ಕೇರಳ ಸರಕಾರದಿಂದ ಮತ್ತೊಂದು ಮಹತ್ವದ ಯೋಜನೆಗೆ ರೂಪುರೇಷೆ ಸಿದ್ದ : ದೇಶದಲ್ಲೇ ಮೊದಲ ಬಾರಿಗೆ ಬಡವರಿಗೆ ಉಚಿತ ಇಂಟರ್‍ನೆಟ್! - Karavali Times ಕೇರಳ ಸರಕಾರದಿಂದ ಮತ್ತೊಂದು ಮಹತ್ವದ ಯೋಜನೆಗೆ ರೂಪುರೇಷೆ ಸಿದ್ದ : ದೇಶದಲ್ಲೇ ಮೊದಲ ಬಾರಿಗೆ ಬಡವರಿಗೆ ಉಚಿತ ಇಂಟರ್‍ನೆಟ್! - Karavali Times

728x90

31 May 2020

ಕೇರಳ ಸರಕಾರದಿಂದ ಮತ್ತೊಂದು ಮಹತ್ವದ ಯೋಜನೆಗೆ ರೂಪುರೇಷೆ ಸಿದ್ದ : ದೇಶದಲ್ಲೇ ಮೊದಲ ಬಾರಿಗೆ ಬಡವರಿಗೆ ಉಚಿತ ಇಂಟರ್‍ನೆಟ್!



ಕೊಚ್ಚಿನ್ (ಕರಾವಳಿ ಟೈಮ್ಸ್) : ಹಲವು ಯೋಜನೆಗಳನ್ನು ಜನರಿಗೆ ಅರ್ಪಿಸಿ ಪ್ರಸಿದ್ದಿ ಪಡೆದಿರುವ ಕೇರಳ ಸರಕಾರ ಇದೀಗ ಮತ್ತೊಂದು ಮಹತ್ವದ ಯೋಜನೆಗೆ ರೂಪುರೇಷೆ ಸಿದ್ದಪಡಿಸಿದೆ. ಈಗಾಲೇ ಹಲವು ಮೊದಲುಗಳಿಗೆ ಸಾಕ್ಷಿಯಾಗಿರುವ ಕೇರಳ ಇದೀಗ ದೇಶದಲ್ಲಿಯೇ ಇದೇ ಮೊದಲ ಬಾರಿಗೆ ಬಡವರಿಗೆ ಉಚಿತ ಇಂಟರ್‍ನೆಟ್ ಕಲ್ಪಿಸುವ ಯೋಜನೆಯನ್ನು ಘೋಷಿಸಿದೆ.

ಕೇರಳ ಸರಕಾರ ತನ್ನ ಮಹತ್ವಾಕಾಂಕ್ಷೆಯ ಕೇರಳ ಫೈಬರ್ ಆಪ್ಟಿಕ್ ನೆಟ್‍ವರ್ಕ್ (ಕೆ-ಫೆÇೀನ್) ಯೋಜನೆಯನ್ನು ಪ್ರಕಟಿಸಿದ್ದು, ಬಡವರಿಗೆ ಉಚಿತ ಇಂಟರ್ನೆಟ್ ಒದಗಿಸುವುದು ಇದರ ಉದ್ದೇಶವಾಗಿದೆ. ಇದೇ ಡಿಸೆಂಬರ್ ವೇಳೆಗೆ ಇದನ್ನು ಪ್ರಾರಂಭಿಸುವ ಬಗ್ಗೆ ಯೋಜನೆ ರೂಪಿಸಲಾಗುತ್ತಿದೆ. ಈ  ಬಗ್ಗೆ ಮಾಹಿತಿ ನೀಡಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಅಂತರ್ಜಾಲ ನಾಗರಿಕರ ಮೂಲಭೂತ ಹಕ್ಕು, ಅದಕ್ಕಾಗಿ ಕೆ-ಫೆÇೀನ್ ಯೋಜನೆಯನ್ನು ಬಡವರಿಗೆ ಉತ್ತಮ ಗುಣಮಟ್ಟದ ಅಂತರ್ಜಾಲ ಒದಗಿಸಲು ಮತ್ತು ರೈತರಿಗೆ ಕೈಗೆಟಕುವ ದರದಲ್ಲಿ ನೀಡಲು ಜಾರಿಗೆ ತರಲಾಗುತ್ತಿದೆ. ಭಾರತದ ಯಾವುದೇ ರಾಜ್ಯ ಇದುವರೆಗೂ ಇಂತಹ ಒಂದು ಯೋಜನೆಯನ್ನು ಜಾರಿಗೊಳಿಸಿಲ್ಲ. ಮೊದಲ ಬಾರಿಗೆ ಕೇರಳದಲ್ಲಿ ಈ ಯೋಜನೆಯನ್ನು ಜಾರಿಗೊಳ್ಳಿಸಲಾಗುತ್ತಿದೆ ಎಂದಿದ್ದಾರೆ.

ಈ ಬಗ್ಗೆ ಕನ್ಸೋರ್ಟಿಯಂ ಮುಖ್ಯಸ್ಥ ಬಿಇಎಲ್ ಸಿಎಂಡಿ ಎಂ.ವಿ. ಗೌತಮ್ ಅವರೊಂದಿಗೆ ತಾವು ಚರ್ಚಿಸಿದ್ದು, 1,500 ಕೋಟಿ ರೂಪಾಯಿಗಳ ಈ ಯೋಜನೆಯನ್ನು ಅನುಷ್ಠಾನಗೊಳಿಸುವ ಕಂಪನಿಗಳ ಒಕ್ಕೂಟದ ಮುಖ್ಯಸ್ಥರೊಂದಿಗೆ ಸಭೆ ನಡೆಸಿ, ಬಡವರಿಗೆ ಉತ್ತಮ ಗುಣಮಟ್ಟದ  ಉಚಿತ ಇಂಟರ್ನೆಟ್ ಸೇವೆ ನೀಡಲಾಗುವುದು. ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಘೋಷಿಸಲಾಗಿರುವ ಲಾಕ್‍ಡೌನ್‍ನಿಂದಾಗಿ ಈ ಯೋಜನೆ ಜಾರಿ ವಿಳಂಬವಾಗಿದೆ. ಆದರೂ ಇದೇ ವರ್ಷ ಡಿಸೆಂಬರ್ ವೇಳೆಗೆ ಯೋಜನೆಯನ್ನು ಪೂರ್ಣಗೊಳಿಸುತ್ತೇವೆ ಎಂದವರು ಭರವಸೆ  ನೀಡಿದ್ದಾರೆ. ಈ ಒಕ್ಕೂಟವು ಹಲವಾರು ಸಾರ್ವಜನಿಕ ವಲಯದ ಕಂಪೆನಿಗಳನ್ನು ಒಳಗೊಂಡಿದೆ. ಖಾಸಗಿ ಕಂಪೆನಿಗಳಾದ ಎಸ್‍ಆರ್‍ಐಟಿ ಮತ್ತು ಎಲ್‍ಎಸ್ ಕೇಬಲ್‍ಗಳ ಜೊತೆಗೆ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮತ್ತು ರೈಲ್ಟೆಲ್ ಇದರಲ್ಲಿ ಸಹಭಾಗಿತ್ವ ಹೊಂದಿದೆ ಎಂದು ಸಿಎಂ ಪಿಣರಾಯಿ ವಿಜಯನ್ ಮಾಹಿತಿ ನೀಡಿದ್ದಾರೆ.

ಈ ಯೋಜನೆ ರಾಜ್ಯದ ಪಾಲಿಗೆ ಲಾಭದಾಯಕವಾಗಲಿದ್ದು, ಸ್ಟೇಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಹಾಗೂ ಕೇರಳ ಸ್ಟೇಟ್ ಎಲೆಕ್ಟ್ರಿಸಿಟಿ ಬೋರ್ಡ್‍ಗಳು ಕಾರ್ಯಾನ್ವಿತಗೊಳಿಸಿದ್ದು, ರಾಜ್ಯಾದ್ಯಂತ ಇರುವ ಕೆಎಸ್‍ಇಬಿ ಪೆÇೀಸ್ಟ್‍ಗಳನ್ನು ಬಳಸಿ ಆಪ್ಟಿಕಲ್ ಫೈಬರ್ ಕೇಬಲ್‍ನ್ನು ಅಳವಡಿಸಲಾಗಿದೆ. ಕೆ-ಫೋನ್ ನೆಟ್ವರ್ಕ್ ರಾಜ್ಯದ ಶಾಲೆಗಳು, ಆಸ್ಪತ್ರೆಗಳು, ಸರಕಾರಿ ಕಛೇರಿಗಳು ಹಾಗೂ ಇತರ ಸಂಸ್ಥೆಗಳಿಗೆ ಇಂಟರ್ನೆಟ್ ಸೌಕರ್ಯ ಒದಗಿಸಲಿದೆ. ಇದಲ್ಲದೆ ಈಗಾಗಲೇ ರಾಜ್ಯ ನಿರ್ಧರಿಸಿರುವ ಜ್ಞಾನಾಧಾರಿತ ಆರ್ಥಿಕ ವ್ಯವಸ್ಥೆಗೆ ಬಲ ನೀಡಲಿದೆ. ಕೋವಿಡ್-19 ನಂತರದ ಕಾಲದಲ್ಲಿ  ಇಂಟರ್ನೆಟ್ ಸೇವೆಗೆ ಹೆಚ್ಚಿನ ಒತ್ತು ನೀಡುವ ಅವಶ್ಯಕತೆ ಇದ್ದು, ಇದರಿಂದ ಶಾಲೆಗಳು ಹಾಗೂ ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಇಂಟರ್ನೆಟ್ ಬಳಕೆ ಹೆಚ್ಚಾಗಲಿದೆ ಎಂದವರು ಹೇಳಿದ್ದಾರೆ.
  • Blogger Comments
  • Facebook Comments

0 comments:

Post a comment

Item Reviewed: ಕೇರಳ ಸರಕಾರದಿಂದ ಮತ್ತೊಂದು ಮಹತ್ವದ ಯೋಜನೆಗೆ ರೂಪುರೇಷೆ ಸಿದ್ದ : ದೇಶದಲ್ಲೇ ಮೊದಲ ಬಾರಿಗೆ ಬಡವರಿಗೆ ಉಚಿತ ಇಂಟರ್‍ನೆಟ್! Rating: 5 Reviewed By: karavali Times
Scroll to Top