ಮಕ್ಕಳನ್ನು ಪೋಷಕರ ಮಡಿಲು ಸೇರಿಸಿದ ಕದ್ರಿ ಎಎಸ್ಸೈ ಸಂತೋಷ್ ಕಟೀಲ್ ಅವರ ಕಾರ್ಯಕ್ಕೆ ಮೆಚ್ಚುಗೆ - Karavali Times ಮಕ್ಕಳನ್ನು ಪೋಷಕರ ಮಡಿಲು ಸೇರಿಸಿದ ಕದ್ರಿ ಎಎಸ್ಸೈ ಸಂತೋಷ್ ಕಟೀಲ್ ಅವರ ಕಾರ್ಯಕ್ಕೆ ಮೆಚ್ಚುಗೆ - Karavali Times

728x90

15 April 2020

ಮಕ್ಕಳನ್ನು ಪೋಷಕರ ಮಡಿಲು ಸೇರಿಸಿದ ಕದ್ರಿ ಎಎಸ್ಸೈ ಸಂತೋಷ್ ಕಟೀಲ್ ಅವರ ಕಾರ್ಯಕ್ಕೆ ಮೆಚ್ಚುಗೆ



ಮಂಗಳೂರು (ಕರಾವಳಿ ಟೈಮ್ಸ್) : ಕೇರಳ ಮೂಲದ ಇಬ್ಬರು ಮಕ್ಕಳನ್ನು ಅವರ ಪೋಷಕರ ಜೊತೆ ಸೇರಿಸುವ ಮೂಲಕ ಮಂಗಳೂರು ಪೂರ್ವ (ಕದ್ರಿ) ಪೋಲೀಸ್ ಠಾಣಾ ಎಎಸ್‍ಐ ಸಂತೋಷ್ ಕುಮಾರ್ ಕಟೀಲ್ ಮಾನವೀಯತೆ ಮೆರೆದಿದ್ದು, ಸಾರ್ವಜನಿಕ ಮೆಚ್ಚುಗೆಗೆ ಕಾಣವಾಗಿದೆ.

ರಜಾ ದಿನಗಳಲ್ಲಿ ಮಕ್ಕಳು ಮಂಗಳೂರಿಗೆ ಬಂದಿದ್ದರು. ಲಾಕ್‍ಡೌನ್ ಹಿನ್ನೆಲೆಯಲ್ಲಿ ಗಡಿ ಮುಚ್ಚಿದ ನಂತರ ಮಕ್ಕಳಿಗೆ ಅವರ ಊರಿಗೆ ಮರಳಲು ಸಾಧ್ಯವಾಗಿರಲಿಲ್ಲ. ಕಾಸರಗೋಡು ಜಿಲ್ಲೆಯ ಮಂಜೇಶ್ವರ ಮೂಲದ ಇಬ್ಬರು ಮಕ್ಕಳು ಮಂಗಳದೇವಿಯಲ್ಲಿರುವ ತಮ್ಮ ಸಂಬಂಧಿಕರ ಮನೆಯಲ್ಲಿದ್ದರು ಮತ್ತು ಅವರ ಹೆತ್ತವರೊಂದಿಗೆ ಸೇರಲು ಉತ್ಸುಕರಾಗಿದ್ದರು. ಮಕ್ಕಳ ಸಂಬಂಧಿಕರು ಈ ವಿಷಯವನ್ನು ಎಎಸ್ಸೈ ಅವರ ಗಮನಕ್ಕೆ ತಂದಿದ್ದರು ಮತ್ತು ಈ ವಿಷಯದಲ್ಲಿ ಅವರ ಸಹಾಯವನ್ನು ಕೋರಿದ್ದರು.

ಹಿರಿಯರೊಂದಿಗೆ ಸಮಾಲೋಚಿಸಿದ ನಂತರ, ಎಎಸ್ಸೈ ಸಂತೋಷ್ ಅವರು ಮಕ್ಕಳನ್ನು ತಲಪಾಡಿ ಗಡಿಯವರೆಗೆ ತನ್ನ ವಾಹನದಲ್ಲಿ ಕರೆದೊಯ್ಯಲು ನಿರ್ಧರಿಸಿದರು. ಬಳಿಕ ಗಡಿಯನ್ನು ಭೇಟಿ ಮಾಡಲು ಕೇರಳ ಸರಕಾರದಿಂದ ಅನುಮತಿ ಪಡೆಯುವಂತೆ ಪೋಷಕರಿಗೆ ಸೂಚಿಸಲಾಯಿತು. ಅಂತಿಮವಾಗಿ, ಗಡಿಯಲ್ಲಿ ಮಕ್ಕಳು ತಮ್ಮ ಹೆತ್ತವರೊಂದಿಗೆ ಮತ್ತೆ ಒಂದಾದರು. ಎಎಸ್ಸೈ ಸಂತೋಷ್ ಅವರ ಈ ಕಾರ್ಯಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಮೆಚ್ಚುಗೆ  ವ್ಯಕ್ತವಾಗುತ್ತಿದೆ.

ಪೋಲೀಸ್ ಇಲಾಖೆಯ ಸಾಗರ್ ವಾಹನದಲ್ಲಿ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುವ ಮೂಲಕ ವೈದ್ಯಕೀಯ ನೆರವು ಪಡೆಯಲು ಕೂಡ ಎಎಸ್ಸೈ ಸಹಾಯ ಮಾಡಿದ್ದಾರೆ. ನಗರ ಪೋಲೀಸ್ ಆಯುಕ್ತ ಡಾ. ಹರ್ಷ ಅವರು ಎಎಸ್ಸೈ ಅವರ ಮಾನವೀಯ ಕಾರ್ಯವನ್ನು ಶ್ಲಾಘಿಸಿದ್ದಲ್ಲದೆ ಮೆಚ್ಚುಗೆಯ ಪ್ರಮಾಣ ಪತ್ರ ನೀಡಿ ಗೌರವಿಸಿದ್ದಾರೆ ಮತ್ತು ಅವರನ್ನು “ದಿನದ ಕರೋನಾ ಯೋಧ” ಎಂದು ಬಣ್ಣಿಸಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಮಕ್ಕಳನ್ನು ಪೋಷಕರ ಮಡಿಲು ಸೇರಿಸಿದ ಕದ್ರಿ ಎಎಸ್ಸೈ ಸಂತೋಷ್ ಕಟೀಲ್ ಅವರ ಕಾರ್ಯಕ್ಕೆ ಮೆಚ್ಚುಗೆ Rating: 5 Reviewed By: karavali Times
Scroll to Top