ಮಂಗಳೂರು ನಗರದಲ್ಲಿ ಅವಾಂತರ ಸೃಷ್ಟಿಸಿದ್ದ ಕಾಡುಕೋಣ ಓವರ್ ಡೋಸ್ ನಿಂದ ಸಾವು? - Karavali Times ಮಂಗಳೂರು ನಗರದಲ್ಲಿ ಅವಾಂತರ ಸೃಷ್ಟಿಸಿದ್ದ ಕಾಡುಕೋಣ ಓವರ್ ಡೋಸ್ ನಿಂದ ಸಾವು? - Karavali Times

728x90

5 May 2020

ಮಂಗಳೂರು ನಗರದಲ್ಲಿ ಅವಾಂತರ ಸೃಷ್ಟಿಸಿದ್ದ ಕಾಡುಕೋಣ ಓವರ್ ಡೋಸ್ ನಿಂದ ಸಾವು?



ಮಂಗಳೂರು (ಕರಾವಳಿ ಟೈಮ್ಸ್) : ಕಾಡು ಬಿಟ್ಟು ಮಂಗಳೂರು ನಗರದೊಳಗೆ ಆಗಮಿಸಿದ್ದ ಕಾಡುಕೋಣ ಸಾವನ್ನಪ್ಪಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಕಾಡುಕೋಣವನ್ನು ಸೆರೆ ಹಿಡಿಯಲು ನೀಡಿದ್ದ ಅರಿವಳಿಕೆ ಮದ್ದು ಓವರ್ ಡೋಸ್ ಆಗಿರುವ ಕಾರಣ ಸಾವನ್ನಪ್ಪಿದೆ ಎಂದು ಶಂಕಿಸಲಾಗಿದೆ.
ಕೊರೊನಾ ಲಾಕ್‍ಡೌನ್‍ನಿಂದಾಗಿ ಖಾಲಿ ಖಾಲಿಯಾಗಿದ್ದ ಮಂಗಳೂರು ನಗರಕ್ಕೆ ಕಾಡಿನಿಂದ ಇಂದು ಮುಂಜಾನೆ ಆಗಮಿಸಿದ್ದ ಕಾಡುಕೋಣ ಜನರಲ್ಲಿ ಆತಂಕ ಸೃಷ್ಟಿಸಿತ್ತು. ಕಳೆದ ಕೆಲ ದಿನದಿಂದ ನಿಶ್ಯಬ್ದದಿಂದ ಇದ್ದ ನಗರವವೂ ಕಾಡೆಂದುಕೊಂಡು ಆಗಮಿಸಿದ್ದ ಕಾಡುಕೋಣ ಇಂದು ಬೆಳ್ಳಂಬೆಳಗ್ಗೆ ಪ್ರತ್ಯಕ್ಷಗೊಂಡಿತ್ತು.
 ನಗರದ ಬಿಜೈ, ಅಳಕೆ, ಮಣ್ಣುಗುಡ್ಡೆ ಪರಿಸರದಲ್ಲಿ ತನ್ನ ರಂಪಾಟವನ್ನು ತೋರಿಸಿತ್ತು. ರಸ್ತೆಯಲ್ಲಿದ್ದ ಹಲವು ಕಾರುಗಳಿಗೆ ಹಾನಿಯನ್ನು ಉಂಟು ಮಾಡಿತ್ತು.
ಇತ್ತ ಕಾಡುಕೋಣದ ಆರ್ಭಟಕ್ಕೆ ಆತಂಕಗೊಂಡಿದ್ದ ಜನ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳೀಯರ ಸಹಕಾರದಿಂದ ಕೊನೆಗೂ 2 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಮಣ್ಣಗುಡ್ಡೆಯಲ್ಲಿ ಕಾಡುಕೋಣವನ್ನು ಸೆರೆಹಿಡಿದಿದ್ದರು. ಆದರೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಭಯಂಕರವಾಗಿ ಓಡುತ್ತಿದ್ದ ಕಾಡುಕೋಣಕ್ಕೆ ಎರಡು ಬಾರಿ ಅರಿವಳಿಕೆ ಚುಚ್ಚುಮದ್ದು ನೀಡಿ ನಿಯಂತ್ರಣಕ್ಕೆ ತಂದಿದ್ದರು. ಪರಿಣಾಮ ಅರಿವಳಿಕೆ ಮದ್ದು ಓವರ್ ಡೋಸ್ ಆಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಬೇಜವಾಬ್ದಾರಿಗೆ ಕಾಡುಕೋಣ ಪ್ರಾಣ ತೆತ್ತಿದೆ ಎಂದು ಆರೋಪಿಸಲಾಗಿದೆ.
  • Blogger Comments
  • Facebook Comments

0 comments:

Post a Comment

Item Reviewed: ಮಂಗಳೂರು ನಗರದಲ್ಲಿ ಅವಾಂತರ ಸೃಷ್ಟಿಸಿದ್ದ ಕಾಡುಕೋಣ ಓವರ್ ಡೋಸ್ ನಿಂದ ಸಾವು? Rating: 5 Reviewed By: karavali Times
Scroll to Top