ಬಂಟ್ವಾಳ ಮಾ. 09, 2021 (ಕರಾವಳಿ ಟೈಮ್ಸ್) : ಬ್ರಹ್ಮರಕೊಟ್ಲು ಅವೈಜ್ಞಾನಿಕ ಟೋಲ್ ಸಂಗ್ರಹವನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳ ವತಿಯಿಂದ ಇಲ್ಲಿನ ಟೋಲ್ ಗೇಟ್ ಬಳಿ ಮಂಗಳವಾರ ಪ್ರತಿಭಟನೆ ನಡೆಯಿತು.
ಇಲ್ಲಿನ ಟೋಲ್ ಪ್ಲಾಝಾ ಹೆದ್ದಾರಿ ಇಲಾಖೆಯ ಯಾವುದೇ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ. ಇಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ. ಸರ್ವಿಸ್ ರಸ್ತೆಯಿಲ್ಲ. ಕಿರಿದಾ ರಸ್ತೆ ಕೇಡು ಬೇರೆ. ಅವೈಜ್ಞಾನಿಕ ಟೋಲ್ ಪ್ಲಾಝಾದಿಂದಾಗಿ ನಿರಂತರ ಟ್ರಾಫಿಕ್ ಅವ್ಯವಸ್ಥೆಗೂ ಕಾರಣವಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪೆಟ್ರೋಲ್, ಡೀಸೆಲ್, ಗ್ಯಾಸ್, ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಕಂಗಾಲಾಗಿದ್ದಾರೆ. ಈ ಮಧ್ಯೆ ಟೋಲ್ ಸಂಗ್ರಹದ ನೀತಿಯಲ್ಲಿ ಬದಲಾವಣೆಯ ಹೆಸರಿನಲ್ಲಿ ಕೇಂದ್ರ ಸರಕಾರ ಜನರ ಮೇಲೆ ಮತ್ತಷ್ಟು ಹೊರೆ ಹಾಕುತ್ತಿದೆ. ಈ ಮೂಲಕ ಕೇಂದ್ರ ಸರಕಾರ ಬಡವರ ಜೇಬಿಗೆ ಕೈ ಹಾಕಿ ಬಂಡವಾಳ ಶಾಹಿಗಳ ಜೇಬು ತುಂಬಿಸುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಮಾಜಿ ಸಚಿವ ಬಿ ರಮಾನಾಥ ರೈ, ಪ್ರಮುಖರಾದ ಪ್ರಭಾಕರ, ನ್ಯಾಯವಾದಿಗಳಾದ ದೀಪಕ್ ಕುಮಾರ್ ಜೈನ್, ಉಮೇಶ್ ಕುಮಾರ್ ವೈ, ತುಳಸೀದಾಸ್ ವಿಟ್ಲ, ರಾಮಣ್ಣ ವಿಟ್ಲ, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಿ ಎಂ ಅಬ್ಬಾಸ್ ಅಲಿ, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ ಮಾಣಿ, ಲುಕ್ಮಾನ್ ಬಿ ಸಿ ರೋಡು, ಇಬ್ರಾಹಿಂ ನವಾಝ್ ಬಡಕಬೈಲು, ಮಧುಸೂದನ್, ಮೋಹನ್ ಗೌಡ, ಚಿತ್ತರಂಜನ್ ಶೆಟ್ಟಿ ಬೊಂಡಾಲ, ಪದ್ಮನಾಭ ರೈ, ಹಾರೂನ್ ರಶೀದ್ ಬಂಟ್ವಾಳ, ಅಲ್ತಾಫ್ ತುಂಬೆ, ಪ್ರವೀಣ್ ತುಂಬೆ, ಪ್ರಕಾಶ್ ಶೆಟ್ಟಿ ಶ್ರೀಶೈಲ, ಮುಹಮ್ಮದ್ ವಳವೂರ್, ಸದಾಶಿವ ಬಂಗೇರ, ಮುಹಮ್ಮದ್ ನಂದಾವರ, ಲೋಲಾಕ್ಷ ಶೆಟ್ಟಿ, ವಾಸು ಪೂಜಾರಿ, ವೆಂಕಪ್ಪ ಪೂಜಾರಿ, ಬಿ ಶೇಖರ್, ಸುರೇಶ್ ಕುಮಾರ್, ಪ್ರಶಾಂತ್ ಕುಲಾಲ್ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
0 comments:
Post a Comment