ಮೇ ತಿಂಗಳಿನಿಂದ ಪಡಿತರ ಅಕ್ಕಿ ಜೊತೆ ತೊಗರಿ ಬೇಳೆ ನೀಡಲು ಸರಕಾರ ಆದೇಶ - Karavali Times ಮೇ ತಿಂಗಳಿನಿಂದ ಪಡಿತರ ಅಕ್ಕಿ ಜೊತೆ ತೊಗರಿ ಬೇಳೆ ನೀಡಲು ಸರಕಾರ ಆದೇಶ - Karavali Times

728x90

16 April 2020

ಮೇ ತಿಂಗಳಿನಿಂದ ಪಡಿತರ ಅಕ್ಕಿ ಜೊತೆ ತೊಗರಿ ಬೇಳೆ ನೀಡಲು ಸರಕಾರ ಆದೇಶಬೆಂಗಳೂರು (ಕರಾವಳಿ ಟೈಮ್ಸ್) : ಕೊರೊನಾ ಲಾಕ್‍ಡೌನ್ ಅವಧಿ ಮುಂದುವರೆದಿರುವುದರಿಂದ ರಾಜ್ಯ ಸರಕಾರ ಎಪ್ರಿಲ್ ಮತ್ತು ಮೇ ತಿಂಗಳ ಅಕ್ಕಿ ಜೊತೆಗೆ ತೊಗರಿ ಬೇಳೆ ವಿತರಿಸಲು ಆದೇಶ ಹೊರಡಿಸಿದೆ.

ಕೇಂದ್ರ ಸರಕಾರ ಏಪ್ರಿಲ್, ಮೇ, ಜೂನ್ ತಿಂಗಳ ಅಕ್ಕಿ ಹಾಗೂ ತೊಗರಿ ಬೇಳೆಯನ್ನು ಬಿಡುಗಡೆ ಮಾಡಿದ್ದು, ರಾಜ್ಯದ ಅನ್ನಭಾಗ್ಯ ಫಲಾನುಭವಿಗಳಿಗೆ ಮೇ 1 ರಿಂದ ಪ್ರತಿ ತಿಂಗಳಿಗೆ 5 ಕೆಜಿ ಅಕ್ಕಿ ಹಾಗೂ ಒಂದು ಕೆಜಿ ತೊಗರಿ ಬೇಳೆಯನ್ನು ಉಚಿತವಾಗಿ ನೀಡುವಂತೆ ಆದೇಶ ಹೊರಡಿಸಲಾಗಿದೆ.

ಮೇ ಮೊದಲನೇ ತಾರೀಕಿನಿಂದ ಫಲಾನುಭವಿಗಳಿಗೆ ಎರಡು ತಿಂಗಳ ಪಡಿತರವನ್ನು ಏಕಕಾಲಕ್ಕೆ ವಿತರಿಸಲು ಸೂಚಿಸಲಾಗಿದ್ದು, ಅದಕ್ಕಾಗಿ ಎಪ್ರಿಲ್ 23ರೊಳಗೆ ಎಲ್ಲ ಆಹಾರ ಪದಾರ್ಥಗಳು ಗೋಡೌನ್‍ಗಳಿಗೆ ತಲುಪಿಸಲು ಸಾರಿಗೆ ವ್ಯವಸ್ಥೆ, ಕೂಲಿ ಕಾರ್ಮಿಕರಿಗೆ ಪಾಸ್ ವ್ಯವಸ್ಥೆಯನ್ನು ಮಾಡುವಂತೆ ಸೂಚಿಸಲಾಗಿದೆ. ಅಲ್ಲದೆ ಎಪ್ರಿಲ್ 25ರೊಳಗೆ ಎಲ್ಲ ನ್ಯಾಯಬೆಲೆ ಅಂಗಡಿಗಳಿಗೆ ತಲುಪಿಸಲು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

ಪಡಿತರ ಅಂಗಡಿಯವರು ಕೊರೊನಾ ಕುರಿತು ಕೇಂದ್ರ ಸರಕಾರ ನೀಡಿರುವ ಮಾರ್ಗಸೂಚಿಯಂತೆ ಫಲಾನುಭವಿಗಳಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಬೇಕು ಹಾಗೂ ತೂಕದಲ್ಲಿ ಮೋಸ ಮಾಡಿದರೆ ನ್ಯಾಯಬೆಲೆ ಅಂಗಡಿಯವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಆದೇಶದಲ್ಲಿ ತಿಳಿಸಲಾಗಿದೆ.
  • Blogger Comments
  • Facebook Comments

0 comments:

Post a Comment

Item Reviewed: ಮೇ ತಿಂಗಳಿನಿಂದ ಪಡಿತರ ಅಕ್ಕಿ ಜೊತೆ ತೊಗರಿ ಬೇಳೆ ನೀಡಲು ಸರಕಾರ ಆದೇಶ Rating: 5 Reviewed By: karavali Times
Scroll to Top