10 ಸಂಖ್ಯೆಯ ಮೊಬೈಲ್ ಸಂಖ್ಯೆಯನ್ನು 11ಕ್ಕೇರಿಸಿದ ಟ್ರಾಯ್ : ಲ್ಯಾಂಡ್‍ಲೈನ್‍ನಿಂದ ಇನ್ನು ಕರೆ ಮಾಡುವಾಗ ‘0’ ಸೇರಿಸಬೇಕಾಗಿದೆ - Karavali Times 10 ಸಂಖ್ಯೆಯ ಮೊಬೈಲ್ ಸಂಖ್ಯೆಯನ್ನು 11ಕ್ಕೇರಿಸಿದ ಟ್ರಾಯ್ : ಲ್ಯಾಂಡ್‍ಲೈನ್‍ನಿಂದ ಇನ್ನು ಕರೆ ಮಾಡುವಾಗ ‘0’ ಸೇರಿಸಬೇಕಾಗಿದೆ - Karavali Times

728x90

30 May 2020

10 ಸಂಖ್ಯೆಯ ಮೊಬೈಲ್ ಸಂಖ್ಯೆಯನ್ನು 11ಕ್ಕೇರಿಸಿದ ಟ್ರಾಯ್ : ಲ್ಯಾಂಡ್‍ಲೈನ್‍ನಿಂದ ಇನ್ನು ಕರೆ ಮಾಡುವಾಗ ‘0’ ಸೇರಿಸಬೇಕಾಗಿದೆ



ನವದೆಹಲಿ (ಕರಾವಳಿ ಟೈಮ್ಸ್) : ಮೊಬೈಲ್ ಸಂಖ್ಯೆಗಳು ಪ್ರಸ್ತುತ ಇರುವ 10 ಸಂಖ್ಯೆ ಇನ್ನು ಮುಂದೆ 11ಕ್ಕೆ ಏರಿಸಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಶುಕ್ರವಾರ ಶಿಫಾರಸು ಮಾಡಿದೆ.

ಇದರಿಂದ ಈಗಿರುವ ಮೊಬೈಲ್ ಸಂಖ್ಯೆಯಲ್ಲಿ ಬೇರಾವುದೇ ವ್ಯತ್ಯಾಸವೇನೂ ಆಗುವುದಿಲ್ಲ. ಆದರೆ, ಸ್ಥಿರ ದೂರವಾಣಿಯಿಂದ ಮೊಬೈಲ್ ಸಂಖ್ಯೆಗೆ ಕರೆ ಮಾಡುವ ಮುನ್ನ ‘0 (ಸೊನ್ನೆ)’ ವನ್ನು ಡಯಲ್ ಮಾಡಬೇಕು ಎಂದು ತಿಳಿಸಿದೆ.

ಮೊಬೈಲ್‍ನಿಂದ ಮೊಬೈಲ್‍ಗೆ ಅಥವಾ ಮೊಬೈಲ್‍ನಿಂದ ಸ್ಥಿರ ದೂರವಾಣಿಗೆ ಕರೆ ಮಾಡುವಾಗ ‘0’ ಡಯಲ್ ಮಾಡುವ ಅಗತ್ಯವಿಲ್ಲ. ಲಭ್ಯವಿರುವ ಮೊಬೈಲ್ ಹಾಗೂ ಸ್ಥಿರ ದೂರವಾಣಿಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಳಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಟ್ರಾಯ್ ಈ ಶಿಫಾರಸು ಮಾಡಿದೆ. ಹಾಲಿ ಕಛೇರಿಯಲ್ಲಿ ನೆಟ್‍ವರ್ಕ್‍ನಲ್ಲಿರುವ ಲ್ಯಾಂಡ್‍ಲೈನ್‍ಗಳ ಮೂಲಕ ಮೊಬೈಲ್‍ಗೆ ಕರೆ ಮಾಡಲು ‘0’ ಡಯಲ್ ಮಾಡುವ ವ್ಯವಸ್ಥೆ ಇದೆ. 
  • Blogger Comments
  • Facebook Comments

0 comments:

Post a Comment

Item Reviewed: 10 ಸಂಖ್ಯೆಯ ಮೊಬೈಲ್ ಸಂಖ್ಯೆಯನ್ನು 11ಕ್ಕೇರಿಸಿದ ಟ್ರಾಯ್ : ಲ್ಯಾಂಡ್‍ಲೈನ್‍ನಿಂದ ಇನ್ನು ಕರೆ ಮಾಡುವಾಗ ‘0’ ಸೇರಿಸಬೇಕಾಗಿದೆ Rating: 5 Reviewed By: karavali Times
Scroll to Top