ಮಾರ್ನಬೈಲಿನಲ್ಲಿ ಬ್ರೇಕ್ ವೈಫಲ್ಯಗೊಂಡು ಲಾರಿಗೆ ಬೆಂಕಿ : ಚಾಲಕ-ಕ್ಲೀನರ್‍ಗೆ ಗಾಯ - Karavali Times ಮಾರ್ನಬೈಲಿನಲ್ಲಿ ಬ್ರೇಕ್ ವೈಫಲ್ಯಗೊಂಡು ಲಾರಿಗೆ ಬೆಂಕಿ : ಚಾಲಕ-ಕ್ಲೀನರ್‍ಗೆ ಗಾಯ - Karavali Times

728x90

28 April 2020

ಮಾರ್ನಬೈಲಿನಲ್ಲಿ ಬ್ರೇಕ್ ವೈಫಲ್ಯಗೊಂಡು ಲಾರಿಗೆ ಬೆಂಕಿ : ಚಾಲಕ-ಕ್ಲೀನರ್‍ಗೆ ಗಾಯ



ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಮೆಲ್ಕಾರ್ ಸಮೀಪದ ಮಾರ್ನಬೈಲಿನಲ್ಲಿ ಬುಧವಾರ ಮುಂಜಾನೆ ಕ್ಯಾಟಲ್ ಫುಡ್ ಸಾಗಾಟದ ಲಾರಿ ಬ್ರೇಕ್ ವೈಫಲ್ಯಗೊಂಡು ಚಾಲಕನ ನಿಯಂತ್ರಣ ಮೀರಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಕೊಂಡ ಪರಿಣಾಮ ಹೊತ್ತಿ ಉರಿದಿದೆ.

ಮಾರ್ನಬೈಲ್ ಸಮೀಪದ ಕಂದೂರು ಕೋಸ್ಟಲ್ ಫಾರಂನ ಕ್ಯಾಟಲ್ ಫುಡ್ ಹೇರಿಕೊಂಡು ಪುತ್ತೂರು ಕಡೆ ತೆರಳುತ್ತಿದ್ದ ಲಾರಿ ಮಾರ್ನಬೈಲ್ ಇಳಿಜಾರಿನಲ್ಲಿ ಬ್ರೇಕ್ ವೈಫಲ್ಯಗೊಂಡು ಚಾಲಕನ ನಿಯಂತ್ರಣ ಮೀರಿದೆ. ಪರಿಣಾಮ ರಸ್ತೆ ಬದಿಯಲ್ಲಿ ವಿದ್ಯುತ್ ಕಂಬ ಹಾಗೂ ಮನೆಗೆ ಡಿಕ್ಕಿ ಹೊಡೆದಿದೆ. ಅದೇ ವೇಳೆ ಲಾರಿಯಲ್ಲಿ ಹಠಾತ್ ಬೆಂಕಿ ಹೊತ್ತಿಕೊಂಡು ಭಾಗಶಃ ಸುಟ್ಟು ಕರಕಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಘಟನೆಯಿಂದ ಲಾರಿ ಚಾಲಕ ಉಮೇಶ್ ಗಂಭೀರ ಗಾಯಗೊಂಡಿದ್ದು, ಕ್ಲೀನರ್‍ಗೂ ಗಾಯಗಳಾಗಿವೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಲಾರಿಯಿಂದ ಹೊರಕ್ಕೆ ಜಿಗಿದ ಚಾಲಕ ಹಾಗೂ ಕ್ಲೀನರ್‍ರನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದಾರೆ. ಘಟನಾ ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಹಾಗೂ ನಗರ ಠಾಣಾ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 
  • Blogger Comments
  • Facebook Comments

0 comments:

Post a Comment

Item Reviewed: ಮಾರ್ನಬೈಲಿನಲ್ಲಿ ಬ್ರೇಕ್ ವೈಫಲ್ಯಗೊಂಡು ಲಾರಿಗೆ ಬೆಂಕಿ : ಚಾಲಕ-ಕ್ಲೀನರ್‍ಗೆ ಗಾಯ Rating: 5 Reviewed By: karavali Times
Scroll to Top