ಆಧಾರ್-ಪ್ಯಾನ್ ಲಿಂಕ್ ಅಂತಿಮ ದಿನಾಂಕ ಮಾರ್ಚ್ 31, ಜೋಡಿಸದಿದ್ದಲ್ಲಿ ನಿಷ್ಕ್ರಿಯವಾಗಲಿದೆ ಪ್ಯಾನ್ ಕಾರ್ಡ್ - Karavali Times ಆಧಾರ್-ಪ್ಯಾನ್ ಲಿಂಕ್ ಅಂತಿಮ ದಿನಾಂಕ ಮಾರ್ಚ್ 31, ಜೋಡಿಸದಿದ್ದಲ್ಲಿ ನಿಷ್ಕ್ರಿಯವಾಗಲಿದೆ ಪ್ಯಾನ್ ಕಾರ್ಡ್ - Karavali Times

728x90

15 February 2020

ಆಧಾರ್-ಪ್ಯಾನ್ ಲಿಂಕ್ ಅಂತಿಮ ದಿನಾಂಕ ಮಾರ್ಚ್ 31, ಜೋಡಿಸದಿದ್ದಲ್ಲಿ ನಿಷ್ಕ್ರಿಯವಾಗಲಿದೆ ಪ್ಯಾನ್ ಕಾರ್ಡ್





ನವದೆಹಲಿ (ಕರಾವಳಿ ಟೈಮ್ಸ್) : ಮುಂದಿನ  ಮಾರ್ಚ್ ಅಂತ್ಯದ ವೇಳೆಗೆ ಆಧಾರ್ ಕಾರ್ಡಿನೊಂದಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡದಿದ್ದರೆ ಪ್ಯಾನ್ ಕಾರ್ಡ್‍ಗಳು ನಿಷ್ಕ್ರಿಯವಾಗಲಿದೆ.


    2020ರ ಮಾರ್ಚ್ 31ರೊಳಗೆ ಆಧಾರ್‍ನೊಂದಿಗೆ ಲಿಂಕ್ ಮಾಡದಿದ್ದರೆ  ಶಾಶ್ವತ ಖಾತೆ ಸಂಖ್ಯೆ (ಪ್ಯಾನ್) ನಿಷ್ಕ್ರಿಯಗೊಂಡು ಪ್ರಯೋಜನಕ್ಕೆ ಬಾರದಂತೆ ಆಗಲಿದೆ ಎಂದು ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ.


    ಪ್ಯಾನ್ ಮತ್ತು ಆಧಾರ್ ಸಂಪರ್ಕಿಸುವ ಗಡುವನ್ನು ಈಗಾಗಲೇ ಹಲವು ಭಾರಿ ವಿಸ್ತರಿಸಲಾಗಿದ್ದು, ಮುಂದಿನ ಅಂತಿಮ ದಿನಾಂಕ  ಮಾರ್ಚ್ 31, 2020 ಆಗಿರುತ್ತದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿಕೊಂಡಿದೆ.



    ಇತ್ತೀಚಿನ ಅಂಕಿ ಅಂಶಗಳ ಪ್ರಕಾರ, ಈಗಾಗಲೇ 30.75 ಕೋಟಿಗೂ ಹೆಚ್ಚು ಪ್ಯಾನ್ ಕಾರ್ಡ್ ಆಧಾರ್‍ಗೆ ಜೋಡಿಸಲಾಗಿದ್ದು, 17.58 ಕೋಟಿ ಪ್ಯಾನ್‍ಗಳನ್ನು ಇನ್ನೂ 12 ಅಂಕಿಯ ಬಯೋಮೆಟ್ರಿಕ್ ಐಡಿಯೊಂದಿಗೆ ಜೋಡಿಸಲಾಗಿಲ್ಲ.


    ಸುಪ್ರೀಂ ಕೋರ್ಟ್ 2018 ರ ಸೆಪ್ಟೆಂಬರ್‍ನಲ್ಲಿ ಆಧಾರ್ ಅನ್ನು ಸಾಂವಿಧಾನಿಕವಾಗಿ ಮಾನ್ಯ ಎಂದು ಘೋಷಿಸಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಮತ್ತು ಪ್ಯಾನ್ ಕಾರ್ಡ್‍ಗಳ ಹಂಚಿಕೆಗೆ ಬಯೋಮೆಟ್ರಿಕ್ ಐಡಿ ಕಡ್ಡಾಯ ಎಂದು ಅಭಿಪ್ರಾಯಪಟ್ಟಿತ್ತು. ಈ ಹಿನ್ನಲೆಯಲ್ಲಿ ಮುಂದಿನ ಮಾರ್ಚ್ ಅಂತ್ಯದೊಳಗೆ ಆಧಾರ್ ಕಾರ್ಡಿನೊಂದಿಗೆ ಪಾನ್ ಕಾರ್ಡ್ ಜೋಡಿಸದಿದ್ದಲ್ಲಿ ಪ್ಯಾನ್ ಕಾರ್ಡ್‍ಗಳು ನಿಷ್ಕ್ರಿಯಗೊಳ್ಳಲಿದೆ ಎಂದು ಎಚ್ಚರಿಸಲಾಗಿದೆ.
  • Blogger Comments
  • Facebook Comments

0 comments:

Post a Comment

Item Reviewed: ಆಧಾರ್-ಪ್ಯಾನ್ ಲಿಂಕ್ ಅಂತಿಮ ದಿನಾಂಕ ಮಾರ್ಚ್ 31, ಜೋಡಿಸದಿದ್ದಲ್ಲಿ ನಿಷ್ಕ್ರಿಯವಾಗಲಿದೆ ಪ್ಯಾನ್ ಕಾರ್ಡ್ Rating: 5 Reviewed By: lk
Scroll to Top