ಸಮಸ್ತ ಕೋಶಾಧಿಕಾರಿ, ಹಿರಿಯ ವಿದ್ವಾಂಸ ಶೈಖುನಾ ಸ್ವಾದಿಕ್ ಉಸ್ತಾದ್ ವಫಾತ್ - Karavali Times ಸಮಸ್ತ ಕೋಶಾಧಿಕಾರಿ, ಹಿರಿಯ ವಿದ್ವಾಂಸ ಶೈಖುನಾ ಸ್ವಾದಿಕ್ ಉಸ್ತಾದ್ ವಫಾತ್ - Karavali Times

728x90

15 April 2020

ಸಮಸ್ತ ಕೋಶಾಧಿಕಾರಿ, ಹಿರಿಯ ವಿದ್ವಾಂಸ ಶೈಖುನಾ ಸ್ವಾದಿಕ್ ಉಸ್ತಾದ್ ವಫಾತ್ಮಂಗಳೂರು (ಕರಾವಳಿ ಟೈಮ್ಸ್) :  ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕೋಶಾಧಿಕಾರಿ , ಜಂ-ಇಯ್ಯತ್ತುಲ್ ಮುಅಲ್ಲಿಮೀನ್ ಕೇಂದ್ರ ಸಮಿತಿ ಅಧ್ಯಕ್ಷರೂ, ಹಿರಿಯ ವಿದ್ವಾಂಸರೂ ಆಗಿರುವ ಶೈಖುನಾ ಸಿ.ಕೆ.ಎಂ. ಸ್ವಾದಿಕ್ ಮುಸ್ಲಿಯಾರ್  ಇಂದು ರಾತ್ರಿ 8-45 ಕ್ಕೆ  ಕೇರಳದ ಮನ್ನಾರ್ ಕಾಡ್ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

     ಅಪಾರ ವಿದ್ವತ್ತನ್ನು ಹೊಂದಿದ್ದ ಹಿರಿಯ ವಿದ್ವಾಂಸರಾದ ಸ್ವಾದಿಕ್ ಮುಸ್ಲಿಯಾರ್  "ಸಮಸ್ತ" ದ  ಧಾರ್ಮಿಕ, ಸಾಂಘಿಕ ,ಶೈಕ್ಷಣಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಇಂದು ಬೆಳಿಗ್ಗೆ ಅವರು ನೇತೃತ್ವ ನೀಡುವ  ಜಂಇಯ್ಯತ್ತುಲ್ ಮುಅಲ್ಲಿಮೀನ್ ವತಿಯಿಂದ ಕೋವಿಡ್-19 ನ ಲಾಕ್ ಡೌನ್ ನಿಂದಾಗಿ ಮದ್ರಸಗಳು ರಜೆಯಾಗಿ ಮನೆಯಲ್ಲಿರುವ ಸುಮಾರು 1 ಲಕ್ಷದಷ್ಟಿರುವ ಮದ್ರಸ ಅಧ್ಯಾಪಕರಿಗೆ ಸಹಾಯ ಹಸ್ತ ಎಂಬ ನೆಲೆಯಲ್ಲಿ ಸಂಘಟನೆಯ ವತಿಯಿಂದ ತಲಾ 1 ಸಾವಿರ ರೂಪಾಯಿ ನೀಡಲಾಗುವುದೆಂದು ಅವರು ಘೋಷಿಸಿದ್ದು ಗಮನಾರ್ಹ ವಾಗಿದೆ.

     ಉಸ್ತಾದ್ ರವರ ನಿಧನಕ್ಕೆ ಮುಶಾವರ ಸದಸ್ಯ ಬಂಬ್ರಾಣ ಉಸ್ತಾದ್, ಕರ್ನಾಟಕದ 'ಸಮಸ್ತ' ದ ಅಧೀನದ ವಿವಿಧ ಸಂಘಟನೆಗಳ ನಾಯಕರಾದ ಎಸ್.ಬಿ.ದಾರಿಮಿ, ಮೌಲನಾ ಯು.ಕೆ. ಅಬ್ದುಲ್ ಅಝೀಝ್ ದಾರಿಮಿ, ಕೆ.ಆರ್. ಹುಸೈನ್ ದಾರಿಮಿ, ಕೆ.ಎಲ್. ಉಮರ್ ದಾರಿಮಿ, ಕೆ.ಎಂ.ಎ. ಕೊಡುಂಗಾಯಿ, ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ, ಅಬ್ದುಲ್ ಹಕೀಂ ಪರ್ತಿಪ್ಪಾಡಿ, ಎಲ್.ಟಿ. ಅಬ್ದುಲ್ ರಝಾಕ್ ಹಾಜಿ , ರಫೀಕ್ ಹಾಜಿ ನೇರಳಕಟ್ಟೆ,ಕೆ.ಬಿ.ದಾರಿಮಿ, ರೆಂಜಾಡಿ ದಾರಿಮಿ, ಇಸ್ಮಾಯಿಲ್ ಯಮಾನಿ , ರಿಯಾಝುದ್ದೀನ್ ಹಾಜಿ ಮಂಗಳೂರು, ಅಬ್ದುಲ್ ರಹಿಮಾನ್ ಅಝಾದ್ ಉಮರ್ ದಾರಿಮಿ ಮುಫತ್ತಿಸ್, ಆಲಡ್ಕ ಎಸ್ಕೆಎಸ್ಸೆಸ್ಸೆಫ್ ಶಾಖಾಧ್ಯಕ್ಷ ಮುಹಮ್ಮದ್ ಹನೀಫ್ ಹಾಸ್ಕೋ, ಬಂಟ್ವಾಳ ತಾ.ಪಂ. ಉಪಾಧ್ಯಕ್ಷ ಬಿ.ಎಂ. ಅಬ್ಬಾಸ್ ಅಲಿ, ಬಂಟ್ವಾಳ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಸಜಿಪಮುನ್ನೂರು ಗ್ರಾ.ಪಂ. ಸದಸ್ಯ ಯೂಸುಫ್ ಕರಂದಾಡಿ, ಗುತ್ತಿಗೆದಾರ ಅಬ್ದುಲ್ ಖಾದರ್ ಹಾಜಿ ಟಿ.ಆರ್. ನಡುಪದವು, ಉದ್ಯಮಿ ಹಾಜಿ ಪಿ.ಎಸ್. ಅಬ್ದುಲ್ ಹಮೀದ್ ನೆಹರುನಗರ ಮೊದಲಾದ ಹಲವಾರು ಗಣ್ಯರು ಹಾಗೂ ಎಸ್.ವೈ.ಎಸ್. ದ.ಕ. ಜಿಲ್ಲಾ ಸಮಿತಿ ನಾಯಕರು ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಸಮಸ್ತ ಕೋಶಾಧಿಕಾರಿ, ಹಿರಿಯ ವಿದ್ವಾಂಸ ಶೈಖುನಾ ಸ್ವಾದಿಕ್ ಉಸ್ತಾದ್ ವಫಾತ್ Rating: 5 Reviewed By: karavali Times
Scroll to Top