10 ರೂಪಾಯಿ ನಾಣ್ಯ ಸ್ವೀಕರಿಸುವಂತೆ ಸಾರಿಗೆ ಇಲಾಖೆ ಸುತ್ತೋಲೆ - Karavali Times 10 ರೂಪಾಯಿ ನಾಣ್ಯ ಸ್ವೀಕರಿಸುವಂತೆ ಸಾರಿಗೆ ಇಲಾಖೆ ಸುತ್ತೋಲೆ - Karavali Times

728x90

24 February 2020

10 ರೂಪಾಯಿ ನಾಣ್ಯ ಸ್ವೀಕರಿಸುವಂತೆ ಸಾರಿಗೆ ಇಲಾಖೆ ಸುತ್ತೋಲೆ


10 ರೂ. ನಾಣ್ಯ ವಿಚಾರದಲ್ಲಿ ಗೊಂದಲಕ್ಕೆ ತೆರೆ ಎಳೆದ ಬಿಎಂಟಿಸಿ

 

 

ಬೆಂಗಳೂರು (ಕರಾವಳಿ ಟೈಮ್ಸ್) : ಹತ್ತು ರೂಪಾಯಿ ನಾಣ್ಯ ಚಾಲ್ತಿಯಲ್ಲಿ ಇಲ್ಲ ಎಂಬ ಸುದ್ದಿ ಎಲ್ಲೆಡೆ ಹಬ್ಬಿ ವ್ಯಾಪಾರ, ವ್ಯವಹಾರ ಎಲ್ಲಾ ಕಡೆ ನಾಣ್ಯವನ್ನು ಸ್ವೀಕರಿಸುತ್ತಿಲ್ಲ. ಬೆಂಗಳೂರಿನ ಬಿಎಂಟಿಸಿ ಬಸ್ಸುಗಳಲ್ಲಿ ಕೂಡ ನಾಣ್ಯ ಸ್ವೀಕರಿಸುತ್ತಿಲ್ಲ. ಈ ಬಗ್ಗೆ ಬಿಎಂಟಿಸಿ ಕಂಡಕ್ಟರ್ ಮತ್ತು ಪ್ರಯಾಣಿಕರ ನಡುವೆ ವಾಗ್ವಾದ ನಡೆದಿರುವ ಉದಾಹಾರಣೆಗಳು ಸಾಕಷ್ಟಿವೆ. ಇದರಿಂದ ಕೊನೆಗೂ ಎಚ್ಚೆತ್ತ ಬಿಎಂಟಿಸಿ 10 ರೂಪಾಯಿ ನಾಣ್ಯ ಸ್ವೀಕರಿಸುವಂತೆ ಬಸ್ಸು ಸಿಬ್ಬಂದಿಗಳಿಗೆ ಸುತ್ತೋಲೆ ಹೊರಡಿಸಿದೆ.  
 
    ಹತ್ತು ರೂಪಾಯಿ ನಾಣ್ಯವನ್ನು ಆರ್‍ಬಿಐ ಬ್ಯಾನ್ ಮಾಡಿಲ್ಲ. ನಾಣ್ಯವನ್ನು ಸ್ವೀಕರಿಸಿ ಎಂದು ಸುತ್ತೋಲೆ ಹೊರಡಿಸಿರುವ ಬಿಎಂಟಿಸಿ ಬಸ್ಸುಗಳಲ್ಲಿ ಇರಬಹುದು ಡಿಪೆÇೀಗಳಲ್ಲಿ ಇರಬಹುದು ನಾಣ್ಯ ಸ್ವೀಕರಿಸುವಂತೆ  ಸುತ್ತೋಲೆಯನ್ನು ಹೊರಡಿಸಲಾಗಿದೆ. ಬಿಎಂಟಿಸಿ ಡಿಪೆÇೀ ಮತ್ತು ಬಸ್ಸುಗಳಲ್ಲಿ ಹತ್ತು ರೂಪಾಯಿ ನಾಣ್ಯವನ್ನು ಸ್ವೀಕರಿಸಿ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದ್ದು, ಗೊಂದಲಕ್ಕೆ ತೆರೆ ಎಳೆಯಲಾಗಿದೆ. 

    ಎಲ್ಲಾ ಕಂಡಕ್ಟರ್‍ಗಳು ಬಿಎಂಟಿಸಿ ಬಸ್ಸಿನಲ್ಲಿ ಪ್ರಯಾಣಿಕರು ನೀಡುವ ಹತ್ತು ರೂಪಾಯಿ ನಾಣ್ಯವನ್ನು ಮಾನ್ಯ ಮಾಡುವಂತೆ ಸೂಚನೆ ನೀಡಿದೆ. ಜೊತೆಗೆ ಪ್ರಯಾಣಿಕರಿಗೆ ಚಿಲ್ಲರೆ ನೀಡುವಾಗ ಹತ್ತು ರೂಪಾಯಿ ನಾಣ್ಯ ನೀಡಬೇಕು. ಹತ್ತು ರೂಪಾಯಿ ನಾಣ್ಯ ಮಾನ್ಯತೆ ಇದೆ. ಅದನ್ನು ಮರು ಬಳಕೆ ಮಾಡಿ ಎಂದು ಸೂಚನೆ ನೀಡಬೇಕೆಂದು ಹೇಳಿದೆ. ಜೊತೆಗೆ ಬಸ್ಸುಗಳಲ್ಲಿ ಹತ್ತು ರೂಪಾಯಿ ನಾಣ್ಯದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಬಿಎಂಟಿಸಿ ತಿಳಿಸಿದೆ.










 
  • Blogger Comments
  • Facebook Comments

0 comments:

Post a Comment

Item Reviewed: 10 ರೂಪಾಯಿ ನಾಣ್ಯ ಸ್ವೀಕರಿಸುವಂತೆ ಸಾರಿಗೆ ಇಲಾಖೆ ಸುತ್ತೋಲೆ Rating: 5 Reviewed By: lk
Scroll to Top