ದ್ವಿಚಕ್ರ ವಾಹನಕ್ಕೆ ನೀಡಿದ ರಿಯಾಯಿತಿ ಸಹಿತ ಲಾಕ್‍ಡೌನ್ ಸಡಿಲಿಕೆ ವಾಪಸ್ ಪಡೆದ ಸರ್ಕಾರ : ಎ. 20 ರ ಬಳಿಕವೂ ಯಥಾಸ್ಥಿತಿ ಮುಂದುವರಿಕೆ - Karavali Times ದ್ವಿಚಕ್ರ ವಾಹನಕ್ಕೆ ನೀಡಿದ ರಿಯಾಯಿತಿ ಸಹಿತ ಲಾಕ್‍ಡೌನ್ ಸಡಿಲಿಕೆ ವಾಪಸ್ ಪಡೆದ ಸರ್ಕಾರ : ಎ. 20 ರ ಬಳಿಕವೂ ಯಥಾಸ್ಥಿತಿ ಮುಂದುವರಿಕೆ - Karavali Times

728x90

18 April 2020

ದ್ವಿಚಕ್ರ ವಾಹನಕ್ಕೆ ನೀಡಿದ ರಿಯಾಯಿತಿ ಸಹಿತ ಲಾಕ್‍ಡೌನ್ ಸಡಿಲಿಕೆ ವಾಪಸ್ ಪಡೆದ ಸರ್ಕಾರ : ಎ. 20 ರ ಬಳಿಕವೂ ಯಥಾಸ್ಥಿತಿ ಮುಂದುವರಿಕೆ



ಬೆಂಗಳೂರು (ಕರಾವಳಿ ಟೈಮ್ಸ್) : ಎಪ್ರಿಲ್ 20ರ ಬಳಿಕ ದ್ವಿಚಕ್ರ ವಾಹನಗಳ ಸಂಚಾರಕ್ಕೆ ರಿಯಾಯಿತಿ ನೀಡುವ ಮೂಲಕ ಸರಕಾರ ನೀಡಿದ್ದ ಲಾಕ್‍ಡೌನ್ ಸಡಿಲಿಕೆ ನಿಯಮವನ್ನು ವಾಪಾಸ್ ಪಡೆದುಕೊಂಡಿದೆ. ಕಂಟೇನ್‍ಮೆಂಟ್ ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಪ್ರದೇಶಗಳಲ್ಲಿ ದ್ವಿಚಕ್ರ ವಾಹನಗಳ ಓಡಾಟಕ್ಕೆ ಅವಕಾಶ ನೀಡಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇಂದು ಸಂಜೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.

ಇದೀಗ ಮುಖ್ಯಮಂತ್ರಿಗಳು ಕೆಲ ಹಿರಿಯ ಮಂತ್ರಿಗಳು ಹಾಗೂ ಇತರರ ಒತ್ತಾಯದ ಮೇರೆಗೆ ಈ ಹೇಳಿಕೆಯನ್ನು ವಾಪಾಸು ಪಡೆದಿದ್ದು, ಎಪ್ರಿಲ್ 20 ರಿಂದ ಯಥಾಸ್ಥಿತಿ ಮುಂದುವರೆಯಲಿದೆ ಎಂದಿದ್ದಾರೆ. ಎಪ್ರಿಲ್ 20ರ ನಂತರ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರದ (ಐಟಿ, ಬಿಟಿ) ಶೇ. 33ರಷ್ಟು ಸಿಬ್ಬಂದಿ ಕಛೇರಿಗೆ ಹೋಗಿ ಕಾರ್ಯನಿರ್ವಹಿಸಲು ನೀಡಲಾಗಿದ್ದ ಅವಕಾಶವನ್ನು ಕೂಡಾ ಸರಕಾರ ಹಿಂಪಡೆದುಕೊಂಡಿದೆ. ಅಗತ್ಯ ವಸ್ತುಗಳಿಗೆ ಮಾತ್ರ ಸರ್ಕಾರ ಅವಕಾಶ ನೀಡಿದೆ.

ಸರ್ಕಾರ ಮಧ್ಯಾಹ್ನ ತೆಗೆದುಕೊಂಡ ಮುಕ್ತ ಅವಕಾಶ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತನ್ನ ನಿರ್ಧಾರವನ್ನು ವಾಪಾಸ್ ಪಡೆದುಕೊಂಡಿದೆ. ಪಾಸ್ ಪಡೆದ ದ್ವಿಚಕ್ರ ವಾಹನ ಸವಾರರು ಹಾಗೂ ಐಟಿ ಬಿಟಿ ಕ್ಷೇತ್ರದಲ್ಲಿ ಅಗತ್ಯ ಸೇವೆಯಲ್ಲಿರುವವರಿಗೆ ಮಾತ್ರ ಅವಕಾಶ ನೀಡಲು ಹಿರಿಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಕೆ. ಸುಧಾಕರ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ದ್ವಿಚಕ್ರ ವಾಹನಕ್ಕೆ ನೀಡಿದ ರಿಯಾಯಿತಿ ಸಹಿತ ಲಾಕ್‍ಡೌನ್ ಸಡಿಲಿಕೆ ವಾಪಸ್ ಪಡೆದ ಸರ್ಕಾರ : ಎ. 20 ರ ಬಳಿಕವೂ ಯಥಾಸ್ಥಿತಿ ಮುಂದುವರಿಕೆ Rating: 5 Reviewed By: karavali Times
Scroll to Top