ಯಕ್ಷ ಸುಜಿತ್ ಪೂಜಾರಿ ಬಾಕಿಲ ಸ್ವಾಗತಿಸಿ, ವಂದಿಸಿದರು, ಸುರೇಶ ಸೇರ ಕಾರ್ಯಕ್ರಮ ನಿರೂಪಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಉರ್ದಿಲ ವಾಲಿಬಾಲ್ ಪಂದ್ಯಾಟ : ಸೇರಾ ಹಾಗೂ ನೇತಾಜಿ ತಂಡಕ್ಕೆ ಪ್ರಶಸ್ತಿ Rating: 5 Reviewed By: karavali Times
Scroll to Top