ಬಂಟ್ವಾಳದಲ್ಲಿ ಮತ್ತೊಂದು ಪಾಸಿಟಿವ್ ಪ್ರಕರಣ : ಮೃತ ಮಹಿಳೆಯ ನೆರೆಕೆರೆ ವೃದ್ದೆಗೆ ಸೋಂಕು ದೃಢ - Karavali Times ಬಂಟ್ವಾಳದಲ್ಲಿ ಮತ್ತೊಂದು ಪಾಸಿಟಿವ್ ಪ್ರಕರಣ : ಮೃತ ಮಹಿಳೆಯ ನೆರೆಕೆರೆ ವೃದ್ದೆಗೆ ಸೋಂಕು ದೃಢ - Karavali Times

728x90

21 April 2020

ಬಂಟ್ವಾಳದಲ್ಲಿ ಮತ್ತೊಂದು ಪಾಸಿಟಿವ್ ಪ್ರಕರಣ : ಮೃತ ಮಹಿಳೆಯ ನೆರೆಕೆರೆ ವೃದ್ದೆಗೆ ಸೋಂಕು ದೃಢಬಂಟ್ವಾಳ (ಕರಾವಳಿ ಟೈಮ್ಸ್) : ಇಲ್ಲಿನ ರಥಬೀದಿ ಮಹಿಳೆ ಭಾನುವಾರ ಕೋವಿಡ್-19 ಸೋಂಕಿನಿಂದ ಮೃತಪಟ್ಟ ಬಳಿಕ ಇದೀಗ ಮಹಿಳೆಯ ನೆರೆ ಮನೆಯ ವೃದ್ದೆಗೆ ಇಂದು ಸೋಂಕು ಧೃಢಪಟ್ಟಿರುವುದಾಗಿ ಆರೋಗ್ಯ ಇಲಾಖೆಯ ಮಾಹಿತಿ ತಿಳಿಸಿದೆ. ತೀವ್ರ ಉಸಿರಾಟದ ತೊಂದರೆಯಿಂದ ಎ 18 ರಂದು ಆಸ್ಪತ್ರೆಗೆ ದಾಖಲಾಗಿದ್ದ ವೃದ್ದೆಯ ಗಂಟಲು ದ್ರವ ಪರೀಕ್ಷೆಗೆ ರವಾನಿಸಲಾಗಿತ್ತು. ಈ ಬಗ್ಗೆ ವರದಿ ಬಂದಿದ್ದು, ಕೊರೋನಾ ಪಾಸಿಟಿವ್ ಎಂದು ತಿಳಿದು ಬಂದಿದೆ.

ಬಂಟ್ವಾಳದಲ್ಲಿ ಮತ್ತೊಂದು ಪಾಸಿಟಿವ್ ವರದಿಯಾಗುತ್ತಿದ್ದಂತೆ ಇಲಾಖಾಧಿಕಾರಿಗಳು ಮತ್ತೆ ಎಲರ್ಟ್ ಆಗಿದ್ದಾರೆ. ಪುರಸಭೆಯಲ್ಲಿ 24*7 ಕಂಟ್ರೋಲ್ ರೂಂ ತೆರೆಯಲಾಗಿದ್ದು, ಜನರಿಗೆ ಅಗತ್ಯ ಸಾಮಾಗ್ರಿ ಪೂರೈಸಲು ಪೂರಕ ವ್ಯವಸ್ಥೆ ಕಲ್ಪಿಸಲಾಗಿದೆ. 
  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳದಲ್ಲಿ ಮತ್ತೊಂದು ಪಾಸಿಟಿವ್ ಪ್ರಕರಣ : ಮೃತ ಮಹಿಳೆಯ ನೆರೆಕೆರೆ ವೃದ್ದೆಗೆ ಸೋಂಕು ದೃಢ Rating: 5 Reviewed By: karavali Times
Scroll to Top