7,8 ನೇ ತರಗತಿಗೆ ಪರೀಕ್ಷೆ ಇಲ್ಲ, 9ನೇ ತರಗತಿಗೆ ಆಂತರಿಕ ಪರೀಕ್ಷೆ ನಿರ್ಣಾಯಕ, ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ ಬಗ್ಗೆ ಎ 14ರ ನಂತರ ನಿರ್ಧಾರ : ಸಚಿವ ಸುರೇಶ್ ಕುಮಾರ್ - Karavali Times 7,8 ನೇ ತರಗತಿಗೆ ಪರೀಕ್ಷೆ ಇಲ್ಲ, 9ನೇ ತರಗತಿಗೆ ಆಂತರಿಕ ಪರೀಕ್ಷೆ ನಿರ್ಣಾಯಕ, ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ ಬಗ್ಗೆ ಎ 14ರ ನಂತರ ನಿರ್ಧಾರ : ಸಚಿವ ಸುರೇಶ್ ಕುಮಾರ್ - Karavali Times

728x90

2 April 2020

7,8 ನೇ ತರಗತಿಗೆ ಪರೀಕ್ಷೆ ಇಲ್ಲ, 9ನೇ ತರಗತಿಗೆ ಆಂತರಿಕ ಪರೀಕ್ಷೆ ನಿರ್ಣಾಯಕ, ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ ಬಗ್ಗೆ ಎ 14ರ ನಂತರ ನಿರ್ಧಾರ : ಸಚಿವ ಸುರೇಶ್ ಕುಮಾರ್



ಬೆಂಗಳೂರು (ಕರಾವಳಿ ಟೈಮ್ಸ್) : ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಕೇಂದ್ರ ಸರ್ಕಾರದ ಆದೇಶದಂತೆ ದೇಶಾದ್ಯಂತ ಲಾಕ್‍ಡೌನ್ ಮಾಡಲಾಗಿದೆ. ರಾಜ್ಯದಲ್ಲೂ ಲಾಕ್‍ಡೌನ್ ಜಾರಿಯಲ್ಲಿರುವ ಕಾರಣ ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಬಗ್ಗೆ ಉಂಟಾಗಿರುವ ಕೆಲವು ಗೊಂದಲಗಳಿಗೆ ರಾಜ್ಯ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಇಂದು ಉತ್ತರ ನೀಡಿದ್ದಾರೆ.

7 ಹಾಗೂ 8ನೇ ತರಗತಿ ವಿದ್ಯಾರ್ಥಿಗಳಿಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಮುಂದಿನ ತರಗತಿಗೆ ಪದೋನ್ನತಿ ನೀಡಲಾಗುತ್ತದೆ. ಆದರೆ 9ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆಗಳ ಹಂತದಲ್ಲಿ ಆಂತರಿಕ ಪರೀಕ್ಷೆ ರೂಪಣಾತ್ಮಕ, ಮತ್ತು ಸಂಕಲನಾತ್ಮಕ ಪರೀಕ್ಷೆ ನಡೆಸಲಾಗಿದೆ. ಅದರ ಆಧಾರದಲ್ಲಿ 9ನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶ ನಿರ್ಧಾರವಾಗಲಿದೆ. ಒಂದು ವೇಳೆ ಶಾಲೆಯ ಆಂತರಿಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾಗದೇ ಇದ್ದರೆ ರಜೆ ಅವಧಿಯಲ್ಲಿ ವಿದ್ಯಾರ್ಥಿಯ ಕಲಿಕಾ ಮಟ್ಟ ಉತ್ತಮಗೊಳಿಸಬೇಕು. ಜೂನ್ ಒಳಗೆ ಫೇಲ್ ಆದ ವಿದ್ಯಾರ್ಥಿಗಳಿಗೆ ಮತ್ತೊಂದು ಪರೀಕ್ಷೆ ಕೊಡಬೇಕು. ನಂತರ ಅವರನ್ನು ಪಾಸ್ ಮಾಡುವ ನಿರ್ಧಾರವನ್ನು ಶಾಲೆಗಳು ತೆಗೆದುಕೊಳ್ಳಬೇಕು ಎಂದು ಸಚಿವರು ಸೂಚಿಸಿದ್ದಾರೆ.

ಎಸ್‍ಎಸ್‍ಎಲ್‍ಸಿ ಪರೀಕ್ಷೆ ರದ್ದು ಮಾಡಲ್ಲ. ಎಪ್ರಿಲ್ 14ರ ನಂತರ ಹೊಸ ವೇಳಾಪಟ್ಟಿ ಬಿಡುಗಡೆ ಮಾಡಲಾಗುತ್ತೆ. ಇತ್ತ ದ್ವಿತೀಯ ಪಿಯುಸಿ ಒಂದು ವಿಷಯದ ಪರೀಕ್ಷೆ ಬಾಕಿ ಇದೆ. ಅದನ್ನೂ ರದ್ದು ಮಾಡಲ್ಲ, ಎಪ್ರಿಲ್ 14ರ ನಂತರ ಆ ಪರೀಕ್ಷೆಯ ವೇಳಾಪಟ್ಟಿ ಪ್ರಕಟ ಮಾಡಲಾಗುತ್ತೆ. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಹಾಗೆಯೇ ವೇಳಾಪಟ್ಟಿ ಸಿದ್ಧ ಮಾಡಲಾಗುತ್ತೆ. ವಿದ್ಯಾರ್ಥಿಗಳಿಗೆ ಸಾಕಷ್ಟು ಸಮಯಾವಕಾಶವನ್ನೂ ನೀಡಲಾಗುತ್ತದೆ. ಎಪ್ರಿಲ್ 14ರ ನಂತರ ಪರಿಸ್ಥಿತಿ ನೋಡಿಕೊಂಡು ವೇಳಾಪಟ್ಟಿ ಪ್ರಕಟ ಮಾಡುತ್ತೇವೆ ಎಂದು ಸಚಿವ ಸುರೇಶ್ ಕುಮಾರ್ ಅವರು ಮಾಹಿತಿ ನೀಡಿದ್ದಾರೆ.

ಪರೀಕ್ಷೆ ಇಲ್ಲ ಎಂದು ಮಕ್ಕಳು ಹೊರಗೆ ಓಡಾಡೋ ಹಾಗೆ ಇಲ್ಲ. ಕೊರೊನಾ ಇದೆ ಮನೆಯಲ್ಲಿ ಇರಿ. ಪರೀಕ್ಷೆ ಇಲ್ಲವೆಂದು ಸುಮ್ಮನೆ ಇರಬೇಡಿ, ನಿಮಗೆ ಹಲವು ಒಳ್ಳೆಯ ವಿಷಯಗಳನ್ನು ಕಲಿಯಲು ಅವಕಾಶವಿದೆ. ಈ ಅವಕಾಶವನ್ನು ಉಪಯೋಗಿಸಿಕೊಳ್ಳಿ. ದೇಶ ಕೊರೊನಾ ವಿರುದ್ಧ ನಡೆಸುತ್ತಿರುವ ಹೋರಾಟಕ್ಕೆ ಸಹಕರಿಸಿ ಎಂದು ಸುರೇಶ್ ಕುಮಾರ್ ಅವರು ವಿದ್ಯಾರ್ಥಿಗಳಲ್ಲಿ ಇದೇ ವೇಳೆ ಮನವಿ ಮಾಡಿಕೊಂಡಿದ್ದಾರೆ. 
  • Blogger Comments
  • Facebook Comments

0 comments:

Post a Comment

Item Reviewed: 7,8 ನೇ ತರಗತಿಗೆ ಪರೀಕ್ಷೆ ಇಲ್ಲ, 9ನೇ ತರಗತಿಗೆ ಆಂತರಿಕ ಪರೀಕ್ಷೆ ನಿರ್ಣಾಯಕ, ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ ಬಗ್ಗೆ ಎ 14ರ ನಂತರ ನಿರ್ಧಾರ : ಸಚಿವ ಸುರೇಶ್ ಕುಮಾರ್ Rating: 5 Reviewed By: karavali Times
Scroll to Top