ಡಾ. ಎ. ಪಿ. ಜೆ. ಅಬ್ದುಲ್ ಕಲಾಂ ಫೌಂಡೇಶನ್‍ನಿಂದ ರಾಷ್ಟೀಯ ಪ್ರಶಸ್ತಿಗೆ ಅರ್ಜಿ ಆಹ್ವಾನ - Karavali Times ಡಾ. ಎ. ಪಿ. ಜೆ. ಅಬ್ದುಲ್ ಕಲಾಂ ಫೌಂಡೇಶನ್‍ನಿಂದ ರಾಷ್ಟೀಯ ಪ್ರಶಸ್ತಿಗೆ ಅರ್ಜಿ ಆಹ್ವಾನ - Karavali Times

728x90

7 May 2020

ಡಾ. ಎ. ಪಿ. ಜೆ. ಅಬ್ದುಲ್ ಕಲಾಂ ಫೌಂಡೇಶನ್‍ನಿಂದ ರಾಷ್ಟೀಯ ಪ್ರಶಸ್ತಿಗೆ ಅರ್ಜಿ ಆಹ್ವಾನ




ಮಂಗಳೂರು (ಕರಾವಳಿ ಟೈಮ್ಸ್) : ಡಾ. ಎ. ಪಿ. ಜೆ. ಅಬ್ದುಲ್ ಕಲಾಂ ಫೌಂಡೇಶನ್ ವತಿಯಿಂದ ಕೊಡಲಾಗುವ 2020-21ನೇ ಸಾಲಿನ ರಾಷ್ಟೀಯ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ಜೂನ್ 25ರೊಳಗೆ ಅರ್ಜಿ ಸಲ್ಲಿಸುವಂತೆ ಫೌಂಡೇಶನ್ ಅಧ್ಯಕ್ಷ  ಎಂ.ಡಿ. ಜಹಾಂಗೀರ ಅಲಿ ಹಾಗೂ ದ.ಕ. ಜಿಲ್ಲಾ ಸಂಚಾಲಕ ಆಶಿಕ್ ಅಲಿ ಪುತ್ತೂರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸುಮಾರು 30 ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ರಾಷ್ಟೀಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವದು. ಪ್ರತಿಯೊಂದು ಕ್ಷೇತ್ರದಲ್ಲಿ 3 ಸಾಧಕರನ್ನು ಪ್ರಶಸ್ತಿ ಗೆ ಆಯ್ಕೆ ಮಾಡಲಾಗುವುದು. ಪತ್ರಿಕೋದ್ಯಮ, ಮಹಿಳಾ ಶಿಕ್ಷಣದ ತಲಾ 15 ವಿದ್ಯಾರ್ಥಿ ಸಾಧಕರನ್ನು ಗುರುತಿಸಲಾಗುವುದು. ಆಯಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರು “ಎಂ.ಡಿ. ಜಹಾಂಗೀರ, ಅದ್ಯಕ್ಷರು, ಡಾ. ಎಪಿಜೆ ಅಬ್ದುಲ್ ಕಲಾಂ ಫೌಂಡೇಶನ್, ಮೆಗುರೆ ಆಸ್ಪತ್ರೆ ಹತ್ತಿರ. ಮುಖ್ಯ ರಸ್ತೆ ಬಸವಕಲ್ಯಾಣ. ಪಿನ್-585327. ಮೊ : 7026786321 ಈ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು.

ಕ್ಷೇತ್ರದ ವಿವರಣೆ


1. ಆರೂಢ ರತ್ನಶ್ರೀ - ಜ್ಞಾನದ ಮಾರ್ಗದÀರ್ಶನ ನೀಡುವ ಸ್ವಾಮೀಜಿಯವರಿಗೆ
2. ಬಸವ ಭೂಷಣ - ಶಾಸ್ತ್ರಿಗಳಿಗೆ
3. ಜ್ಞಾನರತ್ನ - ಸಾಹಿತ್ಯ ಕ್ಷೇತ್ರ
4. ನ್ಯಾಯರತ್ನ - ನ್ಯಾಯಾಂಗ ಕ್ಷೇತ್ರ
5. ವಿದ್ಯಾರತ್ನ - ಶಿಕ್ಷಣ ಕ್ಷೇತ್ರ
6. ಕರ್ನಾಟಕ ರತ್ನ - ಪ್ರಾಮಾಣಿಕ ಅಧಿಕಾರಿಗಳಿಗೆ.
7. ನಾದ ರತ್ನ - ಸಂಗೀತ ಕ್ಷೇತ್ರ
8. ಕಾಯಕ ರತ್ನ - ಕೃಷಿ ಕ್ಷೇತ್ರ.
9. ಪರಿಸರ ರತ್ನ - ಪರಿಸರ ಕ್ಷೇತ್ರ
10. ಕ್ರೀಡಾ ರತ್ನ - ಕ್ರೀಡಾ ಕ್ಷೇತ್ರ
11. ಕಲಾ ರತ್ನ - ಯಕ್ಷಗಾನ ಕ್ಷೇತ್ರ
12. ಕಲಾಭೂಷಣ - ಚಲನಚಿತ್ರ ಕ್ಷೇತ್ರ.
13. ಕಲಾ ಕಾಯಕಶ್ರೀ -ರಂಗಭೂಮಿ ಕ್ಷೇತ್ರ
14. ಕಲಾ ಜ್ಞಾನಿ - ಶಿಲ್ಪ ಕಲೆ ಕ್ಷೇತ್ರ.
15. ಜ್ಞಾನ ದರ್ಶನ ವಾಣಿ - ಜನಪದ ಕ್ಷೇತ್ರ.
16. ಕಲಾ ಮಾಣಿಕ್ಯ - ಚಿತ್ರಕಲೆ
17. ಶ್ರೇಷ್ಠ ರತ್ನಶ್ರೀ - ಸಂಘ ಸಂಸ್ಥೆ ಕ್ಷೇತ್ರ
18. ಸೇವಾರತ್ನ - ಸಮಾಜಸೇವೆ
19. ಮಾಧ್ಯಮ ರತ್ನ - ಪತ್ರಿಕೋದ್ಯಮ.
20. ಕಾಯಕ ರತ್ನ - ಜನಪ್ರತಿನಿಧಿಗಳು
21. ಸರ್ವ ಶ್ರೇಷ್ಠ ಮಾಣಿಕ್ಯ - ವೀರಯೋಧರಿಗೆ
22. ಶಾಂತಿಭೂಷಣ - ಪೊಲೀಸ್ ಇಲಾಖೆಗೆ
23. ಬಸವರತ್ನ ಶ್ರೀ - ಉದ್ಯಮಿಗಳಿಗೆ
24. ಅಂಚೆ ರತ್ನ - ಅಂಚೆ ಇಲಾಖೆಗೆ
25. ವಿದ್ಯಾ ಕುಸುಮ - ಆದರ್ಶ ವಿದ್ಯಾರ್ಥಿಗಳಿಗೆ
26. ಜನಸ್ನೇಹಿ - ಆಟೋ ಚಾಲಕರಿಗೆ
27. ವೈದ್ಯ ರತ್ನ - ಆದರ್ಶ ವೈದ್ಯರಿಗೆ
28. ಗ್ರಾಮ ರತ್ನ - ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ/ ಗ್ರಾಮ ಪಂಚಾಯತ್ ಸದಸ್ಯರಿಗೆ
29. ಕನ್ನಡ ರತ್ನ - ಕನ್ನಡ ಸಂಘಟನೆ ಕ್ಷೇತ್ರ
30. ವೀರ ವನಿತೆ - ವೀರ ಮಹಿಳೆಯರಿಗೆ

    ಈ ಮೇಲ್ಕಾಣಿಸಿದ ವಿವಿಧ ಕ್ಷೇತ್ರಗಳಲ್ಲಿ ಸಾಧಕರನ್ನ ಆಯ್ಕೆಮಾಡಲಾಗುವುದು. ಅರ್ಜಿಯನ್ನ ಅಂಚೆ ಅಥವಾ ಕೊರಿಯರ್ ಮೂಲಕ ಮಾತ್ರ ಕಳುಹಿಸತಕ್ಕದ್ದು ಎಂದವರು ತಿಳಿಸಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಡಾ. ಎ. ಪಿ. ಜೆ. ಅಬ್ದುಲ್ ಕಲಾಂ ಫೌಂಡೇಶನ್‍ನಿಂದ ರಾಷ್ಟೀಯ ಪ್ರಶಸ್ತಿಗೆ ಅರ್ಜಿ ಆಹ್ವಾನ Rating: 5 Reviewed By: karavali Times
Scroll to Top