ದುಬೈಯಿಂದ ಮೊದಲ ವಿಮಾನ ಮಂಗಳೂರಿಗೆ : ತಾಯ್ನಾಡು ಸೇರಿಕೊಂಡ 177 ಮಂದಿ ಪ್ರಯಾಣಿಕರು - Karavali Times ದುಬೈಯಿಂದ ಮೊದಲ ವಿಮಾನ ಮಂಗಳೂರಿಗೆ : ತಾಯ್ನಾಡು ಸೇರಿಕೊಂಡ 177 ಮಂದಿ ಪ್ರಯಾಣಿಕರು - Karavali Times

728x90

12 May 2020

ದುಬೈಯಿಂದ ಮೊದಲ ವಿಮಾನ ಮಂಗಳೂರಿಗೆ : ತಾಯ್ನಾಡು ಸೇರಿಕೊಂಡ 177 ಮಂದಿ ಪ್ರಯಾಣಿಕರು








ಮಂಗಳೂರು (ಕರಾವಳಿ ಟೈಮ್ಸ್) : ಯುಎಇ ರಾಷ್ಟ್ರದಲ್ಲಿ ಕೊರೋನಾ ಸಂಕಷ್ಟದಿಂದ ಬಾಕಿಯಾಗಿದ್ದ ಕರಾವಳಿಗರ ಮೊದಲ ತಂಡ ಇದೀಗ ವಿಶೇಷ ವಿಮಾನದ ಮೂಲಕ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು.

    ಮೊದಲ ತಂಡದಲ್ಲಿ ಒಟ್ಟು 177 ಮಂದಿ ಪ್ರಯಾಣಿಕರಿದ್ದು, ಇದರಲ್ಲಿ 88 ಮಂದಿ ಪುರುಷರು, 84 ಮಹಿಳೆಯರು, ಐದು ಮಂದಿ ಮಕ್ಕಳು, ಎರಡು ನವಜಾತ ಶಿಶುಗಳು ಒಳಗೊಂಡಿದೆ. ಇವರಲ್ಲಿ 38 ಗರ್ಭಿಣಿಯರು ಸೇರಿದ್ದಾರೆ.

    ದೇಶದಲ್ಲಿ ಲಾಕ್‍ಡೌನ್ ಘೋಷಣೆಯಾದ ಬಳಿಕ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮೊದಲ ವಿಮಾನ ಇದಾಗಿದೆ. ಜಗತ್ತಿನೆಲ್ಲೆಡೆ ಕೊರೊನಾ ವ್ಯಾಪಿಸಿದ ಬಳಿಕ ಭಾರತೀಯ ಮೂಲದವರು ಅದರಲ್ಲೂ ಕರಾವಳಿಯವರು ವಿವಿಧ ರಾಷ್ಟ್ರಗಳಲ್ಲಿ ಸಂಕಷ್ಟಕ್ಕೀಡಾಗಿದ್ದಾರೆ. ಅವರನ್ನು ಹಂತ ಹಂತವಾಗಿ ಕರೆ ತರುವ ಪ್ರಯತ್ನಿಗಳು ನಿರಂತರವಾಗಿ ನಡೆಸಲಾಗುತ್ತಿದೆ. ಇದೀಗ ದುಬೈನಲ್ಲಿ ಬಾಕಿಯಾಗಿರುವ ಕರಾವಳಿಗರನ್ನೊಳಗೊಂಡ ವಿಮಾನ ಮಂಗಳೂರು ತಲುಪಿದ್ದು, ಪ್ರಯಾಣಿಕರು ಮಂಗಳೂರಿನಲ್ಲಿ ಬಂದಿಳಿದಿದ್ದಾರೆ. ಇನ್ನು ಆಗಮಿಸಿದ ಎಲ್ಲಾ ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ.

    ಆಗಮಿಸಿದವರಲ್ಲಿ ಪ್ರಮುಖವಾಗಿ 12 ಮಂದಿ ಮೆಡಿಕೆಲ್ ಎಮರ್ಜೆನ್ಸಿಯವರಾಗಿದ್ದಾರೆ. 38 ಮಂದಿ ಗರ್ಭಿಣಿಯರಾಗಿದ್ದು, ಉಳಿದಂತೆ ಉದ್ಯೋಗ ಕಳೆದುಕೊಂಡವರು, ವಿಸಾ ಅವಧಿ ಮುಗಿದವರು, ಕೌಟುಂಬಿಕ ವೈದ್ಯಕೀಯ ಅಗತ್ಯತೆ ಹಿನ್ನೆಲೆ ಉಳ್ಳವರಾಗಿದ್ದಾರೆ.

    ದುಬೈಯಿಂದ ಸಂಜೆ ಹೊರಟ ವಿಮಾನ ರಾತ್ರಿ 10.10ಕ್ಕೆ ಮಂಗಳೂರು ನಿಲ್ದಾಣದಲ್ಲಿ ಬಂದಿಳಿದಿದೆ. ನಿಲ್ದಾಣದಲ್ಲಿಳಿದ ಪ್ರಯಾಣಿಕರಿಗೆ ಹಣ ವರ್ಗಾವಣೆ, ಸಿಮ್ ವಿತರಣೆ, ಆರೋಗ್ಯ ಕಿಟ್ ವಿತರಣೆ, ಉಪಹಾರ ವ್ಯವಸ್ಥೆ ಮಾಡಲಾಗಿದೆ. ಬಳಿಕ ಆರೋಗ್ಯ ಇಲಾಖೆಯ ತಪಾಸಣಾ ತಂಡದಿಂದ ಪ್ರತೀ ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಲಾಗಿದೆ. ಪ್ರಯಾಣಿಕರಿಗೆ ಸ್ಟಾಂಪಿಂಗ್ ಮಾಡಿ, ಇಮಿಗ್ರೇಷನ್ ಪ್ರಕ್ರಿಯೆ ನಡೆಸಲಾಗಿದೆ.
  • Blogger Comments
  • Facebook Comments

0 comments:

Post a Comment

Item Reviewed: ದುಬೈಯಿಂದ ಮೊದಲ ವಿಮಾನ ಮಂಗಳೂರಿಗೆ : ತಾಯ್ನಾಡು ಸೇರಿಕೊಂಡ 177 ಮಂದಿ ಪ್ರಯಾಣಿಕರು Rating: 5 Reviewed By: karavali Times
Scroll to Top