ಲಾಕ್ ಡಾನ್ ನೆಪದಲ್ಲಿ ವರ್ತಕರಿಗೆ ಪೊಲೀಸ್ ದೌರ್ಜನ್ಯ : ವಿಟ್ಲ ಎಸ್ಸೈ ವಿರುದ್ದ ಡಿವೈಎಸ್ಪಿಗೆ ದೂರಿತ್ತ ಅಂಗಡಿ ಮಾಲಕ - Karavali Times ಲಾಕ್ ಡಾನ್ ನೆಪದಲ್ಲಿ ವರ್ತಕರಿಗೆ ಪೊಲೀಸ್ ದೌರ್ಜನ್ಯ : ವಿಟ್ಲ ಎಸ್ಸೈ ವಿರುದ್ದ ಡಿವೈಎಸ್ಪಿಗೆ ದೂರಿತ್ತ ಅಂಗಡಿ ಮಾಲಕ - Karavali Times

728x90

23 March 2020

ಲಾಕ್ ಡಾನ್ ನೆಪದಲ್ಲಿ ವರ್ತಕರಿಗೆ ಪೊಲೀಸ್ ದೌರ್ಜನ್ಯ : ವಿಟ್ಲ ಎಸ್ಸೈ ವಿರುದ್ದ ಡಿವೈಎಸ್ಪಿಗೆ ದೂರಿತ್ತ ಅಂಗಡಿ ಮಾಲಕ



ಬಂಟ್ವಾಳ (ಕರಾವಳಿ ಟೈಮ್ಸ್) : ಕೊರೊನಾ ಲಾಕ್‍ಡೌನ್ ನೆಪದಲ್ಲಿ ಸಾಲೆತ್ತೂರಿನ ಹಾಲು ಹಾಗೂ ಪತ್ರಿಕಾ ಮಾರಾಟದ ಅಂಗಡಿಗೆ ನುಗ್ಗಿದ ವಿಟ್ಲ ಎಸ್ಸೈ ಅಂಗಡಿ ಮಾಲಕ ಹಾಗೂ ಕೆಲಸದವನ ಮೇಲೆ ದೈಹಿಕ ಹಲ್ಲೆ ನಡೆಸಿದ ಬಗ್ಗೆ ಬಂಟ್ವಾಳ ಡಿವೈಎಸ್ಪಿ ವೆಲೈಂಟಿನ್ ಡಿ’ಸೋಜ ಅವರಿಗೆ ಅಂಗಡಿ ಮಾಲಕ ಸಿಕಂದರ್ ಪಾಶಾ ದೂರು ನೀಡಿದ್ದಾರೆ.


    ಸಿಕಂದರ್ ಪಾಶಾ ಸಾಲೆತ್ತೂರಿನಲ್ಲಿ ನಾಬ್ ಮಿಲ್ಕ್ ಪಾರ್ಲರ್ ನಡೆಸುತ್ತಿದ್ದು, ಸೋಮವಾರ ಮಧ್ಯಾಹ್ನ 12 ಗಂಟೆಯ ವೇಳೆಗೆ ಕಾನ್‍ಸ್ಟೇಬಲ್ ಜೊತೆ ಆಗಮಿಸಿದ ವಿಟ್ಲ ಠಾಣಾ ಎಸ್ಸೈ ವಿನೋದ್ ರೆಡ್ಡಿ ಏಕಾಏಕಿ ಅಂಗಡಿಯೊಳಗೆ ನುಗ್ಗಿ ಕೆಲಸದವ ನವಾಝ್‍ನನ್ನು ಅಂಗಡಿಯಿಂದ ಹೊರೆಗೆ ಎಳೆದು ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಮಧ್ಯೆ ಪ್ರವೇಶಿಸಿದ ಪಾಶಾನನ್ನು ಕೂಡಾ ಎಸ್ಸೈ ಅಂಗಿಯ ಕಾಲರ್ ಪಟ್ಟಿ ಹಿಡಿದು ಕಿವಿಯ ಭಾಗಕ್ಕೆ ಹಲ್ಲೆ ನಡೆಸಿದ್ದು, ಹಲ್ಲೆಯಿಂದ ಪಾಶಾ ಅವರಿಗೆ ಗಾಯವಾಗಿದೆ ಎನ್ನಲಾಗಿದೆ.


    ಸಿಕಂದರ್ ಪಾಶಾ ತನ್ನ ಸಹೋದರ ಇರ್ಫಾನ್ ಎಂಬಾತನ ಹೆಸರಿನಲ್ಲಿ ಸ್ಥಳೀಯ ಗ್ರಾಮ ಪಂಚಾಯತ್ ಪರವಾನಿಗೆ ಪಡೆದು ಸಾಲೆತ್ತೂರಿನಲ್ಲಿ ಹಲವು ವರ್ಷಗಳಿಂದ ಹಾಲು, ಹಾಲಿನ ಉತ್ಪನ್ನಗಳು ಹಾಗೂ ಪತ್ರಿಕೆಗಳನ್ನು ಮಾರಾಟ ಮಾಡುತ್ತಿದ್ದಾನೆ. ಈತ ನಂದಿನಿ ಹಾಲಿನ ಸಂಸ್ಥೆಯ ಅಧಿಕೃತ ಪರವಾನಿಗೆ ಇರುವ ಏಜೆಂಟ್ ಆಗಿರುತ್ತಾನೆ. ಕೊರೋನ ವೈರಸ್ ತಡೆಗೆ ರಾಜ್ಯದಲ್ಲಿ ಲಾಕ್‍ಡೌನ್ ಘೋಷಿಸಲಾಗಿದೆ. ಆದರೆ ದಿನ ಬಳಕೆಯ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ಇದ್ದು ಈ ಬಗ್ಗೆ ಜಿಲ್ಲಾಧಿಕಾರಿಯ ಆದೇಶವೂ ಇದೆ. ಪತ್ರಿಕೆ ಹಾಗೂ ಹಾಲು ದಿನ ಬಳಕೆಯ ವಸ್ತುಗಳೆಂದು ಘೋಷಿಸಿಲಾಗಿದ್ದು ಅದರಂತೆ ನಾವು ಬೆಳಗ್ಗೆಯಿಂದ ಅಂಗಡಿ ತೆರದು ಹಾಲು ಮತ್ತು ಪತ್ರಿಕೆ ಮಾರಾಟ ಮಾಡುತ್ತಿದ್ದೆವು. ಈ ವೇಳೆ ಅಂಗಡಿಗೆ ನುಗ್ಗಿದ ಎಸ್ಸೈ ವಿನೋದ್ ರೆಡ್ಡಿ ಅವರು ಅಂಗಡಿ ಬಂದ್ ಮಾಡಲೂ ಅವಕಾಶ ನೀಡದೆ ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಅಂಗಡಿಯ ಸಿಸಿ ಕೆಮರಾದಲ್ಲಿ ದಾಖಲಾಗಿದೆ. ಹಲ್ಲೆ ನಡೆಸಿದ ಎಸ್ಸೈ ವಿನೋದ್ ರೆಡ್ಡಿ ವಿರುದ್ಧ ಕಾನೂನು ಕ್ರಮ ಜರಗಿಸಬೇಕು ಎಂದು ಸಿಕಂದರ್ ಪಾಶಾ ಡಿವೈಎಸ್ಪಿಗೆ ನೀಡಿದ ದೂರಿನಲ್ಲಿ ಆಗ್ರಹಿಸಿದ್ದಾರೆ.


    ಈ ಬಗ್ಗೆ ಪ್ರತಿಕ್ರಯಿಸಿರುವ ಬಂಟ್ವಾಳ ಡಿವೈಎಸ್ಪಿ ವೆಲೈಂಟಿನ್ ಡಿ’ಸೋಜ ವಿಟ್ಲ ಠಾಣೆಯ ಎಸೈ ಹಲ್ಲೆ ನಡೆಸಿರುವ ಬಗ್ಗೆ ಹಾಲಿನ ಅಂಗಡಿ ಏಜೆಂಟ್ ದೂರು ನೀಡಿದ್ದು, ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಲಾಕ್ ಡಾನ್ ನೆಪದಲ್ಲಿ ವರ್ತಕರಿಗೆ ಪೊಲೀಸ್ ದೌರ್ಜನ್ಯ : ವಿಟ್ಲ ಎಸ್ಸೈ ವಿರುದ್ದ ಡಿವೈಎಸ್ಪಿಗೆ ದೂರಿತ್ತ ಅಂಗಡಿ ಮಾಲಕ Rating: 5 Reviewed By: karavali Times
Scroll to Top